ಆ್ಯಪ್ನಗರ

ಪ್ರಯಾಣದಲ್ಲಿ ಎಚ್ಚರಿಕೆ ಅಗತ್ಯ

ರಾಣೇಬೆನ್ನೂರ: ರೈಲಿನಲ್ಲಿ ಪಯಣಿಸುವಾಗ ಪ್ರಯಾಣಿಕರು ತಮ್ಮ ವಸ್ತುಗಳ ಬಗ್ಗೆ ಹೆಚ್ಚಿನ ನಿಗಾವಹಿಸಿ ಕಳ್ಳತನಕ್ಕೆ ಆಸ್ಪದವಾಗದಂತೆ ನೋಡಿಕೊಳ್ಳಬೇಕು ಎಂದು ಹುಬ್ಬಳ್ಳಿ ರೇಲ್ವೆ ಪೊಲೀಸ್‌ ಠಾಣೆಯ ಪಿಎಸ್‌ಐ ಸಾಲಂ ಹುಸೇನ ಹೇಳಿದರು.

Vijaya Karnataka 26 Dec 2018, 5:00 am
ರಾಣೇಬೆನ್ನೂರ: ರೈಲಿನಲ್ಲಿ ಪಯಣಿಸುವಾಗ ಪ್ರಯಾಣಿಕರು ತಮ್ಮ ವಸ್ತುಗಳ ಬಗ್ಗೆ ಹೆಚ್ಚಿನ ನಿಗಾವಹಿಸಿ ಕಳ್ಳತನಕ್ಕೆ ಆಸ್ಪದವಾಗದಂತೆ ನೋಡಿಕೊಳ್ಳಬೇಕು ಎಂದು ಹುಬ್ಬಳ್ಳಿ ರೇಲ್ವೆ ಪೊಲೀಸ್‌ ಠಾಣೆಯ ಪಿಎಸ್‌ಐ ಸಾಲಂ ಹುಸೇನ ಹೇಳಿದರು.
Vijaya Karnataka Web travel is a must
ಪ್ರಯಾಣದಲ್ಲಿ ಎಚ್ಚರಿಕೆ ಅಗತ್ಯ


ನಗರದ ರೇಲ್ವೆ ನಿಲ್ದಾಣದಲ್ಲಿ ಭಾನುವಾರ ಏರ್ಪಡಿಸಲಾಗಿದ್ದ ಅಪರಾಧ ತಡೆ ಮಾಸಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಪ್ರಯಾಣ ಸಮಯದಲ್ಲಿ ಅಪರಿಚಿತರು ನೀಡುವ ಆಹಾರ ಪದಾರ್ಥಗಳನ್ನು ಸೇವಿಸಬಾರದು. ಕಿಟಕಿ ಪಕ್ಕದಲ್ಲಿರುವ ಪ್ರಯಾಣಿಕರು ತಾವು ಧರಿಸಿರುವ ಬಂಗಾರದ ಆಭರಣಗಳ ಬಗ್ಗೆ ವಿಶೇಷ ಕಾಳಜಿ ಹೊಂದಿರಬೇಕು. ರೈಲು ಚಲಿಸುವಾಗ ಇಳಿಯುವುದಾಗಲಿ ಅಥವಾ ಹತ್ತುವುದಾಗಲಿ ಮಾಡಬಾರದು ಎಂದರು.

ಸ್ಥಳೀಯ ರೇಲ್ವೆ ಠಾಣೆಯ ಮುಖ್ಯ ಪೇದೆ ವಿ.ಮಂಜುನಾಥ, ಸತೀಶಕುಮಾರ, ನಾಗರಾಜ, ಪುಲ್ಲಿ ಫೈರೋಜಖಾನ, ಸುಭಾಸ ದಳವಾಯಿ, ರಮೇಶ ಲಮಾಣಿ ಹಾಗೂ ಪ್ರಯಾಣಿಕರು ಪಾಲ್ಗೊಂಡಿದ್ದರು. ಪಿಎಸ್‌ಐ ಸಾಲಂ ಹುಸೇನ ಮಾತನಾಡಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ