ಆ್ಯಪ್ನಗರ

ಹಿಂದಿ ದಿವಸ ಕಾರ್ಯಕ್ರಮ ವಿರೋಧಿಸಿ ಕರವೇಯಿಂದ ಹಾವೇರಿಯಲ್ಲಿ ಪ್ರತಿಭಟನೆ

ನಗರದ ತಹಸೀಲ್ದಾರ ಕಚೇರಿಯಲ್ಲಿ ಕರವೇ ಜಿಲ್ಲಾಧ್ಯಕ್ಷ ಸತೀಶ ಮುದಿಗೌಡ್ರ ಮಾತನಾಡಿ, ಪ್ರತಿವರ್ಷ ಸೆಪ್ಟಂಬರ್‌ 14 ರಿಂದ ಕರ್ನಾಟಕ ಸೇರಿದಂತೆ ದಕ್ಷಿಣ ಭಾರತದ ರಾಜ್ಯಗಳಲ್ಲಿಒತ್ತಾಯವಾಗಿ 'ಹಿಂದಿ ಸಪ್ತಾಹ' ಆಚರಿಸಲಾಗುತ್ತಿದೆ. ಹಿಂದಿಯೇತರರನ್ನು ದೇಶದ ಎರಡನೇ ದರ್ಜೆ ಪ್ರಜೆಗಳಂತೆ ಕಾಣುತ್ತಿರುವುದು ದೇಶದ ಒಕ್ಕೂಟ ವ್ಯವಸ್ಥೆಗೆ ಮಾಡುತ್ತಿರುವ ಘೋರ ಅವಮಾನವಾಗಿದೆ ಎಂದರು.

Vijaya Karnataka Web 14 Sep 2020, 5:31 pm
ಹಾವೇರಿ: ಸಂವಿಧಾನದ 8ನೇ ಪರಿಚ್ಚೇದದನ್ವಯ ಪ್ರಾದೇಶಿಕ ಭಾಷೆಗಳಿಗೆ ಕೇಂದ್ರದ ಅಧೀಕೃತ ಸ್ಥಾನಮಾನ ಸಿಗುವಂತೆ ಕೇಂದ್ರ ಸರಕಾರ ಭಾಷಾ ನೀತಿ ತಿದ್ದುಪಡಿ ತರಬೇಕು. ಹಿಂದಿಯೇತರ ರಾಜ್ಯಗಳಲ್ಲಿ ಒತ್ತಾಯಪೂರ್ವಕವಾಗಿ ಆಚರಿಸಲಾಗುತ್ತಿರುವ ಹಿಂದಿ ಸಪ್ತಾಹ ಕಾರ್ಯಕ್ರಮವನ್ನು ವಿರೋಧಿಸಿ ಕರವೇ (ನಾರಾಯಣಗೌಡ್ರ ಬಣ) ಜಿಲ್ಲಾ ಘಟಕದಿಂದ ತಹಸೀಲ್ದಾರ್‌ ಮುಖಾಂತರ ಕೇಂದ್ರ ಸರಕಾರಕ್ಕೆ ಮನವಿ ಸಲ್ಲಿಸಲಾಯಿತು.
Vijaya Karnataka Web Hindi Diwas


ಆಸ್ತಿಯಲ್ಲಿ ವಿಶೇಷಚೇತನರಿಗೆ ಅರ್ಧಪಾಲು ಅಗತ್ಯ

ನಗರದ ತಹಸೀಲ್ದಾರ ಕಚೇರಿಯಲ್ಲಿ ಕರವೇ ಜಿಲ್ಲಾಧ್ಯಕ್ಷ ಸತೀಶ ಮುದಿಗೌಡ್ರ ಮಾತನಾಡಿ, ಪ್ರತಿವರ್ಷ ಸೆಪ್ಟಂಬರ್‌ 14 ರಿಂದ ಕರ್ನಾಟಕ ಸೇರಿದಂತೆ ದಕ್ಷಿಣ ಭಾರತದ ರಾಜ್ಯಗಳಲ್ಲಿಒತ್ತಾಯವಾಗಿ 'ಹಿಂದಿ ಸಪ್ತಾಹ' ಆಚರಿಸಲಾಗುತ್ತಿದೆ. ಹಿಂದಿಯೇತರರನ್ನು ದೇಶದ ಎರಡನೇ ದರ್ಜೆ ಪ್ರಜೆಗಳಂತೆ ಕಾಣುತ್ತಿರುವುದು ದೇಶದ ಒಕ್ಕೂಟ ವ್ಯವಸ್ಥೆಗೆ ಮಾಡುತ್ತಿರುವ ಘೋರ ಅವಮಾನವಾಗಿದೆ ಎಂದರು.

ಹಿಂದಿ ದಿವಸ್‌ ವಿರೋಧಿಸಿ ಸಾಮಾಜಿಕ ಜಾಲತಾಣಗಳಲ್ಲಿ ಕನ್ನಡಿಗರ ಅಭಿಯಾನ

ಕಳೆದ ಹತ್ತು ವರ್ಷಗಳಿಂದ ಕರವೇ ನಿರಂತರವಾಗಿ ಹೋರಾಟ ಮಾಡುತ್ತಾ ಬಂದಿದೆ. ನೈಋತ್ಯ ರೈಲ್ವೆ ವಲಯದಲ್ಲಿಗ್ರೂಪ್‌ ಡಿ ಪರೀಕ್ಷೆಗಳಲ್ಲೂ ಕನ್ನಡಕ್ಕೆ ಅವಕಾಶವಿರಲಿಲ್ಲ. ಕರವೇ ಪ್ರತಿಭಟಿಸಿದ ಪರಿಣಾಮವಾಗಿ ಪರೀಕ್ಷೆಗಳು ಕನ್ನಡದಲ್ಲೂ ನಡೆಯುತ್ತಿವೆ. ಕನ್ನಡಿಗರ ವಿರೋಧದ ಹೊರತಾಗಿ ಹಿಂದಿ ಸಪ್ತಾಹ, ಹಿಂದಿ ದಿವಸ್‌, ಹಿಂದಿ ಪಕ್ವಾಡದ ಹೆಸರಿನಲ್ಲಿ ಕರ್ನಾಟಕ ಕೇಂದ್ರ ಕಛೇರಿಗಳಲ್ಲಿ ಹಿಂದಿ ಹೇರುವ, ಕನ್ನಡ ಕನ್ನಡಿಗರನ್ನು ಕಡೆಗಣಿಸುವ ಕೆಲಸ ಮುಂದುವರಿದಿದೆ ಎಂದರು.
ದೇಶದ ಇತರೆ ಭಾಷಿಕರು ದಂಗೆ ಏಳುವ ಮುನ್ನ ಹಿಂದಿ ಹೇರಿಕೆ ನಿಲ್ಲಿಸಿ; ಕೇಂದ್ರಕ್ಕೆ ಎಚ್‌ಡಿಕೆ ಎಚ್ಚರಿಕೆ..!

ಈ ನಿಯಮಗಳು ಹಾಗೂ ಆಚರಣೆಗಳನ್ನು ಈ ಕೂಡಲೇ ಕೇಂದ್ರ ಸರಕಾರ ನಿಲ್ಲಿಸಿ ಸಂವಿಧಾನದ 8ನೇ ಪರಿಚ್ಚೇದದಲ್ಲಿರುವ ಎಲ್ಲ ಭಾಷೆಗಳಿಗೆ ಕೇಂದ್ರದ ಅಧೀಕೃತ ಸ್ಥಾನಮಾನ ಸಿಗುವಂತೆ ಕೇಂದ್ರದ ಭಾಷಾ ನೀತಿಗೆ ತಿದ್ದುಪಡಿ ತರಬೇಕೆಂದು ಕರವೇ ಒತ್ತಾಯಿಸುತ್ತದೆ ಎಂದರು.

ಈ ಸಂದರ್ಭದಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಯಶವಂತಗೌಡ ದೊಡ್ಡಗೌಡ್ರ, ತಾಲೂಕು ಅಧ್ಯಕ್ಷ ಹಾಲೇಶ ಹಾಲಣ್ಣನವರ, ನಗರ ಘಟಕದ ಉಪಾಧ್ಯಕ್ಷ ಫಕೃದ್ದೀನ ಅಂಗಡಿಕಾರ, ಚೇತನ ಕುರುಬಗೊಂಡ, ನಾಗಯ್ಯ ಹಿರೇಮಠ, ಮಾರುತಿ ಕುರುಬರ ಇತರರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ