ಆ್ಯಪ್ನಗರ

ಸಹಕಾರಿ ಸಂಘದ ಮೇಲೆ ತೆರಿಗೆ ಹೊರೆ ಬೇಡ

ಹಾವೇರಿ: ಸಹಕಾರ ಸಂಘಗಳ ಮೇಲೆ ಆದಾಯ ತೆರಿಗೆ ನೀತಿ ವಿರೋಧಿಸಿ ಸಹಕಾರ ಪತ್ತಿನ ಸಂಘಗಳ ಮಹಾಮಂಡಳದ ಪದಾಧಿಕಾರಿಗಳು, ವಿವಿಧ ಸಹಕಾರಿ ಪತ್ತಿನ ಸದಸ್ಯರು ಗುರುವಾರ ಹಾವೇರಿಯಲ್ಲಿಪ್ರತಿಭಟನೆ ನಡೆಸಿದರು.

Vijaya Karnataka 10 Jan 2020, 5:00 am
ಹಾವೇರಿ: ಸಹಕಾರ ಸಂಘಗಳ ಮೇಲೆ ಆದಾಯ ತೆರಿಗೆ ನೀತಿ ವಿರೋಧಿಸಿ ಸಹಕಾರ ಪತ್ತಿನ ಸಂಘಗಳ ಮಹಾಮಂಡಳದ ಪದಾಧಿಕಾರಿಗಳು, ವಿವಿಧ ಸಹಕಾರಿ ಪತ್ತಿನ ಸದಸ್ಯರು ಗುರುವಾರ ಹಾವೇರಿಯಲ್ಲಿಪ್ರತಿಭಟನೆ ನಡೆಸಿದರು.
Vijaya Karnataka Web there should be no tax burden on the cooperative
ಸಹಕಾರಿ ಸಂಘದ ಮೇಲೆ ತೆರಿಗೆ ಹೊರೆ ಬೇಡ


ನಗರದ ಮುರುಘರಾಜೇಂದ್ರ ಮಠದಿಂದ ಪ್ರತಿಭಟನೆ ಮೆರವಣಿಗೆ ಪ್ರಾರಂಭವಾಗಿ ಪಿ.ಬಿ. ರಸ್ತೆ, ಜಿಲ್ಲಾಗ್ರಂಥಾಲಯ ಮಾರ್ಗವಾಗಿ ಹಳೆಯ ನಗರಸಭೆ ಮುಂಭಾಗದಲ್ಲಿಸ್ವಲ್ಪ ಸಮಯ ರಾಜ್ಯ ಮತ್ತು ಕೇಂದ್ರ ಸರಕಾರದ ವಿರುದ್ಧ ಘೋಷಣೆ ಕೂಗಿದರು. ನಂತರ ಪ್ರತಿಭಟನಾಕಾರರು ಜಿಲ್ಲಾಡಳಿತ ಭವನಕ್ಕೆ ತೆರಳಿ ಜಿಲ್ಲಾಧಿಕಾರಿಗಳ ಮೂಲಕ ರಾಜ್ಯ ಮತ್ತು ಕೇಂದ್ರ ಸರಕಾರಕ್ಕೆ ಮನವಿ ಸಲ್ಲಿಸಿದರು.

ಈ ವೇಳೆ ಸಹಕಾರಿ ಪತ್ತಿನ ಸಂಘಗಳ ಮಹಾಮಂಡಳದ ನಿರ್ದೇಶಕ ಸಂಜಯ ಹೊಸಮಠ ಮಾತನಾಡಿ, ಕೇಂದ್ರ ಸರ್ಕಾರ ಸಹಕಾರ ಸಂಘಗಳ ಮೇಲೆ ಆದಾಯ ತೆರಿಗೆ ವಿಧಿಸುವ ಮೂಲಕ ಬರೆ ಎಳೆಯುವ ಕೆಲಸ ಮಾಡುತ್ತಿದೆ. ಸಹಕಾರ ಸಂಸ್ಥೆಗಳಿಗೆ 80ಪಿ ಅಡಿಯಲ್ಲಿತೆರಿಗೆ ವಿನಾಯಿತಿ ಇದ್ದರೂ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ನೋಟಿಸ್‌ ನೀಡುವ ಮೂಲಕ ಗೊಂದಲ ಮೂಡಿಸುತ್ತಿದ್ದಾರೆ. ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಈ ಗೊಂದಲ ನಿವಾರಿಸಬೇಕು ಎಂದು ಆಗ್ರಹಿಸಿದರು.

ಆದಾಯ ತೆರಿಗೆ ವಿಧಿಸುವುದರಿಂದ ಸಹಕಾರ ಸಂಘಗಳನ್ನು ನಡೆಸುವುದು ಕಷ್ಟವಾಗುತ್ತಿದೆ. ಆರ್ಥಿಕ ದಿವಾಳಿ ಅನುಭವಿಸುತ್ತಿವೆ. ಈಗಾಗಲೇ ಅನೇಕ ಸಂಘಗಳು ಮುಚ್ಚಿದ್ದು, ಮುಂದೆ ಆರ್ಥಿಕವಾಗಿ ಸದೃಢವಾಗುವುದು ಕಷ್ಟವಾಗಿದೆ. ಹೀಗಾಗಿ ಆದಾಯ ತೆರಿಗೆಯಿಂದ ಮುಕ್ತಗೊಳಿಸಬೇಕು ಎಂದು ಒತ್ತಾಯಿಸಿದರು.

ಮನವಿಗೆ ಸ್ಪಂದಿಸದಿದ್ದರೆ ಮುಂದಿನ ದಿನಮಾನಗಳಲ್ಲಿಉಗ್ರ ಹೋರಾಟ ಮಾಡಲಾಗುತ್ತದೆ ಎಂದು ಸರಕಾರಕ್ಕೆ ಎಚ್ಚರಿಸಿದರು. ಮುಖಂಡರಾದ ಎಸ್‌.ಎನ್‌. ಹಿರೇಮಠ, ಬಸವರಾಜ ಬೆಳವಡಿ, ಮಾರುತಿ ಈಳಿಗೇರ, ಬಸವರಾಜ ಬೋಗಳಿ, ಮೈಲಾರ, ಶಂಕರಗೌಡ ಅಗಸನಹಳ್ಳಿ, ರತ್ನಾ ಭೀಮಕ್ಕನವರ, ಶಾಂತಾಬಾಯಿ ಶಿರೂರ, ಸೌಮ್ಯ ಪತ್ರಿ, ಮಂಜುಳಾ ಬಾಳಿಕಾಯಿ ಸೇರಿದಂತೆ ಹಲವರು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ