ಆ್ಯಪ್ನಗರ

ಟಿಕೆಟ್‌ ವಂಚಿತರ ಅಸಮಾಧಾನ

ಶಿಗ್ಗಾವಿ: ಸ್ಥಳೀಯ ಪುರಸಭೆ ಚುನಾವಣೆಗೆ ಸಜ್ಜಾಗಿದ್ದ ತಮ್ಮ ಆಪ್ತರಿಗೆ ಟಿಕೆಟ್‌ ನಿರಾಕರಿಸುವ ಮೂಲಕ ಶಾಕ್‌ ಕೊಟ್ಟ ಕಾಂಗ್ರೆಸ್‌-ಬಿಜೆಪಿ ವರಿಷ್ಠರ ವಿರುದ್ಧ ಟಿಕೆಟ್‌ ವಂಚಿತ ಆಕಾಂಕ್ಷಿಗಳ ಅಸಮಾಧಾನದ ಹೊಗೆ ಒಳಗೊಳಗೆ ಭುಗಲೆದ್ದಿದೆ.

Vijaya Karnataka 18 May 2019, 5:00 am
ಶಿಗ್ಗಾವಿ: ಸ್ಥಳೀಯ ಪುರಸಭೆ ಚುನಾವಣೆಗೆ ಸಜ್ಜಾಗಿದ್ದ ತಮ್ಮ ಆಪ್ತರಿಗೆ ಟಿಕೆಟ್‌ ನಿರಾಕರಿಸುವ ಮೂಲಕ ಶಾಕ್‌ ಕೊಟ್ಟ ಕಾಂಗ್ರೆಸ್‌-ಬಿಜೆಪಿ ವರಿಷ್ಠರ ವಿರುದ್ಧ ಟಿಕೆಟ್‌ ವಂಚಿತ ಆಕಾಂಕ್ಷಿಗಳ ಅಸಮಾಧಾನದ ಹೊಗೆ ಒಳಗೊಳಗೆ ಭುಗಲೆದ್ದಿದೆ.
Vijaya Karnataka Web ticket cheer upset
ಟಿಕೆಟ್‌ ವಂಚಿತರ ಅಸಮಾಧಾನ


ಕಾಂಗ್ರೆಸ್‌-ಬಿಜೆಪಿ ವರಿಷ್ಠರ ಆಪ್ತರೆಂದೇ ಗುರುತಿಸಿಕೊಂಡಿದ್ದ ಕೆಲ ಟಿಕೆಟ್‌ ಆಕಾಂಕ್ಷಿಗಳು ಪುರಸಭೆಗೆ ಮೀಸಲಾತಿ ಪ್ರಕಟವಾಗುತ್ತಿದ್ದಂತೆ ಚುನಾವಣೆಗೆ ಸ್ಪರ್ಧಿಸಲು ಸಜ್ಜಾಗಿದ್ದರು. ಜತೆಗೆ ಟಿಕೆಟ್‌ ಗಿಟ್ಟಿಸಿಕೊಳ್ಳಲು ನಡೆಸಿದ ಫೈಟ್‌ ಸ್ಥಳೀಯ ಮಟ್ಟದ ರಾಜಕೀಯದಲ್ಲಿ ಭಾರೀ ಕುತೂಹಲ ಕೆರಳಿಸಿತ್ತು. ಆದರೆ, ಚುನಾವಣೆ ಎದುರಿಸುವ ಅರ್ಹತೆಯಿದ್ದರೂ ಪ್ರಭಾವಿಗಳಿಗೆ ಟಿಕೆಟ್‌ ಅದೃಷ್ಟ ಕೈಕೊಟ್ಟಿದ್ದರಿಂದ ಇದೀಗ ಅಭ್ಯರ್ಥಿಗಳ ಗೆಲುವಿಗೆ ಅಡ್ಡಗೋಡೆಯಾಗುವ ಲಕ್ಷ ಣಗಳು ಗೋಚರಿಸುತ್ತಿವೆ.

ವರಿಷ್ಠರು ಕೈಗೊಂಡ ಈ ನಿರ್ಣಯದಿಂದ ಅಸಮಾಧಾನ ಹೊರಹಾಕದೆ ಒಳಗೊಳಗೆ ಕುದಿಯತ್ತಿರುವ ಆಕಾಂಕ್ಷಿಗಳು, ಪಕ್ಷ ಕ್ಕೆ ದುಡಿದ ನಿಷ್ಠಾವಂತರನ್ನು ಕಡೆಗಣಿಸಿ, ಪಕ್ಷ ದ್ರೋಹ ಬಗೆದವರಿಗೆ, ಪಕ್ಷ ದ ಸದಸ್ಯತ್ವ ಇಲ್ಲದವರಿಗೆ ಗುತ್ತಿಗೆದಾರರಿಗೆ ಟಿಕೆಟ್‌ ನೀಡಿದ್ದಾರೆ ಎಂದು ತಮ್ಮ ಆಪ್ತರ ಬಳಿ ಮಾತನಾಡಿಕೊಳ್ಳುತ್ತಿರುವುದು ದಟ್ಟವಾಗುತ್ತಿದೆ.

ಮತ್ತೊಂದೆಡೆ ಶಿಗ್ಗಾವಿ ಪಟ್ಟಣದ ಅಭಿವೃದ್ಧಿಗೆ ಶ್ರಮಿಸಿದ, ಎರಡು ವರ್ಷ ಸ್ಥಳೀಯ ಜನರಿಗೆ ಕುಡಿಯವ ನೀರಿನ ಸಮಸ್ಯೆಯಾಗದಂತೆ ನಿಗಾವಹಿಸಿ, ಕೆಲಸ ಮಾಡಿದ ಬಿಜೆಪಿ ಕಟ್ಟಾಳು, ಹಾಲಿ ಅಧ್ಯಕ್ಷ ಶಿವಪ್ರಸಾದ ಸುರಗೀಮಠ ಅವರಿಗೆ ಟಿಕೆಟ್‌ ತಪ್ಪಿಸಿದ್ದರಿಂದ ಸ್ಥಳೀಯವಾಗಿ ಬಿಜೆಪಿ ವಿರುದ್ಧ ಜನರ ಆಕ್ರೋಶ ವ್ಯಕ್ತವಾಗಿದೆ.

ಕಳೆದ 5 ವರ್ಷದಿಂದ ಕಾಂಗ್ರೆಸ್‌ ವಿರುದ್ಧ ನಿರಂತರ ಹೋರಾಟಕ್ಕಿಳಿದು, ಪ್ರತಿಭಟನೆಗಳ ಸದ್ದು ಮಾಡಿದ್ದ ಬಿಜೆಪಿ ಹಾಲಿ ಸದಸ್ಯ ಫಕ್ಕೀರೇಶ ಶಿಗ್ಗಾಂವಿಗೂ ಟಿಕೆಟ್‌ ಅದೃಷ್ಟ ಕೈಕೊಟ್ಟಿದೆ.

ಕಾಂಗ್ರೆಸ್‌ ವಶದಲ್ಲಿದ್ದ ಪುರಸಭೆ ಆಡಳಿತ ದುರ್ಬಲಗೊಂಡ ಸಂದರ್ಭದಲ್ಲಿ ಬಹುಮತ ಇಲ್ಲದ ಬಿಜೆಪಿಗೆ ಅಧಿಕಾರದ ಚುಕ್ಕಾಣಿ ಹಿಡಿಯಲು ಬೆಂಬಲ ಕೊಟ್ಟಿದ್ದ ಬಿಎಸ್‌ಆರ್‌ ಪಕ್ಷ ದ ಸದಸ್ಯೆ ವೀಣಾ ಕುರ್ಡೇಕರ ಅವರನ್ನು ಬಳಸಿಕೊಂಡ ಬಿಜೆಪಿ, ಇದೀಗ ಚುನಾವಣೆ ವೇಳೆ ಟಿಕೆಟ್‌ ನಿರಾಕರಿಸಿ ಶಾಕ್‌ ನೀಡಿದ್ದರಿಂದ ಕುರ್ಡೇಕರ ಅವರು ಬಿಜೆಪಿ ವರಿಷ್ಠರ ಮೇಲೆ ಸಿಟ್ಟಾಗಿದ್ದಾರೆ. ಪರ್ಯಾಯವಾಗಿ ಪಕ್ಷೇತರ ಅಭ್ಯರ್ಥಿಯಾಗಲು ರೆಡಿಯಾಗಿದ್ದಾರೆ.

ಸಾಮಾನ್ಯ ವಾರ್ಡ್‌ಗೆ ನಡೆದ ಟಿಕೆಟ್‌ ಫೈಟ್‌ನಲ್ಲಿ ನಿಷ್ಠಾವಂತ ಕಾರ್ಯಕರ್ತರಿಗೆ ಉದ್ದೇಶ ಪೂರ್ವಕವಾಗಿ ನಿರಾಕರಿಸಲಾಗಿದೆ. ಪಕ್ಷ ದ್ರೋಹ, ಗುತ್ತಿಗೆದಾರರಿಗೆ, ಪಕ್ಷ ದ ಸದಸ್ಯತ್ವ ಇಲ್ಲದವರಿಗೂ ಟಿಕೆಟ್‌ ನೀಡಿದ್ದಾರೆ ಎಂಬ ಅಸಮಾಧಾನ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ ಪಕ್ಷೇತರ ಅಭ್ಯರ್ಥಿ ಕಣಕ್ಕಿಳಿಸಿ ಪಕ್ಷ ದ ಅಭ್ಯರ್ಥಿ ಸೋಲಿಸುವ ಎಲ್ಲ ರೀತಿ ತಂತ್ರಗಾರಿಕೆ ನಡೆಯತ್ತಿವೆ. ಇನ್ನು ಕಾಂಗ್ರೆಸ್‌ನಲ್ಲಿಯೂ ಇದೇ ಪರಸ್ಥಿತಿಯಿದೆ. ವರಿಷ್ಠರಿಗೆ ಆಪ್ತರಾಗಿದ್ದ ಕೊಟ್ರಪ್ಪ ನಡೂರು, ಇಂದ್ರಮ್ಮ ಹಾವೇರಿ, ಮಂಜುನಾಥ ಮಣ್ಣಣ್ಣವರ ಅವರಿಗೆ ಟಿಕೆಟ್‌ ತಪ್ಪಿದೆ.

20ನೇ ವಾರ್ಡ್‌ನಿಂದ ಕಾಂಗ್ರೆಸ್‌ ವಿರುದ್ಧ ಸೆಡ್ಡು ಹೊಡೆದು ಜೆಡಿಎಸ್‌ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದಾರೆ. 23 ವಾರ್ಡ್‌ಗಳ ಅಭ್ಯರ್ಥಿ ಆಯ್ಕೆಯಲ್ಲಿ ಯಡವಟ್ಟು ಮಾಡಿಕೊಂಡಿರುವ ಕಾಂಗ್ರೆಸ್‌-ಬಿಜೆಪಿ ಪಕ್ಷ ದ ವಿರುದ್ಧ ಪಕ್ಷೇತರ ಅಭ್ಯರ್ಥಿಗಳಾಗಿ ಸ್ಪರ್ಧೆವೊಡ್ಡಲು ಟಿಕೆಟ್‌ ವಂಚಿತರು ಸಜ್ಜಾಗಿದ್ದಾರೆ. ಕೆಲವರು ತಮ್ಮ ಒಳಗಿನ ಅಸಮಾಧಾನ ಹೊರ ಹಾಕದೆ ತಮಗೆ ಬೇಕಾದ ವ್ಯಕ್ತಿಗಳನ್ನು ಪಕ್ಷೇತರ ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸಿ ಗೆಲುವಿಗೆ ರಣತಂತ್ರ ಹೆಣೆಯತ್ತಿದ್ದಾರೆ.

ಜೆಡಿಎಸ್‌ನಲ್ಲಿಂತೂ ಟಿಕೆಟ್‌ ಪೈಪೋಟಿಯೂ ಕಾಣಲಿಲ್ಲ. 23 ವಾರ್ಡ್‌ಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ವಿಫಲವಾಗಿದೆ. ಆದರೂ ನಾಮಪತ್ರ ಸಲ್ಲಿಸಿದ ಅಭ್ಯರ್ಥಿಗಳನ್ನು ಗೆಲ್ಲಿಸಲು ಕಾಂಗ್ರೆಸ್‌-ಬಿಜೆಪಿ ಟಿಕೆಟ್‌ ವಂಚಿತರ ಅಸಮಾಧಾನ ಸದ್ಭಳಕೆಗೆ ಚಿಂತನೆ ನಡೆಸಿದೆ. ಒಟ್ಟಾರೆ ಹೆಚ್ಚು ಅಸಮಾಧಾನ ಹೊಗೆ ಬಿಜೆಪಿಯಲ್ಲಿ ಕಾಣಿಸಿಕೊಂಡಿದೆ. ಇದಕ್ಕೆ ವರಿಷ್ಠರು ಯಾವ ರೀತಿ ಪರಿಹಾರ ಕಂಡುಕೊಂಡು ಪಕ್ಷ ದ ಅಭ್ಯರ್ಥಿಗಳನ್ನು ಗೆಲ್ಲಿಸುತ್ತಾರೆ. ಪಕ್ಷೇತರ ಅಭ್ಯರ್ಥಿ ಕಣದಲ್ಲಿ ಉಳಿಯದಂತೆ ತಂತ್ರಗಾರಿಕೆ ರೂಪಿಸುತ್ತಾರೆ ಕಾದು ನೋಡಬೇಕು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ