ಆ್ಯಪ್ನಗರ

ಯುವಕರಿಗೆ ಸಾಮೂಹಿಕ ಹೊಣೆಗಾರಿಕೆ ಅಗತ್ಯ

ಬ್ಯಾಡಗಿ: 'ಏಳಿ ಏದ್ದೇಳಿ ಗುರಿ ಮುಟ್ಟುವವರೆಗೂ ನಿಲ್ಲದಿರಿ' ಎಂಬುದಾಗಿ ಯುವಕರನ್ನುದ್ದೇಶಿಸಿ ಸ್ವಾಮಿ ವಿವೇಕಾನಂದ ಅವರು ನುಡಿದಂತಹ ವಾಣಿ ಈ ಸಂದರ್ಭದಲ್ಲಿ ಹೆಚ್ಚು ಸೂಕ್ತವಾಗಿದೆ, ಅವರ ತತ್ವಾದರ್ಶಗಳ ಪಾಲನೆ ಜೊತೆಗೆ ದೇಶದ ಯುವಕರು ತೋರಬೇಕಾದ ಸಾಮೂಹಿಕ ಹೊಣೆಗಾರಿಕೆ ತೋರದಿದ್ದಲ್ಲಿ ಬಹುಶಃ ದೇಶ ಇನ್ನಷ್ಟು ಹೊಸ ಹೊಸ ಸಂಕಷ್ಟಗಳನ್ನು ಎದರಿಸಬೇಕಾಗುತ್ತದೆ ಎಂದು ಹಿರಿಯಶ್ರೇಣಿ ದಿವಾಣಿ ನ್ಯಾಯಾಧೀಶ ಬಿ.ಎಂ.ಮು ಜಾವರ ಅಭಿಪ್ರಾಯ ವ್ಯಕ್ತಪಡಿಸಿ ದರು.

Vijaya Karnataka 14 Jan 2019, 5:00 am
ಬ್ಯಾಡಗಿ: 'ಏಳಿ ಏದ್ದೇಳಿ ಗುರಿ ಮುಟ್ಟುವವರೆಗೂ ನಿಲ್ಲದಿರಿ' ಎಂಬುದಾಗಿ ಯುವಕರನ್ನುದ್ದೇಶಿಸಿ ಸ್ವಾಮಿ ವಿವೇಕಾನಂದ ಅವರು ನುಡಿದಂತಹ ವಾಣಿ ಈ ಸಂದರ್ಭದಲ್ಲಿ ಹೆಚ್ಚು ಸೂಕ್ತವಾಗಿದೆ, ಅವರ ತತ್ವಾದರ್ಶಗಳ ಪಾಲನೆ ಜೊತೆಗೆ ದೇಶದ ಯುವಕರು ತೋರಬೇಕಾದ ಸಾಮೂಹಿಕ ಹೊಣೆಗಾರಿಕೆ ತೋರದಿದ್ದಲ್ಲಿ ಬಹುಶಃ ದೇಶ ಇನ್ನಷ್ಟು ಹೊಸ ಹೊಸ ಸಂಕಷ್ಟಗಳನ್ನು ಎದರಿಸಬೇಕಾಗುತ್ತದೆ ಎಂದು ಹಿರಿಯಶ್ರೇಣಿ ದಿವಾಣಿ ನ್ಯಾಯಾಧೀಶ ಬಿ.ಎಂ.ಮು ಜಾವರ ಅಭಿಪ್ರಾಯ ವ್ಯಕ್ತಪಡಿಸಿ ದರು.
Vijaya Karnataka Web young people need collective liability
ಯುವಕರಿಗೆ ಸಾಮೂಹಿಕ ಹೊಣೆಗಾರಿಕೆ ಅಗತ್ಯ


ಪಟ್ಟಣದ ಬಿಇಎಸ್‌ ಮಹಾವಿದ್ಯಾಲಯದ ಆವರಣದಲ್ಲಿ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ನ್ಯಾಯವಾದಿಗಳ ಸಂ ಘದ ಆಶ್ರಯದಲ್ಲಿ 'ಚೇತನ ಚಿಲುಮೆ' ಸ್ವಾಮಿ ವಿವೇಕಾನಂದ ಜಯಂತಿ ಅಂಗವಾಗಿ ಏರ್ಪಡಿಸಿದ್ದ 'ರಾಷ್ಟ್ರೀಯ ಯುವ ದಿವಸ ಕಾರ‍್ಯಕ್ರಮವನ್ನು ಸಸಿಗಳಿಗೆ ನೀರುಣಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.

ದೇಶಕ್ಕೆ ಸ್ವಾತಂತ್ರ್ಯ ದೊರೆತು ಏಳು ದಶಕಗಳು ಪೂರ್ಣಗೊಳ್ಳುತ್ತಾ ಬಂದಿವೆ, ಆದಾಗ್ಯೂ ಭಾರತದಲ್ಲಿ ನಿರುದ್ಯೋಗ ಸಮಸ್ಯೆ, ಅಪೌಷ್ಟಿಕತೆ ಬಡತನ ಸೇರಿದಂತೆ ನೂರಾರು ಸಮಸ್ಯೆಗಳನ್ನು ಎದುರಿಸುತ್ತಿದೆ, ಹಾಗಿದ್ದರೇ ನಮ್ಮಲ್ಲಿನ ಯುವಶಕ್ತಿ ಎತ್ತ ಸಾಗುತ್ತಿದೆ, ಅಭಿವೃದ್ಧಿಯಲ್ಲಿ ಅವರ ಕೊಡುಗೆ ಅಥವಾ ಪಾತ್ರವೇನು ಎಂಬುದನ್ನು ನಮ್ಮೊಳಗೆ ಒಮ್ಮೆ ಪ್ರಶ್ನೆಗಳನ್ನು ಮಾಡಿಕೊಳ್ಳುವ ಮೂಲಕ ದೇಶಕ್ಕಾಗಿ ನಾನು ನೀಡಿರುವಂತಹ ಕೊಡುಗೆಗಳೇನು ಎಂಬುದನ್ನು ಪ್ರಶ್ನಿಸಿಕೊಳ್ಳುವುದು ಹೆಚ್ಚು ಸೂಕ್ತ ವಾಗಿದೆ ಎಂದರು.

ಸಾಮೂಹಿಕ ಹೊಣೆಗಾರಿಕೆ: ಕಿರಿಯ ಶ್ರೇಣಿ ದಿವಾಣಿ ನ್ಯಾಯಾಧೀಶ ರಾಜೇಶ್‌ ಹೊಸ್ಮನಿ ಮಾತನಾಡಿ, ವಿಶ್ವದ ಇನ್ನಿತರ ರಾಷ್ಟ್ರಗಳು ಅಭಿವೃದ್ಧಿ ಹೊಂದುತ್ತಿರುವುದನ್ನು ನೋಡಿದರೆ ಯುವಶಕ್ತಿ ಸದ್ಭಳಕೆ ಮಾಡಿಕೊಂಡ ದೇಶಗಳಿಗೆ ಉತ್ತಮ ಭವಿಷ್ಯವಿದೆ ಎಂಬುದು ಸಾಬೀತಾಗಿದೆ, ಭಾರತದಲ್ಲಿ ಶೇ.45 ರಷ್ಟು ಯುವಕರನ್ನು ಹೊಂದಿದ್ದರೂ ಭಾರತ ಇನ್ನೂ ಟೇಕಾಫ್‌ ಆಗದಿರುವುದು ಖೇದಕರ ಸಂಗತಿ ಎಂದರು.

ಕವಲು ದಾರಿಯಲ್ಲಿದೆ ಯುವ ಸಮೂಹ:ಉಪನ್ಯಾಸ ನೀಡಿ ಮಾತನಾಡಿದ ಪ್ರೋ.ಡಾ.ಎಸ್‌.ಡಿ. ಬಾಲಾಜಿರಾವ್‌, ಜಾಗತೀಕರಣದ ನೆಪದಲ್ಲಿ ದೇಶದ ಯುವ ಸಮೂಹ ಕವಲು ದಾರಿಯಲ್ಲಿ ಮುಳುಗಿದ್ದು, ಭಾರತೀಯ ಸಂಸ್ಕೃತಿ ಹಾಗೂ ಆಚಾರ ವಿಚಾರಗಳ ಪಾಲನೆಯಿಂದ ಹಿಂದೆ ಸರಿಯುತ್ತಿರುವುದು ದುರಂತದ ಸಂಗತಿ. ಯುವಕರು ಇನ್ನೊಬ್ಬರ ತಪ್ಪುಗಳನ್ನು ಪ್ರಶ್ನಿಸುವ ಮೊದಲು, ತಮ್ಮ ತಪ್ಪುಗಳನ್ನು ತಿದ್ದಿಕೊಂಡು ಕ್ರಿಯಾಶೀಲರಾಗುವ ಮೂಲಕ ಇನ್ನೊಬ್ಬರಿಗೆ ಆದರ್ಶವೆನ್ನುವಂತೆ ಬದುಕನ್ನು ಸಾಗಿಸುವಂತೆ ಕರೆ ನೀಡಿದರು.

ಪ್ರಾಚಾರ‍್ಯ ಕೆ.ಜಿ.ಖಂಡೇಬಾಗೂರ ಅಧ್ಯಕ್ಷ ತೆ ವಹಿಸಿದ್ದರು, ವೇದಿಕೆಯಲ್ಲಿ ಪಿಎಸ್‌ಐ ಎಂ.ಎಂ.ಮಹಾಂತೇಶ್‌, ಎ.ಎಸ್‌.ಐ ಖಾಜಿ. ಉಪ ತಹಶೀಲ್ದಾರ ಮೋಹನ ಕಡೂರ, ನ್ಯಾಯವಾದಿಗಳ ಸಂಘದ ಅಧ್ಯಕ್ಷ ಜಿ.ಎಸ್‌.ತಟ್ಟಿ, ಕಾರ‍್ಯದರ್ಶಿ ಎಚ್‌.ಎಸ್‌.ಜಾಧವ, ಉಪನ್ಯಾಸಕರಾದ ಡಾ.ಎಸ್‌.ಜಿ.ವೈದ್ಯ, ಪಿ.ಎಂ.ರಾಮಗಿರಿ, ಎಸ್‌.ವಿ.ಉಜ್ಜಯನಿಮಠ, ಇನ್ನಿತರರು ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ