ಆ್ಯಪ್ನಗರ

ಹಾನಿ ಪ್ರದೇಶಕ್ಕೆ ಭೇಟಿ, ಪರಿಶೀಲನೆ

ಹಾವೇರಿ: ನೆರೆ ಪೀಡಿತ ವಿವಿಧ ಪ್ರದೇಶಗಳಿಗೆ ಅಪರ ಮುಖ್ಯ ಕಾರ್ಯರ್ಶಿ ವಿ.ಮಂಜುಳಾ ಅವರು ಶುಕ್ರವಾರ ಭೇಟಿ ನೀಡಿ ಪರಿಶೀಲಿಸಿದರು. ನಾಗೇಂದ್ರನಮಟ್ಟಿ ಕಾಳಜಿ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ನಂತರ ಸಂತ್ರಸ್ತರೊಂದಿಗೆ ಮಾತನಾಡಿ, ಶುದ್ಧ ನೀರು, ವೈದ್ಯಕೀಯ ಸೌಕರ್ಯದ ಮಾಹಿತಿ

Vijaya Karnataka 17 Aug 2019, 5:00 am
ಹಾವೇರಿ: ನೆರೆ ಪೀಡಿತ ವಿವಿಧ ಪ್ರದೇಶಗಳಿಗೆ ಅಪರ ಮುಖ್ಯ ಕಾರ್ಯರ್ಶಿ ವಿ.ಮಂಜುಳಾ ಅವರು ಶುಕ್ರವಾರ ಭೇಟಿ ನೀಡಿ ಪರಿಶೀಲಿಸಿದರು.
Vijaya Karnataka Web HVR-16 HAVERI 18
ಹಾನಗಲ್ಲ ತಾಲೂಕಿನ ಹಳೆ ಕೂಡಲ ಗ್ರಾಮಕ್ಕೆ ಶುಕ್ರವಾರ ನೆರೆ ಪರಿಹಾರ ಜಿಲ್ಲಾ ನೋಡಲ್‌ ಅಧಿಕಾರಿ ವಿ.ಮಂಜುಳಾ ಭೇಟಿ ನೀಡಿ ಕುಸಿತಗೊಂಡಿರುವ ಮನೆಯನ್ನು ವೀಕ್ಷಿಸಿದರು.

ನಾಗೇಂದ್ರನಮಟ್ಟಿ ಕಾಳಜಿ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ನಂತರ ಸಂತ್ರಸ್ತರೊಂದಿಗೆ ಮಾತನಾಡಿ, ಶುದ್ಧ ನೀರು, ವೈದ್ಯಕೀಯ ಸೌಕರ್ಯದ ಮಾಹಿತಿ ಪಡೆದರು. ಬೆಂಗಳೂರು-ಪೂಣೆ ಹೆದ್ದಾರಿಯ ವರದಾ ಸೇತುವೆಯ ಬಳಿ ಬೆಳೆಗೆ ನೀರು ನುಗ್ಗಿ ಹಾನಿಯಾಗಿದ್ದನ್ನು ಅವಲೋಕಿಸಿದರು. ಕುಣಿಮೆಳ್ಳಿಹಳ್ಳಿ ಹಾಗೂ ಹರವಿ ಮಾರ್ಗ ಮಧ್ಯದ ಹಳ್ಳದ ನೀರಿನಿಂದ ಬೆಳೆ ಹಾನಿ ವೀಕ್ಷಿಸಿದ್ದರು. ಹೊಸ ಕೂಡಲ ಗ್ರಾಮದ ಕಾಳಜಿ ಕೇಂದ್ರದ ಸಂತ್ರಸ್ತರೊಂದಿಗೆ ಮಾತುಕತೆ ನಡೆಸಿದರು.

ಹಳೆ ಕೂಡಲ ಗ್ರಾಮಕ್ಕೆ ಭೇಟಿ ನೀಡಿ ಮನೆ ಕುಸಿತ ಪರಿಶೀಲಿಸಿದರು. ಗ್ರಾಮಸ್ಥರೊಂದಿಗೆ ಮಾತನಾಡಿದ ಅವರು, ಹೊಸ ಕೂಡಲ ಗ್ರಾಮದಲ್ಲಿ ಈಗಾಗಲೇ ತಮಗೆ ನಿವೇಶನ ನೀಡಿದೆ. ಸರ್ಕಾರ ನಿಮಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಿದೆ. ಅಲ್ಲಿಯೇ ಹೊಸ ಮನೆ ನಿರ್ಮಾಣ ಮಾಡಿಕೊಳ್ಳಬೇಕು ಎಂದು ಮನವರಿಕೆ ಮಾಡಿಕೊಟ್ಟರು. ಯಾರಾರ‍ಯರಿಗೆ ನಿವೇಶನವಿಲ್ಲವೋ ಅಂತವರ ವಿವರ ಸಲ್ಲಿಸಲು ಪಿಡಿಒಗೆ ಸೂಚಿಸಿದರು. ಬಂಕಾಪುರ, ಶಿಗ್ಗಾಂವ-ಸವಣೂರ ಗ್ರಾಮಗಳಿಗೆ ಭೇಟಿ ನೀಡಿ ಪರಿಶೀಲಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ