ಆ್ಯಪ್ನಗರ

ವೀರಭದ್ರೇಶ್ವರ ಜಾತ್ರೆ ನಾಳೆಯಿಂದ

ಹಂಸಭಾವಿ: ಗ್ರಾಮದ ಶ್ರೀ ವೀರಭದ್ರೇಶ್ವರ ಮತ್ತು ಶ್ರೀ ಹೊಳಬಸವೇಶ್ವರ ಸ್ವಾಮಿಗಳ ಜಾತ್ರಾ ಮಹೋತ್ಸವ ಏ.17 ರಿಂದ 19 ರವರೆಗೆ ನಡೆಯಲಿದೆ.

Vijaya Karnataka 16 Apr 2019, 5:00 am
ಹಂಸಭಾವಿ: ಗ್ರಾಮದ ಶ್ರೀ ವೀರಭದ್ರೇಶ್ವರ ಮತ್ತು ಶ್ರೀ ಹೊಳಬಸವೇಶ್ವರ ಸ್ವಾಮಿಗಳ ಜಾತ್ರಾ ಮಹೋತ್ಸವ ಏ.17 ರಿಂದ 19 ರವರೆಗೆ ನಡೆಯಲಿದೆ.
Vijaya Karnataka Web the veerabhadreshwar fair is tomorrow
ವೀರಭದ್ರೇಶ್ವರ ಜಾತ್ರೆ ನಾಳೆಯಿಂದ


ಏ.17 ರಂದು ಸಂಜೆ ಶ್ರೀ ಹೊಳಬಸವೇಶ್ವರ ಮತ್ತು ಶ್ರೀ ವೀರಭದ್ರೇಶ್ವರ ಮೆರವಣಿಗೆ ಗ್ರಾಮದ ಬೀದಿಗಳಲ್ಲಿ ಸಂಚರಿಸಿಸುವುದು. ಹೊಳಬಸವೇಶ್ವರ ದೇವಸ್ಥಾನ ತಲುಪಿದ ನಂತರ ಮಡ್ಲೂರಿನ ಮುರುಘಾಮಠದ ಶ್ರೀ ಮುರುಘರಾಜೇಂದ್ರ ಮಹಾಸ್ವಾಮಿಗಳ ಸಮ್ಮುಖದಲ್ಲಿ ರುದ್ರಾಭಿಷೇಕ, ಕಂಕಧಾರಣೆ ಮತ್ತು ಕಳಸ ಪೂಜೆ ನೆರವೇರಲಿದೆ.

ಏ.17 ರಂದು ಸಂಜೆ 6 ಕ್ಕೆ ನೂತನ ರಥದ ಲೋಕಾರ್ಪಣೆ ಹಾಗೂ ಧರ್ಮಸಭೆ ನಡೆಯಲಿದೆ. ಏ.18 ರಂದು ಬೆಳಿಗ್ಗೆ ಹೂವಿನ ರಥೋತ್ಸವ ನಡೆಯಲಿದೆ. ಏ.19 ರಂದು ಬೆಳಿಗ್ಗೆ ವೀರಭದ್ರೇಶ್ವರ ದೇವಸ್ಥಾನದಿಂದ ಹಿರೆಮತ್ತೂರಿನ ಪುರವಂತರಾದ ವೀರಭದ್ರಾಚಾರ್ಯ ಫಕ್ಕೀರಾಚಾರ್ಯ ಸಂಗಡಿಗರಿಂದ ಗುಗ್ಗಳ ಹೊರಟು ಹೊಳಬಸವೇಶ್ವರ ದೇವಸ್ಥಾನ ತಲುಪಿದ ನಂತರ ಮಹಾ ರಥೋತ್ಸವ ನಡೆಯಲಿದೆ.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ