ಆ್ಯಪ್ನಗರ

ಬರಡು ಭೂಮಿಯಲ್ಲಿ ಜಲ ಕ್ರಾಂತಿ

ಕಾಕೋಳ: ಆಧುನೀಕರಣದಿಂದ ಬರಡಾದ ಭೂಮಿಯಲ್ಲಿ ಮತ್ತೆ ಜಲ ಕ್ರಾಂತಿ ಮಾಡುವಲ್ಲಿ ಇಲ್ಲಿನ ರೈತರೊಬ್ಬರು ಮಹತ್ತರ ಸಾಧನೆ ಮಾಡಿದ್ದಾರೆ.

Vijaya Karnataka 22 Mar 2019, 5:00 am
ಕಾಕೋಳ: ಆಧುನೀಕರಣದಿಂದ ಬರಡಾದ ಭೂಮಿಯಲ್ಲಿ ಮತ್ತೆ ಜಲ ಕ್ರಾಂತಿ ಮಾಡುವಲ್ಲಿ ಇಲ್ಲಿನ ರೈತರೊಬ್ಬರು ಮಹತ್ತರ ಸಾಧನೆ ಮಾಡಿದ್ದಾರೆ.
Vijaya Karnataka Web HVR-17KLK01A


ಇದು ರಾಣೇಬೆನ್ನೂರ ತಾಲೂಕಿನ ಕಾಕೋಳದ ಚನ್ನಬಸಪ್ಪ ಕೊಂಬಳಿ ಈ ಕ್ರಾಂತಿಯ ರೂವಾರಿ. 58 ವರ್ಷವಾದರೂ ಚಟುವಟಿಕೆಯಿಂದ ಇರುವ ಇವರು, ಸುಮಾರು 18 ವರ್ಷಗಳ ಕಾಲ ಮಳೆ ನೀರು ಕೊಯ್ಲು, ಸಾವಯವ ಕೃಷಿಗೆ ಉತ್ತೇಜನ, ಪರಿಸರ ಮೇಲಿನ ಅಪಾರವಾದ ಕಾಳಜಿ ಮಾಡುತ್ತಲೇ ಇದ್ದಾರೆ.

ಅಂತರ್ಜಲ ವೃದ್ಧಿ : ಊರಿನ ಗೋರವನಗುಡ್ಡ ಮತ್ತು ತಿಮ್ಮಪ್ಪನ ಗುಡ್ಡದಿಂದ ಮಳೆ ನೀರು ಇಳಿದು ರೈತರ ಪೈರಿಗೆ ಸಮಸ್ಯೆಯಾಗುತ್ತಿತ್ತು. ಇದಕ್ಕೆ ಪರಿಹಾರ ಯೋಚಿಸಿದ ಚನ್ನಬಸಪ್ಪ ಅವರು, ಗುಡ್ಡದ ಸುತ್ತಲು ನರೇಗಾ ಯೋಜನೆಯಡಿ ಇಂಗು ಗುಂಡಿ ತೆಗೆಸಿದರು. ಪ್ರತಿಫಲವಾಗಿ ಎಲ್ಲ ಕಡೆ ನೀರು ನಿಂತು ಇಲ್ಲಿನ ಭಾಗ ಸಮೃದ್ಧವಾಯಿತು.

ಅದೇ ರೀತಿ, ಕಾಕೋಳ ಕಾಯ್ದಿಟ್ಟ ಅರಣ್ಯ ಪ್ರದೇಶದ ಸುಮಾರು 300ಎಕರೆ ವ್ಯಾಪ್ತಿಯಲ್ಲಿ ಉದ್ಯೋಗ ಖಾತ್ರಿ ಮೂಲಕ 500 ಇಂಗು ಗುಂಡಿ, 8 ಸಾವಿರ ಸಸಿಗಳ ನೆಡುತೋಪು ಹಾಕಲಾಯಿತು. ಸ್ಥಳೀಯ ಬೀರೇಶ್ವರ ಪ್ರೌಢಶಾಲೆ ವಿದ್ಯಾರ್ಥಿಗಳಿಂದ ವನಮಹೋತ್ಸವ ಪ್ರಯುಕ್ತ 30 ಸಾವಿರ ಬೀಜದುಂಡೆ ಹಾಕಲಾಯಿತು.

ಪಕ್ಷಿ ಸಂಕುಲ ಪ್ರೀತಿ: ಈ ಭಾಗದಲ್ಲಿ ಚಿಗರಿಗಳ ಸಂತತಿ ಹೆಚ್ಚಿರುವುದರಿಂದ ಅರಣ್ಯ ಇಲಾಖೆಯ ಸಹಾಯದಿಂದ ನೀರಿನ ತೊಟ್ಟಿ, ಹುರಳಿ ಮತ್ತು ನವಣೆ ಬೆಳೆಸಿದ್ದಾರೆ. ಕಾರಿ, ಬಾರಿ, ನೇರಳೆ ಹಣ್ಣಿನ ಗಿಡಗಳನ್ನು ಬೆಳೆಸಿದರೆ ಹಳ್ಳಿಯಲ್ಲಿರುವ ಮಂಗಗಳು ಕಾಡಿಗೆ ಮರಳಬಹುದು ಎಂಬುದು ಅವರ ಯೋಚನೆ.

ಕೊಂಬಂಳಿಯವರು ತಾವು ಬೆಳೆದ ಸಾವಯವ ಸಿರಿಧಾನ್ಯವನ್ನು ಅವರೇ ಬೀಜ ಮಾಡಿ ಮನೆಯಲ್ಲಿಯೇ ಮಾರಾಟ ಮಾಡುತ್ತಾರೆ. ಅದೇ ರೀತಿ, ವಿದ್ಯಾರ್ಥಿಗಳು, ರೈತರಿಗೆ ಮಳೆ ನೀರು ಸಂಗ್ರಹ ಹಾಗೂ ಯುವ ಅಂತರ್ಜಲ ಅರಿವಿನ ಮಾಹಿತಿ ನೀಡುತ್ತಾರೆ. ಇದರ ಫಲವಾಗಿ ಅವರಿಗೆ ಸರಕಾರ ಕೃಷಿ ಪಂಡಿತ ಪ್ರಶಸ್ತಿ ನೀಡಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ