ಆ್ಯಪ್ನಗರ

ಕಿಷ್ಕಿಂದೆ ರಸ್ತೆಗೆ ಮುಕ್ತಿ ಯಾವಾಗ?

ಗಣೇಶ ಅರ್ಕಾಚಾರಿ ಬ್ಯಾಡಗಿ: ಭೂಸ್ವಾಧೀನ ಪ್ರಕ್ರಿಯೆಗೆ ಚಾಲನೆ ನೀಡಲು 15.6 ಕೋಟಿ ರೂ. ಅನುದಾನ ಬಿಡುಗಡೆಯಾಗಿ ಮೂರು ತಿಂಗಳು ಕಳೆಯುತ್ತಾ ಬಂದಿದ್ದರೂ ಪಟ್ಟಣದ ಎರಡನೇ ಹಂತದ ಮುಖ್ಯರಸ್ತೆ ಅಗಲೀಕರಣ (ಗಜೇಂದ್ರಗಡ-ಸೊರಬ ಹೆದ್ದಾರಿ) ಕಾಮಗಾರಿ ಪಟ್ಟಣದ ಜನತೆಯ ಪಾಲಿಗೆ ತಿರುಕನ ಕನಸು ಎಂಬಂತಾಗುತ್ತದೆ.

Vijaya Karnataka 18 Feb 2020, 5:00 am
ಗಣೇಶ ಅರ್ಕಾಚಾರಿ ಬ್ಯಾಡಗಿ: ಭೂಸ್ವಾಧೀನ ಪ್ರಕ್ರಿಯೆಗೆ ಚಾಲನೆ ನೀಡಲು 15.6 ಕೋಟಿ ರೂ. ಅನುದಾನ ಬಿಡುಗಡೆಯಾಗಿ ಮೂರು ತಿಂಗಳು ಕಳೆಯುತ್ತಾ ಬಂದಿದ್ದರೂ ಪಟ್ಟಣದ ಎರಡನೇ ಹಂತದ ಮುಖ್ಯರಸ್ತೆ ಅಗಲೀಕರಣ (ಗಜೇಂದ್ರಗಡ-ಸೊರಬ ಹೆದ್ದಾರಿ) ಕಾಮಗಾರಿ ಪಟ್ಟಣದ ಜನತೆಯ ಪಾಲಿಗೆ ತಿರುಕನ ಕನಸು ಎಂಬಂತಾಗುತ್ತದೆ.
Vijaya Karnataka Web when is the salvation of kishkinde road
ಕಿಷ್ಕಿಂದೆ ರಸ್ತೆಗೆ ಮುಕ್ತಿ ಯಾವಾಗ?


ಪರ ವಿರೋಧಗಳ ನಡುವೆ ತಾಲೂಕಿನ ಸಾರ್ವಜನಿಕರ ಬಹುದಿನಗಳ ಬೇಡಿಕೆಯಾಗಿದ್ದ ಗಜೆಂದ್ರಗಡ-ಸೊರಬ ಹೆದ್ದಾರಿ ಮೊದಲನೆ ಮತ್ತು ಮೂರನೇ ಹಂತದ ಅಗಲೀಕರಣ ಮುಕ್ತಾಯವಾಗಿ ಹಲವು ವರ್ಷಗಳೆ ಕಳೆದಿವೆ, ಆದರೆ ಮುಖ್ಯ ರಸ್ತೆಯಲ್ಲಿನ ಸುಮಾರು 750 ಮೀಟರ್‌ ರಸ್ತೆ ಅಗಲೀಕರಣ ಮಾತ್ರ ಇಲ್ಲಿಯವರೆಗೂ ಮರೀಚಿಕೆಯಾಗಿ ಉಳಿದಿದೆ.

13 ವರ್ಷದ ನಿರಂತರ ಹೋರಾಟ: ಅಂತಾರಾಷ್ಟ್ರೀಯ ಖ್ಯಾತಿ ಮಾರುಕಟ್ಟೆ ಹೊಂದಿರುವ ಬ್ಯಾಡಗಿ ಪಟ್ಟಣ ದಿನದಿನಕ್ಕೆ ವಿಸ್ತಾರ ವಾಗುತ್ತಾ ಸಾಗಿದೆ ಆದರೆ ಅಭಿವೃದ್ಧಿಯಲ್ಲಿಹಿನ್ನಡೆ ಅನುಭವಿಸುತ್ತಿದೆ. ಕಿಷ್ಕಿಂದೆಯಂತಿರುವ ಮುಖ್ಯ ರಸ್ತೆಯನ್ನು ಅಭಿವೃದ್ಧಿಪಡಿಸಿ ಅಗಲೀಕರಣ ಮಾಡುವಂತೆ 2009 ರಿಂದ ಹೋರಾಟಕ್ಕೆ ಚಾಲನೆ ನೀಡಲಾಗಿತ್ತು. ಅಲ್ಲಿಂದ ಇಲ್ಲಿಯವರೆಗೂ 13 ವರ್ಷ ಕಳೆದರೂ ಅಗಲೀಕರಣ ಕಾಮಗಾರಿ ಸಂಪನ್ನವಾಗುತ್ತಿಲ್ಲ.

ಅಗಲೀಕರಣ ಹೋರಾಟದ ಕಿಚ್ಚು ಹೆಚ್ಚಾಗುತ್ತಿದ್ದಂತೆ ಕಳೆದ ವರ್ಷ ಅನುದಾನ ಬಿಡುಗಡೆಯಾಗಿಲ್ಲಬಿಡುಗಡೆಯಾದ ಕೆಲ ದಿನಗಳಲ್ಲಿಸರಕಾರದ ನಿಯಮಾವಳಿಗಳ ಪ್ರಕಾರ ಅತೀ ಶೀಘ್ರದಲ್ಲೆಪ್ರಕ್ರಿಯೆಗೆ ಚಾಲನೆ ನೀಡುವುದಾಗಿ ಹೇಳಿದ್ದ ಉಪವಿಭಾಗಾಧಿಕಾರಿ ಎನ್‌.ತಿಪ್ಪೆಸ್ವಾಮಿ ಇಲ್ಲಿಯವೆಗೂ ಅಗಲೀಕರಣ ಕುರಿತಂತೆ ಸ್ಪಷ್ಟವಾದ ಚಿತ್ರಣ ನೀಡಲು ಮುಂದಾಗಿಲ್ಲಎನ್ನುವುದು ಸಾರ್ವಜನಿಕರ ಆರೋಪವಾಗಿದೆ.

ಅಗಲೀಕರಣ ವಿಳಂಬಕ್ಕೆ ಕಾರಣ ಕುರಿತು ಅಧಿಕಾರಿಗಳನ್ನು ಪ್ರಶ್ನಿಸಿದರೆ ಅಗಲೀಕರಣ ಕಾಮಗಾರಿ ಪ್ರಕ್ರಿಯೆ ಜಾರಿಯಲ್ಲಿದ್ದು ರಾಜ್ಯ ಕಂದಾಯ ಇಲಾಖೆ ಹಂತದಲ್ಲಿದೆ, ಇದಕ್ಕಾಗಿ ಒಬ್ಬ ನೋಡಲ್‌ ಅಧಿಕಾರಿ ಸಹ ನೇಮಿಸಿದ್ದು ಜಿಲ್ಲಾಧಿಕಾರಿ ಕಚೇರಿಯಿಂದ ಅಧಿಸೂಚನೆ ಹೊರಡಿಸಿ ಅಲ್ಲಿಂದ ಇ-ಗೆಜೆಟ್‌ಗೆ ಕಳಿಸಲಾಗಿದೆ ಅಲ್ಲಿಂದ ಸಹಿ ಆದ ಬಂದ ಮೇಲೆ ಮುಂದಿನ ಪ್ರಕ್ರಿಯೆ ನಡೆಯಲಿದೆ ಮತ್ತು ಎಂದು ಪಿಡಬ್ಲೂತ್ರ್ಯಡಿ ಅಧಿಕಾ ರಿಗಳು ವಾದವಾಗಿದೆ.

66+6 ಅಳತೆ ಪ್ರಪೋಸಲ್‌: ಮುಖ್ಯ ರಸ್ತೆ ಅಧಿವೃದ್ಧಿಪಡಿಸುವ ನಿಟ್ಟಿನಲ್ಲಿಲೋಕೋಪಯೋಗಿ ಇಲಾಖೆ 66+6 (ರಸ್ತೆ ಮಧ್ಯ ರೇಖೆಯಿಂದ 33 ಅಡಿ ಹಾಗೂ 3 ಅಡಿ ಪೂಟ್‌ಪಾತ್‌) ಅಳತೆ ಪ್ರಪೋಸಲ್‌ ಕಳಿಸಿತ್ತು. ಆದರೆ ಆಮೆಗತಿಯಲ್ಲಿಅಗಲೀಕರಣ ವಿಳಂಬ ನೀತಿಯಿಂದ ಅಪಘಾತಗಳು ಹೆಚ್ಚಾಗುತ್ತಿರುವುದು ಸಾರ್ವಜನಿಕರ ತಾಳ್ಮೆ ಕಟ್ಟೆ ಒಡೆದು ಹೋಗುವಂತೆ ಮಾಡಿದೆ.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ