ಆ್ಯಪ್ನಗರ

ಸತ್ಪುರುಷ ಆಗಬಲ್ಲ ಎಂಬುದಕ್ಕೆ ವಾಲ್ಮೀಕಿ ಸಾಕ್ಷಿ

ಶಿಗ್ಗಾವಿ: ಕಠೋರ ಹೃದಯಿ ಕೂಡ ಸತ್ಪುರುಷ ಆಗಬಲ್ಲಎಂಬುದಕ್ಕೆ ಮಹರ್ಷಿ ವಾಲ್ಮೀಕಿಯವರ ಜೀವನ ಸಾಕ್ಷಿ ಎಂದು ಕನ್ನಡ ಜಾನಪದ ಶಿಕ್ಷಣ ಸಂಸ್ಥೆ ಪ್ರಧಾನ ಕಾರ್ಯದರ್ಶಿ ಬಸವರಾಜ ಮಡಿವಾಳರ ಹೇಳಿದರು.

Vijaya Karnataka 14 Oct 2019, 5:00 am
ಶಿಗ್ಗಾವಿ: ಕಠೋರ ಹೃದಯಿ ಕೂಡ ಸತ್ಪುರುಷ ಆಗಬಲ್ಲಎಂಬುದಕ್ಕೆ ಮಹರ್ಷಿ ವಾಲ್ಮೀಕಿಯವರ ಜೀವನ ಸಾಕ್ಷಿ ಎಂದು ಕನ್ನಡ ಜಾನಪದ ಶಿಕ್ಷಣ ಸಂಸ್ಥೆ ಪ್ರಧಾನ ಕಾರ್ಯದರ್ಶಿ ಬಸವರಾಜ ಮಡಿವಾಳರ ಹೇಳಿದರು.
Vijaya Karnataka Web 13SGN-2_23


ಭಾನುವಾರ ತಾಲೂಕಿನ ಗೊಟಗೋಡಿ ಉತ್ಸವ ರಾಕ್‌ ಗಾರ್ಡನ್‌ನ ರಾಜ್‌ಕುಮಾರ್‌ ಸರ್ಕಲ್‌ನಲ್ಲಿಕನ್ನಡ ಜಾನಪದ ಶಿಕ್ಷಣ ಸಂಸ್ಥೆ ಹಾಗೂ ಉತ್ಸವ ರಾಕ್‌ ಗಾರ್ಡನ್‌ ಸಮಿತಿ ವತಿಯಿಂದ ನಡೆದ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ನಾವು ಮಾಡಿದ ಪಾಪ ಕೃತ್ಯಗಳನ್ನು ಮಡದಿ, ಮಕ್ಕಳು ಹೊರಲಾರರು ಎಂಬ ಸತ್ಯವನ್ನು ಅರಿತು ದರೋಡೆಕರ ರತ್ನಾಕರ (ವಾಲ್ಮೀಕಿಯವರ ಮೂಲ ನಾಮಧೇಯ) ಮಹರ್ಷಿ ನಾರದ ಮುನಿಯವರು ಹೇಳಿಕೊಟ್ಟ ಮರ ಎಂಬ ಮಂತ್ರ ವರ್ಷಾನುಗಟ್ಟಲೆ ಪಠಿಸಿ, ವಾಲ್ಮೀಕಿ ಎಂಬ ಹೆಸರು ಪಡೆದ ಕಥೆಯ ಪರಿಚಯ ವಿದ್ಯಾರ್ಥಿಗಳಿಗೆ ಮಾಡಿಸುವುದು ಶಿಕ್ಷಕರ ಕರ್ತವ್ಯ ಎಂದರು.

ಬಸವರಾಜ ಮಡಿವಾಳರ ಮಾತನಾಡಿ, ಪ್ರತಿಯೊಬ್ಬರ ಜೀವನದಲ್ಲಿಗುರುವಿನ ಪಾತ್ರ ಅತ್ಯಂತ ಮಹತ್ವವಾದುದು ಎಂಬುದಕ್ಕೆ ವಾಲ್ಮೀಕಿ ಅವರ ಜೀವನ ಪ್ರತ್ಯಕ್ಷ ಸಾಕ್ಷಿಯಾಗಿದೆ. ಕಠಿಣ ಹೃದಯಿಯೊಬ್ಬನ್ನುತ್ರಸತ್ಪುರುಷನನ್ನಾಗಿ ಮಾಡಿರುವ ಗುರು ಗೌರವ ಮಹರ್ಷಿ ಶ್ರೀನಾರದಮುನಿ ಅವರಿಗೆ ಸಲ್ಲುತ್ತದೆ ಎಂದರು.

ಉತ್ಸವ ಶಾಲೆ ಶಿಕ್ಷಕರಾದ ಅಕ್ಕಮಹಾದೇವಿ ಹಿರೇಮಠ, ಶೃತಿ ಪೊಲೀಸಗೌಡರ, ಉಮಾ ಪಾಟೀಲ, ಅಮೃತ ಬಡ್ಡಿ, ಮಮತಾ ಮಾಯಣ್ಣನವರ, ರತ್ನಮ್ಮ, ಶೈಲಜಾ ಸುಂಕದ, ಮಹೇಶ ವಡ್ಡರ ಉಪಸ್ಥಿತರಿದ್ದರು. ಮಂಜಪ್ಪ ಇಂದೂರ ಸ್ವಾಗತಿಸಿದರು. ಚಂದ್ರಪ್ಪ ಲಾಬಗೊಂಡ ನಿರೂಪಿಸಿದರು. ಘಟ್ಟಿಗೆಪ್ಪಗೌಡ ಪಾಟೀಲ ವಂದಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ