ಆ್ಯಪ್ನಗರ

ಪ್ರತಿಭಾ ಕಾರಂಜಿಯಿಂದ ಪ್ರತಿಭೆ ಅನಾವರಣ

ಬ್ಯಾಡಗಿ: ಮಕ್ಕಳಲ್ಲಿ ಅಡಗಿರುವ ಪ್ರತಿಭೆಗಳು ಅನಾವರಣಗೊಳ್ಳಲು ಪ್ರತಿಭಾ ಕಾರಂಜಿಯಂತಹ ಕಾರ‍್ಯಕ್ರಮಗಳು ವೇದಿಕೆಯಾಗಿವೆ ಎಂದು ಕ್ಷೇತ್ರ ಸಮನ್ವಾಧಿಕಾರಿ ಎಂ.ಎಫ್‌.ಬಾರ್ಕಿ ಅಭಿಪ್ರಾಯಪಟ್ಟರು.

Vijaya Karnataka 5 Aug 2019, 5:00 am
ಬ್ಯಾಡಗಿ: ಮಕ್ಕಳಲ್ಲಿ ಅಡಗಿರುವ ಪ್ರತಿಭೆಗಳು ಅನಾವರಣಗೊಳ್ಳಲು ಪ್ರತಿಭಾ ಕಾರಂಜಿಯಂತಹ ಕಾರ‍್ಯಕ್ರಮಗಳು ವೇದಿಕೆಯಾಗಿವೆ ಎಂದು ಕ್ಷೇತ್ರ ಸಮನ್ವಾಧಿಕಾರಿ ಎಂ.ಎಫ್‌.ಬಾರ್ಕಿ ಅಭಿಪ್ರಾಯಪಟ್ಟರು.
Vijaya Karnataka Web unveiling talent from pratibha fountain
ಪ್ರತಿಭಾ ಕಾರಂಜಿಯಿಂದ ಪ್ರತಿಭೆ ಅನಾವರಣ


ಪಟ್ಟಣದ ಸರಕಾರಿ ಮಾದರಿ ಪ್ರಾಥಮಿಕ ಪ್ರಾಥಮಿಕ ಶಾಲೆ ನಂ.1ರಲ್ಲಿ ನಡೆದ ಕ್ಲಸ್ಟರ ಮಟ್ಟದ ಪ್ರತಿಭಾ ಕಾರಂಜಿ ಹಾಗೂ ನೂತನ ಪುರಸಭೆ ಸದಸ್ಯರ ಸನ್ಮಾನ ಕಾರ‍್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಪ್ರತಿಭೆ ಯಾರೊಬ್ಬರ ಸ್ವತ್ತಲ್ಲ ಎಂಬುದಕ್ಕೆ ದೈಹಿಕ ನೂನ್ಯತೆಯಲ್ಲಿಯೂ ಸಾಧನೆ ಮಾಡಿದ ಹಲವಾರು ಸಾಧಕರು ಜಗತ್ತಿಗೆ ಮಾದರಿಯಾಗಿದ್ದಾರೆ ಎಂದರು.

ಅಕ್ಷ ರ ದಾಸೋಹಾಧಿಕಾರಿ ತಿಮ್ಮಾರೆಡ್ಡಿ ಮಾತನಾಡಿ, ಭಾರತೀಯ ಸಂಸ್ಕೃತಿ ಮತ್ತು ಪರಂಪರೆಯನ್ನು ಜಗತ್ತಿಗೆ ಪರಿಚಯಿಸುವುದರ ಹಿಂದೆ ಹಲವಾರು ಸಾಧಕರ ಶ್ರಮ ಅನನ್ಯವಾಗಿದೆ. ಭಾರತೀಯ ನೃತ್ಯ, ಕಲೆ ಸಂಗೀತ, ಸಂಸ್ಕೃತಿಗೆ ಜಗತ್ತಿನಲ್ಲಿ ತಲೆಬಾಗದವರಿಲ್ಲ ಇಂತಹ ಸಾಕಷ್ಟು ಕಲಾರಾಧಕರನ್ನು ಹಾಗೂ ಕಲಾವಿದರನ್ನು ಹೊಂದಿರುವ ಭಾರತದಲ್ಲಿ ಪ್ರತಿಭೆ ಗಳಿಗೆನೂ ಕೊರತೆæಯಿಲ್ಲ ಎಂದರು.

ಇದೇ ಸಂದರ್ಬದಲ್ಲಿ ನೂತನವಾಗಿ ಪಟ್ಟಣದ 3 ನೇ ವಾರ್ಡಗೆ ಆಯ್ಕೆಯಾದ ಪುರಸಭೆ ಸದಸ್ಯೆ ಮಂ ಜುಳಾ ಗೆಜ್ಜುಹಳ್ಳಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಎಸ್‌ಡಿಎಂಸಿ ಅಧ್ಯಕ್ಷ ರಾಜೇಸಾಬ ಕಳ್ಳಿಹಾಳ, ಮುಖ್ಯ ಶಿಕ್ಷ ಕ ಡಿ.ಎಂ.ಮೂಧೋಳ, ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಎ.ಎಂ.ಸೌದಾಗರ, ರೈತ ಮುಖಂಡ ಬಸವರಾಜ ಸಂಕಣ್ಣನವರ, ಪರಷುರಾಮ ಗೆಜ್ಜಿಹಳ್ಳಿ, ಉಮೇಶ ಸಂಕಣ್ಣನವರ, ಎ.ಟಿ.ನವಲೆ ಇನ್ನಿತರರು ಉಪಸ್ಥಿತರಿದ್ದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ