ಆ್ಯಪ್ನಗರ

ಮತ ಜಾಗೃತಿಗೆ ವಿಶೇಷಚೇತನರಿಂದ ತ್ರೈಸಿಕಲ್‌ ಜಾಥಾ

ಹಾವೇರಿ : ನಗರದ ತಾಲೂಕು ಪಂಚಾಯಿತಿ ವತಿಯಿಂದ ವಿಶೇಷಚೇತನರ ತಾಲೂಕ ಮಟ್ಟದ ತ್ರೈಸಿಕಲ್‌ ಜಾಥಾದ ಮೂಲಕ ಮತದಾನದ ಜಾಗೃತಿ ಕಾರ್ಯಕ್ರಮ ನಡೆಯಿತು.

Vijaya Karnataka 28 Mar 2019, 5:00 am
ಹಾವೇರಿ : ನಗರದ ತಾಲೂಕು ಪಂಚಾಯಿತಿ ವತಿಯಿಂದ ವಿಶೇಷಚೇತನರ ತಾಲೂಕ ಮಟ್ಟದ ತ್ರೈಸಿಕಲ್‌ ಜಾಥಾದ ಮೂಲಕ ಮತದಾನದ ಜಾಗೃತಿ ಕಾರ್ಯಕ್ರಮ ನಡೆಯಿತು.
Vijaya Karnataka Web HVR-26 HAVERI 9-


ತಾ.ಪಂ. ಇಒ ಅನ್ನಪೂರ್ಣ ಮುದುಕಮ್ಮನÜವರ ಬೈಸಿಕಲ್‌ ಜಾಥಾಕ್ಕೆ ಚಾಲನೆ ನೀಡಿ ಮಾತನಾಡಿ, ಮತದಾನ ಎನ್ನುವುದು ಪ್ರಜಾಪ್ರಭುತ್ವದ ಆಧಾರ ಸ್ತಂಭ. ಈ ಸ್ತಂಭ ಗÜಟ್ಟಿಯಾಗಿರಬೇಕಾದರೆ ಮತದಾನದ ಪ್ರಮಾಣ ಹೆಚ್ಚಾಗಬೇಕಿದೆ. ಅಂದಾಗ ಮಾತ್ರ ಪ್ರಜಾಪ್ರಭುತ್ವ ಯಶಸ್ಸಿ ಆಗಲು ಸಾಧ್ಯ ಎಂದರು.

ಪ್ರಜ್ಞಾವಂತ ಮತದಾರರು ಪ್ರಜಾ ಪ್ರಭುತ್ವದ ಮೂಲಭೂತ ಹಕ್ಕಾದ ಮತದಾನದಲ್ಲಿ ಕಡ್ಡಾಯವಾಗಿ ಪಾಲ್ಗೊಂಡು ದೇಶದ ಅಭಿವೃದ್ಧಿಗೆ ಕೈಜೋಡಿಸಬೇಕಿದೆ. ನಾವು ಮತದಾನ ಮಾಡುವುದಲ್ಲದೆ ನಮ್ಮ ಸುತ್ತಮುತ್ತಲಿನವರು ಮತದಾನ ಮಾಡಿದ ಬಗ್ಗೆ ಖಾತ್ರಿ ಪಡಿಸಿಕೊಳ್ಳಬೇಕು. ಮತದಾನದಿಂದ ದೂರ ಉಳಿದವರಿಗೆ ಮತದಾನದ ಮಹತ್ವ ಕುರಿತು ತಿಳಿಹೇಳುವ ಮೂಲಕ ಮತದಾನ ಮಾಡುವಂತೆ ಪ್ರೇರೆಪಿಸಬೇಕು ಎಂದು ಹೇಳಿದರು.

ಈ ಸಂದರ್ಭದಲ್ಲಿ ಮತದಾರರಿಗೆ ಪ್ರತಿಜ್ಞಾವಿಧಿ ಬೋಧಿಸಿದರು. ನಗರದ ಪ್ರಮುಖ ಬೀದಿಗಳಲ್ಲಿ ಮತದಾಜ ಜಾಗೃತಿ ಜಾಥಾ ನಡೆಸಿ ತಾಲೂಕು ಪಂಚಾಯಿತಿಗೆ ಬಂದು ತಲುಪಿತು. ನಂತರ ತಾಲೂಕ ಪಂಚಾಯಿತಿ ಆವರಣದಲ್ಲಿ ಮತದಾನ ಜಾಗೃತಿ ಕಾರ್ಯಕ್ರಮದಲ್ಲಿ ವಿವಿ ಪ್ಯಾಟ ಪ್ರಾತ್ಯಕ್ಷಿಕೆ ನೀಡಲಾಯಿತು. ಕಾರ್ಯಕ್ರಮದಲ್ಲಿ ತಾಲೂಕ ಮಟ್ಟದ ಸಿಬ್ಬಂದಿ, ಕಾರ್ಯಕರ್ತೆಯರು, ವಿಶೇಷಚೇತನರು, ಸಾರ್ವಜನಿಕರು ಭಾಗವಹಿಸಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ