ಆ್ಯಪ್ನಗರ

ಯುಗಾದಿ: ಖರೀದಿ ಭರಾಟೆ ಜೋರು

ರಾಣೇಬೆನ್ನೂರ : ಯುಗಾದಿ ಹಬ್ಬದ ಆಚರಣೆಗಾಗಿ ನಗರ ಹಾಗೂ ಗ್ರಾಮೀಣ ಪ್ರದೇಶದಿಂದ ಆಗಮಿಸಿದ ಜನರು ಶುಕ್ರವಾರ ಇಲ್ಲಿನ ಎಂ.ಜಿ. ರಸ್ತೆ ಮಾರುಕಟ್ಟೆ ಪ್ರದೇಶದಲ್ಲಿ ಅಗತ್ಯ ವಸ್ತುಗಳ ಖರೀದಿಯಲ್ಲಿ ತೊಡಗಿರುವುದು ಕಂಡುಬಂದಿತು.

Vijaya Karnataka 6 Apr 2019, 5:00 am
ರಾಣೇಬೆನ್ನೂರ : ಯುಗಾದಿ ಹಬ್ಬದ ಆಚರಣೆಗಾಗಿ ನಗರ ಹಾಗೂ ಗ್ರಾಮೀಣ ಪ್ರದೇಶದಿಂದ ಆಗಮಿಸಿದ ಜನರು ಶುಕ್ರವಾರ ಇಲ್ಲಿನ ಎಂ.ಜಿ. ರಸ್ತೆ ಮಾರುಕಟ್ಟೆ ಪ್ರದೇಶದಲ್ಲಿ ಅಗತ್ಯ ವಸ್ತುಗಳ ಖರೀದಿಯಲ್ಲಿ ತೊಡಗಿರುವುದು ಕಂಡುಬಂದಿತು.
Vijaya Karnataka Web HVR-5RNR2
ರಾಣೇಬೆನ್ನೂರಿನ ಎಂ.ಜಿ.ರಸ್ತೆಯ ಮಾರುಕಟ್ಟೆಯಲ್ಲಿ ಯುಗಾದಿ ಹಬ್ಬದ ಖರೀದಿಗಾಗಿ ಮುಗಿಬಿದ್ದಿರುವ ಜನತೆ.


ಹಬ್ಬದ ಪ್ರಯುಕ್ತ ಹೊಸ ಬಟ್ಟೆ ಖರೀದಿಗಾಗಿ ಜನರು ಹೆಚ್ಚಿನ ಸಂಖ್ಯೆಯಲ್ಲಿ ಮುಗಿಬಿದ್ದಿದ್ದರಿಂದ ಬಟ್ಟೆ ಅಂಗಡಿಗಳಲ್ಲಿ ನೂಕುನುಗ್ಗಲು ಕಂಡುಬಂದಿತು. ಇದಲ್ಲದೆ ಕಿರಾಣಿ, ಬೆಳ್ಳಿ ಬಂಗಾರದ ಅಂಗಡಿಗಳಲ್ಲಿ ಹಾಗೂ ಕಾಯಿಪಲ್ಲೆ ಮಾರುಕಟ್ಟೆಯಲ್ಲಿಯೂ ಜನದಟ್ಟಣೆ ಅಧಿಕವಾಗಿತ್ತು.

ಸಂಚಾರ ದಟ್ಟಣೆ:

ವಿವಿಧ ವಸ್ತುಗಳ ಖರೀದಿಗಾಗಿ ಜನರು ಪೇಟೆಗೆ ದಾಂಗುಡಿಯಿಟ್ಟದ್ದರಿಂದ ಇಲ್ಲಿನ ಮುಖ್ಯ ಮಾರುಕಟ್ಟೆ ಪ್ರದೇಶವಾದ ಎಂ.ಜಿ.ರಸ್ತೆಯಲ್ಲಿ ಸಂಚರಿಸಲು ವಾಹನ ಸವಾರರು ಪರದಾಡುವಂತಾಗಿತ್ತು. ಸಂಚಾರಿ ಪೊಲೀಸ್‌ ಇದ್ದರೂ ಸಂಚಾರ ದಟ್ಟಣೆಯನ್ನು ಕಡಿಮೆ ಮಾಡಲು ಪ್ರಯಾಸಪಡಬೇಕಾಯಿತು.

ದರದಲ್ಲಿ ಹೆಚ್ಚಳ:

ಕಳೆದ ವರ್ಷಕ್ಕೆ ಹೊಲಿಸಿದರೆ ಈ ಬಾರಿ ಮಾರುಕಟ್ಟೆಯಲ್ಲಿ ಹಣ್ಣು, ಹಂಪಲ, ಹೂವುಗಳ ಬೆಲೆಯಲ್ಲಿ ಏರಿಕೆಯಾಗಿದೆ. ಸೇಬು 150 ರೂ.ಕೆಜಿ, ಮೊಸಂಬಿ 80ರೂ., ದ್ರಾಕ್ಷಿ 80 ರೂ. ದಾಳಿಂಬೆ 100ರೂ., ಚಿಕ್ಕು 50 ರೂ. ಮತ್ತು ಸೇವಂತಿ ಮಾಲೆ 40ರೂ., ಮಲ್ಲಿಗೆ ಹಾಗೂ ಕನಕಾಂಬರಿ 40ರೂ.ಗೆ ಮಾರಿನಂತೆ ಮಾರಾಟ ಮಾಡುತ್ತಿರುವುದು ಗೋಚರಿಸಿತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ