ಆ್ಯಪ್ನಗರ

ಮತದಾನ ಜಾಗೃತಿ ಫ್ಲೆಕ್ಸ್‌ ಇನ್ನೂ ಇವೆ !

ರಾಣೇಬೆನ್ನೂರ: ಲೋಕಸಭಾ ಚುನಾವಣೆ ಮುಕ್ತಾಯಗೊಂಡು ಕೇಂದ್ರದಲ್ಲಿ ಸರಕಾರ ರಚನೆಯಾಗಿ ತಿಂಗಳು ಗತಿಸಿದರೂ, ನಗರದ ಕೆಲವು ಭಾಗಗಳಲ್ಲಿ ಇಂದಿಗೂ ಮತದಾನ ಜಾಗೃತಿ ಫ್ಲೆಕ್ಸ್‌ಗಳು ರಾರಾಜಿಸುತ್ತಿರುವುದು ಅಚ್ಚರಿಯ ಸಂಗತಿಯಾಗಿದೆ.

Vijaya Karnataka 4 Jul 2019, 5:00 am
ರಾಣೇಬೆನ್ನೂರ: ಲೋಕಸಭಾ ಚುನಾವಣೆ ಮುಕ್ತಾಯಗೊಂಡು ಕೇಂದ್ರದಲ್ಲಿ ಸರಕಾರ ರಚನೆಯಾಗಿ ತಿಂಗಳು ಗತಿಸಿದರೂ, ನಗರದ ಕೆಲವು ಭಾಗಗಳಲ್ಲಿ ಇಂದಿಗೂ ಮತದಾನ ಜಾಗೃತಿ ಫ್ಲೆಕ್ಸ್‌ಗಳು ರಾರಾಜಿಸುತ್ತಿರುವುದು ಅಚ್ಚರಿಯ ಸಂಗತಿಯಾಗಿದೆ.
Vijaya Karnataka Web HVR-3RNR4


ಲೋಕಸಭಾ ಚುನಾವಣೆಯ ಮತದಾನ ರಾಜ್ಯದಲ್ಲಿ ಎರಡು ಹಂತಗಳಲ್ಲಿ ನಡೆದಿತ್ತು. ಹಾವೇರಿ ಲೋಕಸಭಾ ಕ್ಷೇತ್ರದ ಮತದಾನ ಏ.23ರಂದು ನಡೆದಿತ್ತು. ಆ ಸಮಯದಲ್ಲಿ ನಗರದ ಕೆಲವು ಭಾಗಗಳಲ್ಲಿ ಮತದಾನ ಜಾಗೃತಿ ಸಾರುವ ಫ್ಲೆಕ್ಸ್‌ಗಳನ್ನು ಅಳವಡಿಸಲಾಗಿತ್ತು. ಆದರೆ ಚುನಾವಣೆ ಮುಗಿದು ಇಷ್ಟು ದಿನಗಳಾದರೂ ಇಂದಿಗೂ ಇಲ್ಲಿನ ಕೆಇಬಿ ವಿನಾಯಕ ದೇವಸ್ಥಾನ, ದುರ್ಗಾ ಸರ್ಕಲ್‌, ಮಿನಿ ವಿಧಾನಸೌಧದ ಬಳಿ ಅಳವಡಿಸಿರುವ ಫ್ಲೆಕ್ಸ್‌ಗಳನ್ನು ತೆಗೆಯದೇ ಹಾಗೆ ಬಿಟ್ಟಿದ್ದಾರೆ. ಅವುಗಳ ಜಾಗದಲ್ಲಿ ಬೇರೆಯವರಿಗೆ ಫ್ಲೆಕ್ಸ್‌ ಅಳವಡಿಸಲು ಅವಕಾಶ ಮಾಡಿಕೊಟ್ಟರೆ ನಗರಸಭೆಗೆ ಆದಾಯವಾದರೂ ಬರುತ್ತದೆ. ಅದೇಕೋ ನಗರಸಭೆ ಅಧಿಕಾರಿಗಳು ಇತ್ತ ಗಮನ ಹರಿಸದಿರುವುದು ನಿಜಕ್ಕೂ ಅಚ್ಚರಿಯ ಸಂಗತಿಯಾಗಿದೆ ಎಂದು ಸಾರ್ವಜನಿಕರು ಪತ್ರಿಕೆಗೆ ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ