ಆ್ಯಪ್ನಗರ

ಮನೋವಿಕಾಸಕ್ಕೆ ಗೊಂಬೆಯಾಟ ಸಾಧನ

ಹಾನಗಲ್ಲ : ಸಮಾಜದಲ್ಲಿ ಬೇರೂರಿರುವ ಮೂಢ ನಂಬಿಕೆ, ದೈನಂದಿನ ಜೀವನಕ್ಕೆ ಸಂಬಂಧಿಸಿದ ತಪ್ಪು ಕಲ್ಪನೆಗಳ ನಿವಾರಣೆಗೆ, ವೈಜ್ಞಾನಿಕ ಅರಿವು ಮೂಡಿಸಲು ಗೊಂಬೆಯಾಟ ಮಾದ್ಯಮ ಹೆಚ್ಚು ಪ್ರಸ್ತುತ ಎಂದು ಹುಬ್ಬಳ್ಳಿ ಮೂರುಸಾವಿರಮಠದ ಗುರುಸಿದ್ಧರಾಜಯೋಗೀಮದ್ರ ಸ್ವಾಮೀಜಿ ನುಡಿದರು.

Vijaya Karnataka 27 Jul 2019, 5:00 am
ಹಾನಗಲ್ಲ : ಸಮಾಜದಲ್ಲಿ ಬೇರೂರಿರುವ ಮೂಢ ನಂಬಿಕೆ, ದೈನಂದಿನ ಜೀವನಕ್ಕೆ ಸಂಬಂಧಿಸಿದ ತಪ್ಪು ಕಲ್ಪನೆಗಳ ನಿವಾರಣೆಗೆ, ವೈಜ್ಞಾನಿಕ ಅರಿವು ಮೂಡಿಸಲು ಗೊಂಬೆಯಾಟ ಮಾದ್ಯಮ ಹೆಚ್ಚು ಪ್ರಸ್ತುತ ಎಂದು ಹುಬ್ಬಳ್ಳಿ ಮೂರುಸಾವಿರಮಠದ ಗುರುಸಿದ್ಧರಾಜಯೋಗೀಮದ್ರ ಸ್ವಾಮೀಜಿ ನುಡಿದರು.
Vijaya Karnataka Web toy tool for psychosis
ಮನೋವಿಕಾಸಕ್ಕೆ ಗೊಂಬೆಯಾಟ ಸಾಧನ


ಇಲ್ಲಿನ ಕುಮಾರೇಶ್ವರ ಶಿಕ್ಷ ಣ ಮಹಾವಿದ್ಯಾಲಯದಲ್ಲಿ ಬೆಳಗಾವಿಯ ಸೇವಕ ಸಂಸ್ಥೆಯಿಂದ ಭಾರತ ಸರಕಾರದ ವಿಜ್ಞಾನ, ತಂತ್ರಜ್ಞಾನ ಇಲಾಖೆ ಸಹಯೋಗದಲ್ಲಿ ನಡೆಯುತ್ತಿರುವ 3 ದಿನಗಳ 'ಸಾಂಪ್ರದಾಯಿಕ ಗೊಂಬೆಯಾಟ ಮೂಲಕ ವಿಜ್ಞಾನ ಸಂವಹನ' ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ವಿಜ್ಞಾನ ಸೇರಿದಂತೆ ಸಮುದಾಯ ಜಾಗೃತಿಯ ಕ್ಲಿಷ್ಟಕರ ವಿಷಯಗಳನ್ನು ಸುಲಭವಾಗಿ ಅಥೈರ್‍ಸುವಲ್ಲಿ ಗೊಂಬೆಯಾಟದಂತಹ ಜಾನಪದ ಪ್ರಕಾರಗಳು ಹೆಚ್ಚು ಪರಿಣಾಮಕಾರಿ ಆಗಲು ಸಾಧ್ಯವಿದೆ. ರಾಮಾಯಣ, ಮಹಾಭಾರತದಂತ ಕ್ಲಿಷ್ಟಕರ ಗ್ರಂಥಗಳನ್ನು ಜನಸಾಮಾನ್ಯರಿಗೆ ಸುಲಭವಾಗಿ ಪರಿಚಯಿಸಲು ಗೊಂಬೆಯಾಟ ಯಶಸ್ವಿಯಾಗಿವೆ ಎಂದರು.

ಕಾಲೇಜು ಪ್ರಾಚಾರ್ಯ ಎನ್‌.ಸದಾಶಿವಪ್ಪ ಮಾತನಾಡಿ, ಸಮಾಜಕ್ಕೆ ವಿಜ್ಞಾನದಿಂದ ಆಗುವಂತಹ ಪ್ರಯೋಜನೆಗಳ ಬಗ್ಗೆ ಅರಿವು ಬೇಕು. ಇದು ಸ್ಪರ್ಧಾತ್ಮಕ ಕಾಲ, ಸೃಜನಾತ್ಮಕ ಶಿಕ್ಷ ಣದ ಅಳವಡಿಕೆ ಅಗತ್ಯವಾಗಿದೆ ಎಂದರು. ಬೆಳಗಾವಿ ಸೇವಕ ಸಂಸ್ಥೆಯ ಕಾರ್ಯದರ್ಶಿ ಆನಂದ ಲೋಬೊ ಪ್ರಾಸ್ತಾವಿಕ ಮಾತನಾಡಿದರು. ಮೂರು ದಿನಗಳ ತರಬೇತಿ ಕಾರ್ಯಾಗಾರದ ಬಗ್ಗೆ ವಿವರಣೆ ನೀಡಿದರು.

ಕುಮಾರೇಶ್ವರ ಶಿಕ್ಷ ಣ ಸಂಸ್ಥೆಯ ನಿರ್ದೇಶಕ ಗುರುಸಿದ್ಧಪ್ಪ ಕೊಂಡೋಜಿ, ಪ್ರಾಧ್ಯಾಪಕರಾದ ಆರ್‌.ವಿ.ಮಾಡಳ್ಳಿ, ವಿ.ವಿ.ಬೊಂದಾಡೆ, ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿರುವ ಗೊಂಬೆಯಾಟ ತಜ್ಞ ಸಿದ್ಧಪ್ಪ ಬಿರಾದಾರ, ರಂಗಭೂಮಿ ನಿರ್ದೇಶಕರಾದ ಗಣೇಶ ಹೆಗ್ಗೋಡು, ಸುನಂದಾ ನಿಂಬನಗೌಡ್ರ ಉಪಸ್ಥಿತರಿದ್ದರು.

ಕುಮಾರೇಶ್ವರ ಶಿಕ್ಷ ಣ ಮಹಾವಿದ್ಯಾಲಯದ ಬಿ.ಇಡಿ ಪ್ರಶಿಕ್ಷ ಣಾರ್ಥಿಗಳು ಗೊಂಬೆಯಾಟ ತರಬೇತಿ ಶಿಬಿರದಲ್ಲಿ ಭಾಗವಹಿಸಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ಗೊಂಬೆಯಾಟ ಕಲಾ ತಂಡದಿಂದ ಪ್ರದರ್ಶನ ನಡೆಯಿತು. ಶಿಬಿರಾರ್ಥಿಗಳಿಗೆ ಗೊಂಬೆಯಾಟದ ಮೂಲಕ ವಿಜ್ಞಾನ ವಿಷಯಗಳನ್ನು ಸಮರ್ಥವಾಗಿ ಪ್ರಸ್ತುತಪಡಿಸುವ ಸ್ಪರ್ಧೆಗಳು ನಡೆದವು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ