ಆ್ಯಪ್ನಗರ

ಗೋಪುರ ಕಳಶ ಪ್ರತಿಷ್ಠಾಪನೆ

ಹಾನಗಲ್ಲ : ತಾಲೂಕಿನ ಗೊಂದಿ ಗ್ರಾಮದಲ್ಲಿ ಮೈಲಾರಲಿಂಗೇಶ್ವರ ಶಿವಬಾರಕ್ಕೆ ಗೋಪುರ ಮತ್ತು ಕಳಸಾರೋಹಣ ಪ್ರತಿಷ್ಠಾಪನೆಯ ಧಾರ್ಮಿಕ ವಿಧಿ ವಿಧಾನಗಳು ನೆರವೇರಿದವು.

Vijaya Karnataka 30 Apr 2019, 5:00 am
ಹಾನಗಲ್ಲ : ತಾಲೂಕಿನ ಗೊಂದಿ ಗ್ರಾಮದಲ್ಲಿ ಮೈಲಾರಲಿಂಗೇಶ್ವರ ಶಿವಬಾರಕ್ಕೆ ಗೋಪುರ ಮತ್ತು ಕಳಸಾರೋಹಣ ಪ್ರತಿಷ್ಠಾಪನೆಯ ಧಾರ್ಮಿಕ ವಿಧಿ ವಿಧಾನಗಳು ನೆರವೇರಿದವು.
Vijaya Karnataka Web HVR-29HGL3


ಮೈಲಾರಲಿಂಗೇಶ್ವರ ದೇವರಿಗೆ ಅಭಿಷೇಕ, ಅಷ್ಟೋತ್ತರ ಪೂಜೆಗಳು ನಡೆದವು. ಗ್ರಾಮದ ಪ್ರಮುಖ ಬೀದಿಗಳಲ್ಲಿ ನೂತನ ಕಳಶದ ಮೆರವಣಿಗೆ ನಡೆಯಿತು. ಉತ್ಸವ ಮೂರ್ತಿಗೆ ಅಭಿಷೇಕ, ಮತ್ತಿತರ ಪೂಜಾ ಕೈಂಕರ್ಯಗಳು ನೆರವೇರಿದವು,

ಧಾರ್ಮಿಕ ಕಾರ್ಯಕ್ರಮದ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದ ಜಡೆ ಹಿರೇಮಠದ ಅಮರೇಶ್ವರ ಶಿವಾಚಾರ್ಯ ಸ್ವಾಮೀಜಿ, ಧಾರ್ಮಿಕ ಕಾರ್ಯಕ್ರಮಗಳು, ಜಾತ್ರೆಗಳು ನಿರಂತರವಾಗಿ ನಡೆಯಬೇಕು, ಆ ಮೂಲಕ ಜಾತಿ, ಮತ, ಪಂಥಗಳ ನಿವಾರಣೆ ಆಗಬೇಕು ಎಂದರು.

ದೇವರಲ್ಲಿ ಭಯ, ಭಕ್ತಿ ಇದ್ದಾಗ ಮಾನಸಿಕ ತುಮುಲಗಳು ಕಡಿಮೆಯಾಗುತ್ತವೆ, ನೆಮ್ಮದಿ ಸಿಗುತ್ತದೆ, ಧಾರ್ಮಿಕ ಆಚರಣೆಗಳು ಮನುಷ್ಯನಲ್ಲಿನ ದ್ವೇಷ, ಅಸೂಯೆ, ಅಹಂ ನಿಗ್ರಹಿಸುತ್ತದೆ. ಶಾಂತಿ, ಸೌಹಾರ್ಧತೆಯ ಭಾವ ಮೇಳೈಸುತ್ತದೆ ಎಂದು ನುಡಿದರು.

ಗ್ರಾಮದ ಪ್ರಮುಖರಾದ ಶಿವಪುತ್ರಪ್ಪ ಗೋರನವರ, ಸುರೇಶ ದುಮ್ಮೇರ, ಚಂದ್ರಪ್ಪ ಕೊಂಡೋಜಿ, ಪ್ರಕಾಶ ರೊಟ್ಟೇರ, ಹೊನ್ನಪ್ಪ ಕಬ್ಬೂರ, ಸೋಮಣ್ಣ ದಾಳೇರ, ಈರಪ್ಪ ಹಳ್ಳದ, ಮಲ್ಲೇಶಪ್ಪ ಹಳ್ಳದ ಮತ್ತಿತರರು ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ