ಆ್ಯಪ್ನಗರ

ಸಂಪನ್ನಗೊಂಡ ರಾಯರ ಆರಾಧನೆ

ಹಾನಗಲ್ಲ: ಇಲ್ಲಿನ ಕಿತ್ತೂರ ಚನ್ನಮ್ಮ ರಸ್ತೆಯಲ್ಲಿನ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಉತ್ತರ ಆರಾಧನೆ ಮಹೋತ್ಸವ ವಿಜೃಂಭಣೆಯಿಂದ ಸಂಪನ್ನಗೊಂಡಿತು.

Vijaya Karnataka 19 Aug 2019, 5:00 am
ಹಾನಗಲ್ಲ: ಇಲ್ಲಿನ ಕಿತ್ತೂರ ಚನ್ನಮ್ಮ ರಸ್ತೆಯಲ್ಲಿನ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಉತ್ತರ ಆರಾಧನೆ ಮಹೋತ್ಸವ ವಿಜೃಂಭಣೆಯಿಂದ ಸಂಪನ್ನಗೊಂಡಿತು.
Vijaya Karnataka Web HVR-18HGL1


ಶುಕ್ರವಾರದಿಂದ ಆರಂಭಗೊಂಡಿದ್ದ ರಾಯರ ಆರಾಧನೆ ಸಂಪ್ರದಾಯಗಳಲ್ಲಿ ಭಕ್ತರು ಪಾಲ್ಗೊಂಡು ವಿಧ ವಿಧವಾದ ಸೇವೆ ಸಲ್ಲಿಸಿ ಸಂತೃಪ್ತರಾದರು. ಕೊನೆಯ ದಿನದ ಉತ್ತರ ಆರಾಧನೆಯಲ್ಲಿ ಭಕ್ತಗಣ ಹೆಚ್ಚು ಸಂಖ್ಯೆಯಲ್ಲಿ ಭಾಗವಹಿಸಿ ರಾಯರ ಅನುಗ್ರಹಕ್ಕೆ ಪಾತ್ರರಾದ ಧನ್ಯತೆಗೆ ಒಳಗಾದರು.

ರವಿವಾರ ರಾಯರ ಮಠದಲ್ಲಿ ಅಷ್ಟೋತ್ತರ ನಡೆದ ಬಳಿಕ ಭಕ್ತರ ಹರ್ಷೋದ್ಘಾರದ ನಡುವೆ ರಥೋತ್ಸವ ನಡೆಯಿತು. ಚಿಕ್ಕ ಗಾತ್ರದ ಸುಂದರ ರಥೋತ್ಸವ ರಾಯರ ಮಠದಲ್ಲಿ ಸಂಚರಿಸಿತು.

ಲಿಂಗೇರಿ ಮನೆತನದ ಮುರಳೀಧರ ಲಿಂಗೇರಿ, ನಾರಾಯಣ ಲಿಂಗೇರಿ, ಕೃಷ್ಣ ಲಿಂಗೇರಿ ಪೂಜಾ ಕಾರ್ಯಗಳ ನೇತೃತ್ವ ವಹಿಸಿದ್ದರು. ಸಂಜೆ ಕೋಮಾರ ಸಂಗೀತ ತಂಡದಿಂದ ರಾಯರ ಭಕ್ತಿಗೀತೆಗಳ ಸಂಗೀತ ಸೇವೆ ನಡೆದವು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ