ಆ್ಯಪ್ನಗರ

ಬರವಣಿಗೆ ಜ್ಞಾನವಿದ್ದಲ್ಲಿವಿಚಾರ ಮಂಡನೆ ಸಾಧ್ಯ

ರಾಣೇಬೆನ್ನೂರ : ಉತ್ತಮ ಬರವಣಿಗೆ ಜ್ಞಾನವಿದ್ದಲ್ಲಿಮಾತ್ರ ವಿಚಾರ ಸಂಕಿರಣಗಳಲ್ಲಿಸ್ವಾರಸ್ಯಕರವಾಗಿ ವಿಚಾರಗಳನ್ನು ಮಂಡಿಸಲು ಸಾಧ್ಯವಾಗುತ್ತದೆ ಎಂದು ಪ್ರಾ. ವಿಜಯಕುಮಾರ ಹೇಳಿದರು.

Vijaya Karnataka 14 Sep 2019, 5:00 am
ರಾಣೇಬೆನ್ನೂರ : ಉತ್ತಮ ಬರವಣಿಗೆ ಜ್ಞಾನವಿದ್ದಲ್ಲಿಮಾತ್ರ ವಿಚಾರ ಸಂಕಿರಣಗಳಲ್ಲಿಸ್ವಾರಸ್ಯಕರವಾಗಿ ವಿಚಾರಗಳನ್ನು ಮಂಡಿಸಲು ಸಾಧ್ಯವಾಗುತ್ತದೆ ಎಂದು ಪ್ರಾ. ವಿಜಯಕುಮಾರ ಹೇಳಿದರು.
Vijaya Karnataka Web writing knowledge is possible
ಬರವಣಿಗೆ ಜ್ಞಾನವಿದ್ದಲ್ಲಿವಿಚಾರ ಮಂಡನೆ ಸಾಧ್ಯ


ನಗರದ ಎಸ್‌ಜೆಎಂವಿ ಮಹಿಳಾ ಪದವಿ ಮಹಾವಿದ್ಯಾಲಯದಲ್ಲಿವಾಣಿಜ್ಯ ವಿದ್ಯಾರ್ಥಿಗಳಿಗಾಗಿ ಏರ್ಪಡಿಸಲಾಗಿದ್ದ ವಿಶೇಷ ಉಪನ್ಯಾಸ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಉತ್ತಮ ಲೇಖನಗಳನ್ನು ಸಿದ್ಧಪಡಿಸುವುದು ಮತ್ತು ಮಂಡಿಸುವುದು ಒಂದು ವಿಜ್ಞಾನ ಮತ್ತು ಕಲೆಯಾಗಿದೆ. ವಿಚಾರ ಮಂಡನೆಗೂ ಪೂರ್ವದಲ್ಲಿವಿಷಯದ ಬಗ್ಗೆ ಕೂಲಂಕುಷವಾಗಿ ತಿಳಿದಿಕೊಂಡಿರಬೇಕು ಎಂದರು.

ಸಂಪನ್ಮೂಲ ವ್ಯಕ್ತಿ ಡಾ. ಎಲ್‌. ಈಶ್ವರಪ್ಪ ಸವಿಸ್ತಾರವಾಗಿ ಲೇಖನ ತಯಾರಿಕೆಯ ಹಂತಗಳನ್ನು ಎಳೆ ಎಳೆಯಾಗಿ ತಿಳಿಸಿಕೊಟ್ಟು ನಂತರ ವಿದ್ಯಾರ್ಥಿನಿಯರೊಂದಿಗೆ ಸಂವಾದ ನಡೆಸಿದರು.

ವಾಣಿಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಜಿ. ವ್ಹಿ. ಕೋರಿ, ಸಹ ಪ್ರಾಧ್ಯಾಪಕ ಬಿ.ಆರ್‌.ಡಮ್ಮಳ್ಳಿ, ಪೂಜಾ ಚನ್ನಗೌಡರ, ತಸ್ಲೀಮಾಬಾನು ಲೋಹಾರ, ಅನುಷಾ ಕುಬಸದ ಮತ್ತು ಇತರರು ಇದ್ದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ