ಆ್ಯಪ್ನಗರ

ಇದು ನನ್‌ ಫಸ್ಟ್‌ ವೋಟು.. ಖಂಡಿತ ಹಾಕ್ತೀನಿ..

ಶಿಗ್ಗಾವಿ: ವಿಭಿನ್ನ ಕ್ರಮಗಳ ಮೂಲಕ ಚುನಾವಣಾ ಆಯೋಗ ಮತದಾನದ ಬಗ್ಗೆ ಜಾಗೃತಿ ಮೂಡಿಸಿದ ಪರಿಣಾಮ, ಪ್ರಸ್ತುತ ಚುನಾವಣೆಯಲ್ಲಿ ಯುವ ಮತದಾರರ ಸಂಖ್ಯೆ ಏರಿಕೆಯಾಗಿದ್ದು, ಮತದಾನಕ್ಕೆ ಹೊಸ ಹುರುಪು, ಹುಮ್ಮಸು ಮೂಡಿಸಿದೆ.

Vijaya Karnataka 23 Apr 2019, 5:00 am
ಶಿಗ್ಗಾವಿ: ವಿಭಿನ್ನ ಕ್ರಮಗಳ ಮೂಲಕ ಚುನಾವಣಾ ಆಯೋಗ ಮತದಾನದ ಬಗ್ಗೆ ಜಾಗೃತಿ ಮೂಡಿಸಿದ ಪರಿಣಾಮ, ಪ್ರಸ್ತುತ ಚುನಾವಣೆಯಲ್ಲಿ ಯುವ ಮತದಾರರ ಸಂಖ್ಯೆ ಏರಿಕೆಯಾಗಿದ್ದು, ಮತದಾನಕ್ಕೆ ಹೊಸ ಹುರುಪು, ಹುಮ್ಮಸು ಮೂಡಿಸಿದೆ.
Vijaya Karnataka Web HVR-22SGN-1A


ಪ್ರಸ್ತುತ ಚುನಾವಣೆಯಲ್ಲಿ ಮತ ಹಕ್ಕು ಪಡೆದಿರುವ 1,472 ಹೊಸ ಮತದಾರರು ಮತ ಹಾಕಲು ಕಾತರರಾಗಿದ್ದಾರೆ. ಯುವ ಮತದಾರರಲ್ಲಿ ಪ್ರಜಾಪ್ರಭುತ್ವದ ಆಸೆ ಈಡೇರಿಸುವ ಸದುದ್ದೇಶದಿಂದ ಮತ ಚಲಾಯಿಸುವ ಹುಮ್ಮಸು ಕಂಡುಬರುತ್ತಿದೆ. ಮತ್ತೊಂದೆಡೆ ಕ್ಷೇತ್ರದ 1,710 ವಿಶೇಷಚೇತನ ಮತದಾರರಿಗೆ ಮತ ಚಲಾಯಿಸಲು ಅಚ್ಚುಕಟ್ಟು ವ್ಯವಸ್ಥೆಯನ್ನು ಚುನಾವಣಾಧಿಕಾರಿಗಳು ಮಾಡಿದ್ದಾರೆ.

ಬಿಡದ ಮಕ್ಕಳು ನಂಟು:
ಚುನಾವಣೆ ಕಟ್ಟುನಿಟ್ಟಿನ ಕರ್ತವ್ಯ ಕೈಬಿಡಲಾಗದ ಸ್ಥಿತಿಯಲ್ಲಿ ಹಾಜರಾದ ಸರಕಾರದ ಎರಡು ಸಾವಿರ ನೌಕರರಲ್ಲಿ ಬಹುತೇಕ ಮಹಿಳೆಯರು ಇದ್ದಾರೆ. ಬಹುತೇಕ ಮಹಿಳೆಯರಿಗೆ ಮಕ್ಕಳ ನಂಟು ಬಿಡಲಾಗದೆ ಪುಟ್ಟ ಮಕ್ಕಳೊಂದಿಗೆ ಕರ್ತವ್ಯಕ್ಕೆ ಹಾಜರಾಗಿದ್ದು ಗಮನ ಸೆಳೆಯಿತು.

ಚುನಾವಣೆ ಕರ್ತವ್ಯಕ್ಕೆ ನಿಯೋಜನೆಗೊಂಡ ನೌಕರರಿಗೆ ಪಟ್ಟಣದ ಜೆಎಂಜೆ ಪ್ರೌಢ ಶಾಲೆಯಲ್ಲಿ ತರಬೇತಿ, ಸಾಮಗ್ರಿಗಳ ಹಸ್ತಾಂತರ ನಡೆಯಿತು. ಈ ವೇಳೆ ತನ್ನ ತಾಯಿಯೊಂದಿಗೆ ಪುಟ್ಟ ಮಕ್ಕಳು ಅತ್ತ, ಇತ್ತ ಕಣ್ಣಾಡಿಸುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.

2000 ಸಿಬ್ಬಂದಿ ನಿಯೋಜನೆ : ಕ್ಷೇತ್ರದಲ್ಲಿ 238 ಮತ್ತು ಸೂಕ್ಷ ್ಮ, ಅತೀ ಸೂಕ್ಷ ್ಮ 48 ಮತಗಟ್ಟೆಗಳಿದ್ದು, ಬಂದೋಬಸ್ತ್‌ ನೀಡಲಾಗಿದೆ. 2 ಸಾವಿರ ನೌಕರರು ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದಾರೆ. 50 ಜನ ವಿಶೇಷ ಭದ್ರತಾ ಸಿಬ್ಬಂದಿ, 10 ಜನ ಸಿಪಿಐ, 20 ಜನ ಪಿಎಸ್‌ಐ ಸೇರಿದಂತೆ ಒಂದು ಸಾವಿರ ಪೊಲೀಸರನ್ನು ಬಂದೋಬಸ್ತ್‌ಗೆ ನಿಯೋಜಿಸಲಾಗಿದೆ. 61 ಸರಕಾರಿ, ಖಾಸಗಿ ವಾಹನ ಬಳಕೆ ಮಾಡಲಾಗುತ್ತಿದೆ ಎಂದು ಸವಣೂರು ಉಪ ವಿಭಾಗಾಧಿಕಾರಿ, ಉಪ ಚುನಾವಣಾಧಿಕಾರಿ ಹರ್ಷಲ್‌ ಬಯಾಲ್‌ ನಾರಾಯಣರಾವ್‌ ಮತ್ತು ಸೆಕ್ಟರ್‌ ಅಧಿಕಾರಿ ಚಂದ್ರು ಪೂಜಾರ ತಿಳಿಸಿದರು.

ಮಕ್ಕಳಿಗೆ ಆಟದ ಸಾಮಾನು!: ಮತದಾರರ ಜತೆ ಬರುವ ಪುಟ್ಟ ಮಕ್ಕಳು ಹಕ್ಕು ಚಲಾಯಿಸಲು ತೊಂದರೆ ಮಾಡಬಾರದು ಎಂದು ಚುನಾವಣಾ ಆಯೋಗ, ಮಕ್ಕಳ ಗಮನ ಸೆಳೆಯವ ಆಟೋಪಕರಣಗಳ ವ್ಯವಸ್ಥೆ ಮಾಡಿದೆ. ಕುದರೆ ಸೇರಿದಂತೆ ವಿವಿಧ ರೀತಿಯ ಆಟೋಪಕರಣಗಳೊಂದಿಗೆ ತಾಯಿ ಮತ ಚಲಾಯಿಸಿ ಬರುವವರೆಗೆ ಆಟವಾಡಲು ಅವಕಾಶವಿದೆ. ಇನ್ನು ಶಿಗ್ಗಾವಿ ವಿಧಾನಸಭಾ ಮತಕ್ಷೇತ್ರದಲ್ಲಿ ತೆರೆಯಲಾದ ನಾಲ್ಕು ಸಖಿ ಬೂತ್‌ಗಳಲ್ಲಿ ಬಂಕಾಪುರ, ಶಿಗ್ಗಾವಿ ಮತ್ತು ಸವಣೂರು ತಾಲೂಕಿನ ಬೂತ್‌ ಗಮನ ಸೆಳೆಯತ್ತಿವೆ. ಮಹಿಳಾ ಮತದಾರರಿಗೆ ಇಲ್ಲಿ ಹೈಟೇಕ್‌ ಸೌಲಭ್ಯ ಕಲ್ಪಿಸಿದೆ. ಕುರ್ಚಿಗಳನ್ನು ಅಳವಡಿಸಲಾಗಿದೆ. ಮತಗಟ್ಟಿಗೆ ಬಂದವರು ಸ್ವಲ್ಪು ಹೊತ್ತು ಕುಳಿತು ವಿಶ್ರಾಂತಿ ಪಡೆದು ಬಳಿಕ ಮತ ಚಲಾಯಿಸಬಹುದಾಗಿದ್ದು, ಬೇಸಿಗೆ ಝಳ ತಾಕದಂತೆ ಕೂಲರ್‌ ಅಳವಡಿಸಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ