ಆ್ಯಪ್ನಗರ

15 ಕ್ಷೇತ್ರಗಳಲ್ಲೂ ಗೆದ್ದಾಗಿದೆ: ಗೆಲುವಿನ ಅಂತರಕ್ಕಾಗಿ ಕಾಯುತ್ತಿದ್ದೇವೆ ಎಂದ ಸಿಎಂ ಯಡಿಯೂರಪ್ಪ

ಡಿಸೆಂಬರ್ 5 ರ ಉಪ ಚುನಾವಣೆಯಲ್ಲಿ 15 ಕ್ಷೇತ್ರಗಳನ್ನೂ ನಾವು ಗೆದ್ದಾಗಿದೆ. ಗೆಲುವಿನ ಅಂತರಕ್ಕೆ ಮಾತ್ರ ಕಾಯುತ್ತಿದ್ದೇವೆ ಎಂದು ಸಿಎಂ ಯಡಿಯೂರಪ್ಪ ಹೇಳಿಕೊಂಡಿದ್ದಾರೆ. ಬೇರೆಯವರು ಸರಕಾರ ರಚಿಸುವ ಪ್ರಮೆಯವೇ ಬರೋದಿಲ್ಲ ಎಂದೂ ಹೇಳಿದ್ದಾರೆ.

Vijaya Karnataka Web 29 Nov 2019, 1:54 pm
ಹಾವೇರಿ: ಉಪ ಚುನಾವಣೆಗೆ ಇನ್ನು ಕೆಲವೇ ದಿನಗಳು ಬಾಕಿ ಇದ್ದು, ರಾಜಕೀಯ ನಾಯಕರ ಪ್ರಚಾರದ ಅಬ್ಬರ ಜೋರಾಗುತ್ತಿದೆ. ಇದೇ ರೀತಿ ಹಾವೇರಿಯಲ್ಲಿ ಪ್ರಚಾರ ಮಾಡಲು ಆಗಮಿಸಿದ ಸಿಎಂ ಯಡಿಯೂರಪ್ಪ, 15 ಕ್ಷೇತ್ರಗಳಲ್ಲೂ ಗೆಲುವು ಸಾಧಿಸುವ ವಿಶ್ವಾಸ ವ್ಯಕ್ತಪಡಿಸಿದರು.
Vijaya Karnataka Web yeddyurappa 1


ನಮಗೆ ಯಾರ ಸಹಕಾರವೂ ಬೇಡ. ನಾವು ಈಗಾಗಲೇ 15 ಕ್ಷೇತ್ರಗಳನ್ನು ಗೆದ್ದಾಗಿದೆ ಎಂದು ಸಿಎಂ ಯಡಿಯೂರಪ್ಪ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಹಾವೇರಿಯಲ್ಲಿ ಹೆಲಿಪ್ಯಾಡ್‌ನಲ್ಲಿ ಶುಕ್ರವಾರ ಮಾಧ್ಯಮಗಳಿಗೆ ಹೇಳಿಕೆ ನೀಡಿದ ಸಿಎಂ ಯಡಿಯೂರಪ್ಪ ನಮಗೆ ಯಾರ ಸಹಕಾರವೂ ಬೇಡ. ನಾವು ಈಗಾಗಲೇ 15 ಕ್ಷೇತ್ರಗಳನ್ನು ಗೆದ್ದಾಗಿದೆ. ಗೆಲುವಿನ ಅಂತರಕ್ಕೆ ಮಾತ್ರ ನಾವು ಕಾಯುತ್ತಿದ್ದೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಅಲ್ಲದೆ, ನಮಗೆ ಬಹುಮತ ಬಂದೇ ಬರುತ್ತದೆ. ಬೇರೆಯವರು ಸರಕಾರ ರಚಿಸುವ ಪ್ರಮೆಯವೇ ಬರೋದಿಲ್ಲ. ಇನ್ನೂ ಮೂರೂವರೆ ವರ್ಷ ನಾನೇ ಸಿಎಂ ಎಂದೂ ಹಾವೇರಿಯಲ್ಲಿ ಯಡಿಯೂರಪ್ಪ ಹೇಳಿಕೊಂಡಿದ್ದಾರೆ.

ಈ ಸುದ್ದಿ ಓದಿ: ಯಶವಂತಪುರ ಕ್ಷೇತ್ರ: ಒಕ್ಕಲಿಗರ ಸಾಮ್ರಾಜ್ಯದಲ್ಲಿ ಬಿಗ್‌ ಫೈಟ್‌, ಗೆಲ್ಲೋರು ಯಾರು?

ನಂತರ, ಉಪಚುನಾವಣೆ ನಡೆಯುತ್ತಿರುವ ಹದಿನೈದು ಕ್ಷೇತ್ರಗಳಲ್ಲೂ ಗೆಲುವು ನಮ್ಮದೇ. ಯಾರು ಏನೇ ಹೇಳಿದ್ರೂ ಮತದಾರರು ನಮ್ಮ ಪರವಾಗಿದ್ದಾರೆ. ಈಗಾಗಲೇ ಹದಿನೈದು ಕ್ಷೇತ್ರಗಳನ್ನು ಗೆದ್ದಾಗಿದೆ. ಗೆಲುವಿನ ಅಂತರಕ್ಕಾಗಿ ನಾವು ಪೈಪೋಟಿ ಮಾಡ್ತಿದ್ದೇವೆ ಎಂದು ಸಿಎಂ ಯಡಿಯೂರಪ್ಪ ಹಾವೇರಿಯ ಹೆಲಿಪ್ಯಾಡ್‌ನಲ್ಲಿ ಪುನರುಚ್ಚಿಸಿದರು.

ಇದನ್ನೂ ಓದಿ: ಶಿವಾಜಿನಗರದಲ್ಲಿ ಜೆಡಿಎಸ್‌ ಗೆದ್ದರೂ ಅಚ್ಚರಿಯಿಲ್ಲ; ಬಿಜೆಪಿ-ಕಾಂಗ್ರೆಸ್‌ಗೆ ಒಳ ಏಟಿನದ್...

ಮಹಾಲಕ್ಷ್ಮಿ ಲೇಔಟ್‌ ಉಪ ಚುನಾವಣೆ: ಮಹಾಲಕ್ಷ್ಮಿ ವರಕ್ಕಾಗಿ ನಡೀತಿದೆ ತ್ರಿಕೋನ ಸಮರ!

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ