ಆ್ಯಪ್ನಗರ

ಬರವಿದ್ದರೂ ಇಲ್ಲಿ ನೀರು ಸಮೃದ್ಧ

ತುಮ್ಮಿನಕಟ್ಟಿ: ರಾಜ್ಯಾದ್ಯಂತ ಮಳೆ ಕೊರತೆ, ಕುಡಿಯುವ ನೀರಿಗೆ ಹಾಹಾಕಾರ ಎದ್ದಿದೆ. ಆದರೆ, ಯೋಜನೆಯ ಸಮರ್ಪಕ ಅನುಷ್ಠಾನದಿಂದ ಬರಗಾಲದಲ್ಲೂ ಕುಡಿಯುವ ನೀರಿನ ಸಮಸ್ಯೆಯಿಲ್ಲದೇ ಸುಖವಾಗಿರಬಹುದು ಎನ್ನುವುದಕ್ಕೆ ತುಮ್ಮಿನಕಟ್ಟೆ ಉತ್ತಮ ನಿದರ್ಶನ.

Vijaya Karnataka 20 May 2019, 5:00 am
ತುಮ್ಮಿನಕಟ್ಟಿ: ರಾಜ್ಯಾದ್ಯಂತ ಮಳೆ ಕೊರತೆ, ಕುಡಿಯುವ ನೀರಿಗೆ ಹಾಹಾಕಾರ ಎದ್ದಿದೆ. ಆದರೆ, ಯೋಜನೆಯ ಸಮರ್ಪಕ ಅನುಷ್ಠಾನದಿಂದ ಬರಗಾಲದಲ್ಲೂ ಕುಡಿಯುವ ನೀರಿನ ಸಮಸ್ಯೆಯಿಲ್ಲದೇ ಸುಖವಾಗಿರಬಹುದು ಎನ್ನುವುದಕ್ಕೆ ತುಮ್ಮಿನಕಟ್ಟೆ ಉತ್ತಮ ನಿದರ್ಶನ.
Vijaya Karnataka Web HVR-19 TMK 02


ಉತ್ತಮ ಕಾರ್ಯನಿರ್ವಹಣೆಯಿಂದ ತುಮ್ಮಿನಕಟ್ಟೆ ಗ್ರಾಮದಲ್ಲಿ ನೀರಿನ ಸಮಸ್ಯೆ ಅಷ್ಟೊಂದು ಕಾಡುತ್ತಿಲ್ಲ. ತುಮ್ಮಿನಕಟ್ಟಿ 10 ಸಾವಿರ ಜನಸಂಖ್ಯೆ ಹೊಂದಿದ ಗ್ರಾಮ. ಈ ಗ್ರಾಮಕ್ಕೆ ತುಂಗಭದ್ರಾ ನದಿ ನೀರು ವರದಾನವಾಗಿದೆ.

ಜಿಪಂ, ತಾಪಂ, ಗ್ರಾಪಂಗಳ ಸಹಕಾರದಿಂದ ಕುಡಿಯುವ ನೀರಿನ ಸಮಸ್ಯೆ ಬರದಂತೆ ಸಾರ್ವಜನಿಕರಿಗೆ ಕುಡಿಯುವ ನೀರು ಕೊಡುತ್ತಿರುವುದು ಗ್ರಾಮಸ್ಥರಿಗೆ ಸಂತಸವಾಗಿದೆ. ತುಂಗಭದ್ರಾ ನದಿ ನೀರನ್ನು ಶುದ್ಧೀಕರಣಗೊಳಿಸಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯಿಂದ ಈ ಗ್ರಾಮಕ್ಕೆ ನೀರು ಪೂರೈಸಲಾಗುತ್ತಿದೆ.

1987ರಲ್ಲಿ ಆಗಿನ ಮುಖ್ಯಮಂತ್ರಿ ದಿ.ರಾಮಕೃಷ್ಣ ಹೆಗಡೆ ಈ ಘಟಕಕ್ಕೆ ಅಡಿಗಲ್ಲು ಸಮಾರಂಭ ನೆರವೇರಿಸಿದ್ದರು. ಇದು ಆರಂಭವಾದಾಗ ಅಬ್ದುಲ್‌ ನಜೀರ ಸಾಬ್‌ ನೀರಾವರಿ ಸಚಿವರಾಗಿದ್ದರು. ಕೆ.ಬಿ.ಕೋಳಿವಾಡ ಶಾಸಕರಾಗಿದ್ದರು. ಅಂದಿನಿಂದ ಇಂದಿನವರೆಗೂ ಶುದ್ಧೀಕರಣ ಘಟಕದಿಂದ ಯಶಸ್ವಿಯಾಗಿ ಗ್ರಾಮಕ್ಕೆ ನೀರು ಸರಬರಾಜು ಆಗುತ್ತದೆ.

ಮಂಡಳ ಪಂಚಾಯತಿ ಅಧಿಕಾರ :
1987ರಲ್ಲಿ ತುಮ್ಮಿನಕಟ್ಟಿ ಗ್ರಾಮದಲ್ಲಿ ಮಂಡಳ ಪಂಚಾಯತಿ ಅಧಿಕಾರವಿತ್ತು.. ಆಗ ಅಧ್ಯಕ್ಷ ರಾಗಿದ್ದ ಈಶ್ವರಪ್ಪ ಕೆಲಗಾರ ಕುಡಿಯುವ ನೀರಿಗಾಗಿ ಹೋರಾಟ ಮಾಡಿ ತುಂಗಭದ್ರಾ ನದಿಯಿಂದ ತುಮ್ಮಿನಕಟ್ಟಿ ಗ್ರಾಮಕ್ಕೆ ನೀರು ತಂದರು.

ಇದಕ್ಕೂ ಮೊದಲು ಕುಡಿಯುವ ನೀರಿನ ಸಮಸ್ಯೆ ಗಂಭೀರವಾಗಿತ್ತು. ಆದರೂ ತುಂಗಭದ್ರಾ ನದಿ ದಡದಲ್ಲಿ ಹಗಲು ರಾತ್ರಿ ಎನ್ನದೆ ಹೋರಾಟ ಮಾಡಿದರು. ಆದ್ದರಿಂದ ಅವರಿಗೆ ನೀರು ದೊರೆಯುವಂತಾಯಿತು.

ತುಮ್ಮಿನಕಟ್ಟಿ ಗ್ರಾಮದಲ್ಲಿ 8 ಬೋರ್‌ವೆಲ್‌ಗಳು ಕಾರ್ಯನಿರ್ವಹಿಸುತ್ತಿದ್ದು 2 ಶುದ್ಧ ನೀರಿನ ಘಟಕಗಳಿವೆ. ಗ್ರಾಮದಲ್ಲಿ 21 ಮಿನಿ ಟ್ಯಾಂಕ್‌ಗಳಿಗೆ ಸರಬರಾಜು ಆಗುತ್ತದೆ. 2 ಓವರ್‌ ಹೆಡ್‌ ಟ್ಯಾಂಕ್‌ಗೆ ತುಂಗಭದ್ರಾ ನದಿಯಿಂದ ನೀರು ಸರಬರಾಜು ಆಗುತ್ತದೆ. ಒಟ್ಟಾರೆ ತುಮ್ಮಿನಕಟ್ಟಿ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ಇಲ್ಲದಂತಾಗಿದೆ. ಜಿಲ್ಲೆಯಲ್ಲಿಯೇ ಕುಡಿಯುವ ನೀರು ಗ್ರಾಪಂನವರು ಉತ್ತಮ ಕಾರ್ಯ ನಿರ್ವಹಿಸುತ್ತಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ