ಆ್ಯಪ್ನಗರ

ವಿವಿಪ್ಯಾಟ್‌ ಪ್ರಾತ್ಯಕ್ಷಿಕೆ, ಪ್ರತಿಜ್ಞಾ ವಿಧಿ

ಅಕ್ಕಿಆಲೂರು: ನಮ್ಮ ದೇಶದ ಪ್ರಗತಿ ಪ್ರಜಾಪ್ರಭುತ್ವದ ಆಧಾರದಲ್ಲಿ ನಿರ್ಧಾರವಾಗುತ್ತದೆ. ಈ ಹಿನ್ನೆಲೆಯಲ್ಲಿ ಪ್ರತಿಯೊಬ್ಬ ಪ್ರಜೆಯೂ ಮತದಾನ ಮಾಡಿದರೆ ಮಾತ್ರ ಉತ್ತಮ ವ್ಯಕ್ತಿಯ ಆಯ್ಕೆ ಮಾಡಲು ಸಾಧ್ಯವಿದೆ ಎಂದು ಹಾನಗಲ್‌ ತಾಲೂಕಾ ಸೆಕ್ಟರ್‌ ಅಧಿಕಾರಿ ಬಿ.ಎಂ.ಬೇವಿನಮರದ ಮನವಿ ಮಾಡಿದರು.

Vijaya Karnataka 8 Apr 2019, 5:00 am
ಅಕ್ಕಿಆಲೂರು: ನಮ್ಮ ದೇಶದ ಪ್ರಗತಿ ಪ್ರಜಾಪ್ರಭುತ್ವದ ಆಧಾರದಲ್ಲಿ ನಿರ್ಧಾರವಾಗುತ್ತದೆ. ಈ ಹಿನ್ನೆಲೆಯಲ್ಲಿ ಪ್ರತಿಯೊಬ್ಬ ಪ್ರಜೆಯೂ ಮತದಾನ ಮಾಡಿದರೆ ಮಾತ್ರ ಉತ್ತಮ ವ್ಯಕ್ತಿಯ ಆಯ್ಕೆ ಮಾಡಲು ಸಾಧ್ಯವಿದೆ ಎಂದು ಹಾನಗಲ್‌ ತಾಲೂಕಾ ಸೆಕ್ಟರ್‌ ಅಧಿಕಾರಿ ಬಿ.ಎಂ.ಬೇವಿನಮರದ ಮನವಿ ಮಾಡಿದರು.
Vijaya Karnataka Web HVR-7AKR3


ಹಾನಗಲ್‌ ತಾಲೂಕಿನ ಇನಾಂಯಲ್ಲಾಪುರ ಮತ್ತು ಹನುಮಾಪುರ ಗ್ರಾಮಗಳಲ್ಲಿ ಮತದಾರರ ಸಭೆಯಲ್ಲಿ ವಿವಿ ಪ್ಯಾಟ್‌ ಪ್ರಾತ್ಯಕ್ಷಿಕೆ ಮಾಡಿ ಅವರು ಮಾತನಾಡಿದರು.

ಮತದಾರರು ಮತದಾನದಿಂದ ದೂರವುಳಿಯುವುದು, ಮತದಾನ ನಿರಾಕರಿಸುವುದು, ಉಪೇಕ್ಷಿಸುವುದು ಪ್ರಜಾಪ್ರಭುತ್ವ ವಿರೋಧಿಸಿದಂತೆ. ನಾವು ಜಗತ್ತಿನಲ್ಲಿಯೇ ದೊಡ್ಡ ಪ್ರಜಾಪ್ರಭುತ್ವ ಹೊಂದಿದ್ದೇವೆ. ಅದನ್ನು ರಕ್ಷ ಣೆ ಮಾಡಿಕೊಳ್ಳಬೇಕಾದರೆ ನಾವೆಲ್ಲಾ ಕಡ್ಡಾಯವಾಗಿ ಮತ ಚಲಾಯಿಸಬೇಕು. ನೌಕರ ವರ್ಗದವರು ತಮ್ಮ ತಮ್ಮ ವ್ಯಾಪ್ತಿಯ ಮತದಾರರು ಕಡ್ಡಾಯವಾಗಿ ಮತ ಚಲಾಯಿಸುವಂತೆ ಮನವೊಲಿಸಿ ಮತದಾನದ ಮೂಲಕ ಪ್ರಜಾಪ್ರಭುತ್ವ ಬಲಗೊಳಿಸಬೇಕು ಎಂದು ಕಿವಿಮಾತು ಹೇಳಿದರು.

ಕಲ್ಲಾಪುರ ಪಿಡಿಒ ಬಾಯಕ್ಕ ಕೋಳಿ ಮಾತನಾಡಿ, ಯಾವುದೇ ಆಸೆ, ಆಮಿಷಗಳಿಗೆ ಬಲಿಯಾಗದೇ ತಮ್ಮ ಸ್ವಂತ ವಿವೇಚನೆಯಿಂದ ಮತ ಚಲಾಯಿಸಬೇಕು. ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಮತದಾನ ಹೆಚ್ಚಾಗುವಂತೆ ಸಹಕರಿಸಬೇಕು ಎಂದು ಮನವಿ ಮಾಡಿದರು.

ಇದೇ ಸಂದರ್ಭದಲ್ಲಿ ಮತದಾರರಿಗೆ ಕಡ್ಡಾಯ ಮತದಾನ ಮಾಡುವ ಕುರಿತು ಪ್ರತಿಜ್ಞಾ ವಿಧಿ ಬೋಧಿಸಲಾಯಿತು. ವಿವಿಪ್ಯಾಟ್‌ ಯಂತ್ರದ ಕುರಿತು ಪ್ರಾತ್ಯಕ್ಷಿಕೆ ಮಾಡುವ ಮೂಲಕ ಮತದಾನದ ಪ್ರಕ್ರಿಯೆ ತಿಳಿಸಲಾಯಿತು. ಸಿಆರ್‌ಪಿ ಕುಮಾರ ಗೋಣಿಮಠ, ಮುಖ್ಯೋಪಾಧ್ಯಾಯರಾದ ಪಿ.ಐ.ಬುಡ್ಡನವರ, ಸಿ.ಎಫ್‌.ಡೊಳ್ಳಿನ, ಬಿಎಲ್‌ಒ ವಿ.ಆರ್‌.ಬುಳ್ಳಾಪುರ, ಗೌರಮ್ಮ ಗುಡ್ಡೇರ, ರೇಣುಕಾ ಬಿದರಕೊಪ್ಪ, ಶಿವಲೀಲಾ ಸೋಮಸಾಗರ, ಅನಿತಾ ಬಿದರಕೊಪ್ಪ, ಅಬ್ದುಲ್‌ರಜಾಕ್‌ ಗೊಂದಿ, ಆನಂದ ಕುನ್ನೂರ ಸೇರಿದಂತೆ ಗ್ರಾಮಸ್ಥರು ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ