ಆ್ಯಪ್ನಗರ

ಚಿಕ್ಕೇರೂರಲ್ಲಿ ವಿಶ್ವ ನೀರಿನ ದಿನಾಚರಣೆ

ವಿಕ ಸುದ್ದಿಲೋಕ ಹಿರೇಕೆರೂರು ತಾಲೂಕಿನ ಚಿಕ್ಕೇರೂರ ಗ್ರಾಮದ ಗ್ರಾಮ ಪಂಚಾಯಿತಿ ಆವರಣದಲ್ಲಿ ವಿಶ್ವ ನೀರಿನ ದಿನಾಚರಣೆ ಏರ್ಪಡಿಸಲಾಗಿತ್ತು...

Vijaya Karnataka 24 Mar 2019, 5:00 am
ಹಿರೇಕೆರೂರು: ತಾಲೂಕಿನ ಚಿಕ್ಕೇರೂರ ಗ್ರಾಮದ ಗ್ರಾಮ ಪಂಚಾಯಿತಿ ಆವರಣದಲ್ಲಿ ವಿಶ್ವ ನೀರಿನ ದಿನಾಚರಣೆ ಏರ್ಪಡಿಸಲಾಗಿತ್ತು. ಸಸಿ ನೆಡುವ ಮೂಲಕ ನೀರನ್ನು ಉಳಿಸಿ, ನೀರನ್ನು ರಕ್ಷಿಸಿ ಕಾರ್ಯಕ್ರಮವನ್ನು ಗ್ರಾಪಂ ಅಭಿವೃದ್ಧಿ ಅಧಿಕಾರಿ ರೇಣುಕಾರಾಧ್ಯಮಠ ಹಿರೇಮಠ ಉದ್ಘಾಟಿಸಿದರು.
Vijaya Karnataka Web HVR-23HKR 3


ಬಳಿಕ ಅವರು ಮಾತನಾಡಿ, ನೀರು ಜೀವಜಲ. ಆದ್ದರಿಂದ ಮುಂದಿನ ದಿನಮಾನಗಳವರೆಗೂ ಈ ಭೂಮಿಯಲ್ಲಿ ಸದಾ ನೀರು ದೊರೆಯುವಂತಾಗಲು ಮಳೆಗಾಲದಲ್ಲಿ ಸುರಿಯುವ ನೀರನ್ನು ಭೂಮಿಯಲ್ಲಿ ಇಂಗಿಸಬೇಕು. ಅತ್ಯಮೂಲ್ಯವಾದ ನೀರನ್ನು ವಿನಾಕಾರಣ ಚಲ್ಲಬಾರದು. ನಮಗೆ, ನಮ್ಮ ಕುಟುಂಬಕ್ಕೆ ಬೇಕಾಗುವಷ್ಟು ನೀರನ್ನು ಹಿತ-ಮಿತವಾಗಿ ಬಳಸುವ ಮೂಲಕ ನೀರಿನ ಸಂರಕ್ಷ ಣೆ ಮಾಡಿಕೊಳ್ಳಬೇಕಾಗಿದೆ ಎಂದು ಹೇಳಿದರು. ಪ್ರತಿಯೊಬ್ಬರು ಸ್ವಚ್ಛತೆಗೆ ಹಾಗೂ ಸ್ವಚ್ಛ ಪರಿಸರದ ಬಗ್ಗೆ ಜಾಗೃತಿ ವಹಿಸಬೇಕು ಎಂದು ಸಾರ್ವಜನಿಕರಿಗೆ ಕರೆ ನೀಡಿದರು.

ಈ ಸಂದರ್ಭದಲ್ಲಿ ಗೀತಾ ಕಡೇಮನಿ, ನಾಗರಾಜ ನೆಗಳೂರು, ಶಂಭುಲಿಂಗ ದೇವಗಿರಿ, ಫಕ್ಕಿರೇಶ ಯತ್ತಿನಹಳ್ಳಿ, ಮಾರುತಿ ಹಾದಿಮನಿ, ಕರಬಸಮ್ಮ ಬಣಕಾರ, ಪ್ರತಿಭಾ ಕಾರಗೇರ ಹಾಗೂ ಅಂಗನವಾಡಿ ಕಾರ್ಯಕರ್ತರು, ಗ್ರಾ.ಪಂ ಸಿಬ್ಬಂದಿ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ