ಆ್ಯಪ್ನಗರ

ಯಡಿಯೂರಪ್ಪ ರಾಜಕಾರಣ ನಾಚಿಕೆಗೇಡಿತನ : ಮಾನೆ

ಅಕ್ಕಿಆಲೂರು : ಭಾರತೀಯ ಸೇನೆ ಯಾರ ಕೈಗೊಂಬೆಯಲ್ಲ. ನಮ್ಮ ಹೆಮ್ಮೆಯ ವೀರ ಯೋಧರು ಯಾರ ಆಶ್ರಯದಲ್ಲಿಯೂ ಬದುಕುತ್ತಿಲ್ಲ. ಅವರ ತ್ಯಾಗ-ಬಲಿದಾನ ರಾಜಕಾರಣಕ್ಕೆ ಬಳಕೆ ಮಾಡುವುದನ್ನು ಭಾರತ ಮಾತೆಯೂ ಒಪ್ಪಲ್ಲ ಎಂದು ವಿಧಾನ ಪರಿಷತ್‌ ಸದಸ್ಯ ಶ್ರೀನಿವಾಸ್‌ ಮಾನೆ ಹೇಳಿದರು.

Vijaya Karnataka 2 Mar 2019, 5:00 am
ಅಕ್ಕಿಆಲೂರು : ಭಾರತೀಯ ಸೇನೆ ಯಾರ ಕೈಗೊಂಬೆಯಲ್ಲ. ನಮ್ಮ ಹೆಮ್ಮೆಯ ವೀರ ಯೋಧರು ಯಾರ ಆಶ್ರಯದಲ್ಲಿಯೂ ಬದುಕುತ್ತಿಲ್ಲ. ಅವರ ತ್ಯಾಗ-ಬಲಿದಾನ ರಾಜಕಾರಣಕ್ಕೆ ಬಳಕೆ ಮಾಡುವುದನ್ನು ಭಾರತ ಮಾತೆಯೂ ಒಪ್ಪಲ್ಲ ಎಂದು ವಿಧಾನ ಪರಿಷತ್‌ ಸದಸ್ಯ ಶ್ರೀನಿವಾಸ್‌ ಮಾನೆ ಹೇಳಿದರು.
Vijaya Karnataka Web HVR-1AKR3
ಮಾಳಾಪುರದಲ್ಲಿ ಹಲವರು ವಿಧಾನ ಪರಿಷತ್‌ ಸದಸ್ಯ ಶ್ರೀನಿವಾಸ್‌ ಮಾನೆ ಸಮ್ಮುಖದಲ್ಲಿ ಕಾಂಗ್ರೆಸ್‌ಗೆ ಸೇರ್ಪಡೆಗೊಂಡರು.


ಹಾನಗಲ್‌ ತಾಲೂಕಿನ ಮಾಳಾಪುರ ಗ್ರಾಮದಲ್ಲಿ ಶುಕ್ರವಾರ ನಡೆದ ಕಾಂಗ್ರೆಸ್‌ ಕಾರ್ಯಕರ್ತರ ಸಭೆಯಲ್ಲಿ ಭಾಗವಹಿಸಿ ಹಲವರನ್ನು ಪಕ್ಷ ಕ್ಕೆ ಬರಮಾಡಿಕೊಂಡು ಅವರು ಮಾತನಾಡಿದರು.

ನಮ್ಮ ದೇಶಕ್ಕೆ ಸನಾತನ ಸಂಸ್ಕೃತಿ ಇದೆ. ಸಂಸ್ಕೃತಿ, ಧರ್ಮ ಎಳೆತಂದು ಭಾವನಾತ್ಮಕ ವಿಷಯಗಳ ಮೂಲಕ ಜನರ ದಾರಿ ತಪ್ಪಿಸುವ ಯತ್ನ ನಡೆದಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ ಅವರು, ಪಾಪಿ ಪಾಕಿಸ್ತಾನಕ್ಕೆ ತಕ್ಕ ಶಾಸ್ತಿ ಮಾಡಬೇಕು. ಅದನ್ನು ನಮ್ಮ ಸೇನೆ ಮಾಡುತ್ತಿದ್ದು, ಇದರಲ್ಲಿ ರಾಜಕಾರಣ ಎಳೆತಂದು ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಸೇರಿದಂತೆ ಬಿಜೆಪಿ ನಾಯಕರು ತಮ್ಮ ಮೂಗಿನ ನೇರಕ್ಕೆ ಮಾತನಾಡುತ್ತಾ ರಾಜಕೀಯ ಲಾಭದ ಲೆಕ್ಕಾಚಾರದಲ್ಲಿ ನಿರತರಾಗಿರುವುದು ನಾಚಿಕೆಗೇಡಿನ ಸಂಗತಿ ಎಂದು ಹರಿಹಾಯ್ದರು.

ಲೋಕಸಭೆ ಚುನಾವಣೆ ಸಮೀಪಿಸಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್‌ ಕಾರ್ಯಕರ್ತರು ಕೇಂದ್ರದ ಬಿಜೆಪಿ ಸರಕಾರದ ವೈಫಲ್ಯಗಳ ಬಗೆಗೆ ಜನಜಾಗೃತಿ ಮೂಡಿಸಬೇಕಿದೆ. ಬಣ್ಣದ ಮಾತುಗಳ ಮೂಲಕ ಮೋಡಿ ಮಾಡಿ ಮೋಸಗೈಯ್ಯುತ್ತಿರುವ ಪ್ರಧಾನಿ ನರೇಂದ್ರ ಮೋದಿ ಅವರ ಬಗೆಗೆ ತಿಳಿವಳಿಕೆ ಮೂಡಿಸಬೇಕಿದೆ. ಸಣ್ಣಪುಟ್ಟ ವೈಮನಸ್ಸು ದೂರ ಮಾಡಿ ಪಕ್ಷ ದ ಸಂಘಟನೆಗೆ ಬಲ ತುಂಬುವಂತೆ ಕರೆ ನೀಡಿದರು.

ಪ್ರಮುಖರಾದ ಯಲ್ಲಪ್ಪ ಕಲ್ಲೇರ, ಭೀಮಣ್ಣ ಲಮಾಣಿ, ಅನಂತವಿಕಾಸ್‌ ನಿಂಗೋಜಿ, ಸಂತೋಷ್‌ ಸುಣಗಾರ, ಫಯಾಜ್‌ ಲೋಹಾರ, ಬಸಲಿಂಗಯ್ಯ ಕಂಬಾಳಿಮಠ, ಬಸವರಾಜ್‌ ಹಾದಿಮನಿ, ಮಂಜು ಗೊರಣ್ಣನವರ, ಮಹರುದ್ರಪ್ಪ ಪೂಜಾರ, ಮುರಿಗೆಪ್ಪಗೌಡ, ಮಹರುದ್ರಪ್ಪ ಮಾಯಣ್ಣನವರ ಇದ್ದರು. ಇದೇ ಸಂದರ್ಭದಲ್ಲಿ ಹಲವರು ಬಿಜೆಪಿ ತೊರೆದು ಕಾಂಗ್ರೆಸ್‌ಗೆ ಸೇರ್ಪಡೆಗೊಂಡರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ