ಆ್ಯಪ್ನಗರ

ಉಸ್ಸಪ್ಪಾ... ಏನ್ರೀ ಬಿಸಿಲ ಇದು...!

ಹಾವೇರಿ: ಶಿವರಾತ್ರಿ ಮುನ್ನವೇ ಜಿಲ್ಲೆಯಲ್ಲಿ ಬೇಸಿಗೆಯ ಬಿಸಿಲಿನ ತಾಪ ಹೆಚ್ಚುತ್ತಿದ್ದು, ಜನ ಬಿಸಿಲಿನ ಬೇಗೆ ತಾಳದೇ ತಂಪು ಪಾನೀಯಗಳ ಮೊರೆ ಹೋಗುತ್ತಿದ್ದಾರೆ.

Vijaya Karnataka 19 Feb 2019, 5:00 am
ಹಾವೇರಿ: ಶಿವರಾತ್ರಿ ಮುನ್ನವೇ ಜಿಲ್ಲೆಯಲ್ಲಿ ಬೇಸಿಗೆಯ ಬಿಸಿಲಿನ ತಾಪ ಹೆಚ್ಚುತ್ತಿದ್ದು, ಜನ ಬಿಸಿಲಿನ ಬೇಗೆ ತಾಳದೇ ತಂಪು ಪಾನೀಯಗಳ ಮೊರೆ ಹೋಗುತ್ತಿದ್ದಾರೆ.
Vijaya Karnataka Web ussappa what is the hot sun
ಉಸ್ಸಪ್ಪಾ... ಏನ್ರೀ ಬಿಸಿಲ ಇದು...!


ಶಿವರಾತ್ರಿ ಬಿಸಿಲಿಗೆ ಜನರು ಶಿವ ಶವ ಎನ್ನುವ ಮಾತಿದೆ. ಆದರೆ, ಶಿವರಾತ್ರಿ ಇನ್ನೂ 20 ದಿನಗಳು ಇರುವಾಗಲೇ ನಗರದಲ್ಲಿ ಬಿಸಿಲಿನ ಪ್ರಖರತೆ ದಿನದಿಂದ ಹೆಚ್ಚಾಗುತ್ತಿದೆ. ನೆತ್ತಿಯ ಮೇಲೆ ಸೂರ್ಯನ ಬಿಸಿಲಿ ತಾಪ, ಕೆಳಗೆ ರಸ್ತೆ ಉರಿಯಿಂದ ಜನ ಚಡಪಡಿಸುವಂತಾಗಿದೆ.

ದೇಹವನ್ನು ತಂಪು ಮಾಡಿಕೊಳ್ಳಲು ನಗರದ ಜನತೆ ಎಳೆನೀರು, ಕಲ್ಲಂಗಡಿ, ದ್ರಾಕ್ಷಿ, ಕರಬೂಜಾ, ಪಪ್ಪಾಯಿ, ಕಿತ್ತಳೆ ಹಣ್ಣುಗಳು ಸೇರಿದಂತೆ ಕಬ್ಬಿನ ಹಾಲು, ಮಜ್ಜಿಗೆ, ಲಸ್ಸಿ, ಸೋಡಾ, ಸರಬತ್ತಿನಂತ ತಂಪು ಪಾನೀಯಗಳ ಮೊರೆ ಹೋಗುತ್ತಿದ್ದಾರೆ. ಇನ್ನು ರಸ್ತೆಯಲ್ಲಿ ಓಡಾಡಲು ಸಾಧ್ಯವಾಗದ ಕಾರಣ ಮಹಿಳೆಯರು, ಮಕ್ಕಳು, ವೃದ್ಧರು ಛತ್ರಿಗಳ ಮೊರೆ ಹೋಗುತ್ತಿದ್ದಾರೆ. ಯುವತಿಯರು ಮುಖಕ್ಕೆ ಸ್ಕಾರ್ಪ್‌ ಹಾಕಿಕೊಂಡು ಓಡಾಡುವಂತಾಗಿದೆ.

ಭರ್ಜರಿ ವ್ಯಾಪಾರ : ನಗರದ ಪ್ರಮುಖ ಸ್ಥಳಗಳಲ್ಲಿ ಎಳೆನೀರು, ಕಲ್ಲಂಗಡಿ, ದ್ರಾಕ್ಷಿ, ಕರಬೂಜಾ, ಕಿತ್ತಳೆ ಹಣ್ಣುಗಳ ಸೇರಿದಂತೆ ಇತರೆ ತಂಪು ಪಾನೀಯಗಳು ವ್ಯಾಪಾರ ಭರ್ಜರಿ ನಡೆಯುತ್ತಿದೆ.

ಒಂದೆಡೆ ಬಿಸಿಲ ತಾಪ ಹೆಚ್ಚಾದರೆ ಇನ್ನೊಂದೆಡೆ ಜನರಿಗೆ ತಂಪು ಪಾನೀಯ ಬೆಲೆ ಏರಿಕೆ ಬಿಸಿ ಹೆಚ್ಚಾಗಿದೆ. ಇದನ್ನೆ ಬಂಡವಾಳ ಮಾಡಿಕೊಂಡ ವ್ಯಾಪಾರಸ್ಥರು ಹಣ್ಣುಗಳ ಬೆಲೆ ಏರಿಕೆ ಮಾಡುತ್ತಲೆ ಇದ್ದಾರೆ. ಎಳನೀರು 25 ರಿಂದ 30ರೂ., ಕಲ್ಲಂಗಡಿ 10 ರೂ. ಪ್ಲೇಟ್‌ಗೆ 15 ರೂ., ಮಿಕ್ಸ್‌ ಹಣ್ಣುಗಳು ಪ್ಲೇಟ್‌ 20 ರಿಂದ 25 ರೂ. ಏರಿಕೆ ಕಂಡಿವೆ. ತಂಪು ಪಾನೀಯ ಬೆಲೆಯೂ ವಾರದೊಳಗೆ ಏರಿಕೆಯಾಗಲಿವೆ ಎನ್ನುತ್ತಾರೆ ತಂಪು ಪಾನಿಯ ಅಂಗಡಿಯ ಮಾಲಕರು.

34 ಡಿ.ಸೆ.: ಸದ್ಯಕ್ಕೆ ಹಾವೇರಿಯಲ್ಲಿ ಗರಿಷ್ಠ 34 ಡಿ.ಸೆ.ನಷ್ಟು ತಾಪಮಾನ ಏರಿಕೆಯಾಗಿದೆ. ಮುಂದಿನ ದಿನಗಳಲ್ಲಿ ಈ ಪ್ರಮಾಣ ಇನ್ನಷ್ಟು ಏರಿಕೆಯಾಗುವ ಸಾಧ್ಯತೆಗಳಿವೆ. ಬೆಳಗ್ಗೆ 10 ಗಂಟೆ ನಂತರ ಬಿಸಿಲ ತಾಪ ಏರುತ್ತಾ ಮಧ್ಯಾಹ್ನದ ವೇಳೆ ಪ್ರಖರಗೊಳ್ಳುತ್ತಿದ್ದು, ಜನ ಸಂಕಟಪಡುವಂತಾಗಿದೆ. ರಾತ್ರಿಯೂ ಸೆಖೆಯಿಂದ ಎಸಿ, ಫ್ಯಾನ್‌ಗಳ ಮೊರೆ ಹೋಗುವುದು ಅನಿವಾರ್ಯವಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ