ಆ್ಯಪ್ನಗರ

ಇದು ಹೈದರಾಬಾದ್ VS ಭಾಗ್ಯನಗರ ನಡುವಿನ ಲಡಾಯಿ: ತೇಜಸ್ವಿ ಸೂರ್ಯಗೆ ಒವೈಸಿ ತಿರುಗೇಟು!

ತೆಲಂಗಾಣ ರಾಜ್ಯದಲ್ಲಿ ರೋಹಿಂಗ್ಯಾ ಮುಸ್ಲಿಮರು ಆಶ್ರಯ ಪಡೆದಿದ್ದಾರೆ ಎಂದಾದರೆ, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರೇನು ನಿದ್ದೆ ಮಾಡುತ್ತಿದ್ದಾರಾ ಎಂದು ಎಐಎಂಐಎಂ ಸಂಸದ ಅಸಾದುದ್ದೀನ್ ಒವೈಸಿ ಪ್ರಶ್ನಿಸಿದ್ದಾರೆ. ಈ ಮೂಲಕ ಬಿಜೆಪಿ ಯುವಮೋರ್ಚಾ ರಾಷ್ಟ್ರೀಯ ಅಧ್ಯಕ್ಷ ತೇಜಸ್ವಿ ಸೂರ್ಯ ಅವರಿಗೆ ಒವೈಸಿ ಟಾಂಗ್ ನೀಡಿದ್ದಾರೆ.

Vijaya Karnataka Web 24 Nov 2020, 4:42 pm
ಹೈದರಾಬಾದ್: ತೆಲಂಗಾಣ ರಾಜ್ಯದಲ್ಲಿ ರೋಹಿಂಗ್ಯಾ ಮುಸ್ಲಿಮರು ಆಶ್ರಯ ಪಡೆದಿದ್ದಾರೆ ಎಂದಾದರೆ, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರೇನು ನಿದ್ದೆ ಮಾಡುತ್ತಿದ್ದಾರಾ ಎಂದು ಎಐಎಂಐಎಂ ಸಂಸದ ಅಸಾದುದ್ದೀನ್ ಒವೈಸಿ ಪ್ರಶ್ನಿಸಿದ್ದಾರೆ.

ನಿನ್ನೆ(ನ.23) ಹೈದರಾಬಾದ್‌ನಲ್ಲಿ ಒವೈಸಿ ಸಹೋದರರ ವಿರುದ್ಧ ಗುಡುಗಿದ್ದ ಬಿಜೆಪಿ ಯುವಮೋರ್ಚಾ ರಾಷ್ಟ್ರೀಯ ಅಧ್ಯಕ್ಷ ತೇಜಸ್ವಿ ಸೂರ್ಯ ಅವರಿಗೆ ತಿರುಗೇಟು ನೀಡಿರುವ ಅಸಾದುದ್ದೀನ್ ಒವೈಸಿ, ನಗರದಲ್ಲಿ ರೋಹಿಂಗ್ಯಾ ಮುಸ್ಲಿಮರು ಎಷ್ಟಿದ್ದಾರೆ ಎಂಬುದನ್ನು ಬಿಜೆಪಿ ಅಂಕಿ ಸಂಖ್ಯೆಗಳ ಸಮೇತ ಸಾಬೀತುಪಡಿಸಲಿ ಎಂದು ತಿರುಗೇಟು ನೀಡಿದರು.

ತೇಜಸ್ವಿ ಸೂರ್ಯ ಅವರು ಹೈದರಾಬಾದ್‌ನಲ್ಲಿ 30-40 ಸಾವಿರ ರೋಹಿಂಗ್ಯಾ ಮುಸ್ಲಿಮರು ಆಶ್ರಯ ಪಡೆದಿದ್ದಾರೆ ಎಂದು ಹೇಳಿದ್ದಾರೆ. 24 ಗಂಟೆಗಳಲ್ಲಿ ಕೇವಲ 1,000 ರೋಹಿಂಗ್ಯಾ ಮುಸ್ಲಿಮರನ್ನು ಬಿಜೆಪಿ ಪಟ್ಟಿ ಮಾಡಿ ತೋರಿಸಲಿ ಎಂದು ಒವೈಸಿ ಸವಾಲು ಹಾಕಿದರು.

ಉಗ್ರವಾದದ ಭಾಷೆ ಒಪ್ಪಲ್ಲ: ಒವೈಸಿ ಸಹೋದರರ ಭದ್ರಕೋಟೆಯಲ್ಲಿ ನಿಂತು ಘರ್ಜಿಸಿದ ತೇಜಸ್ವಿ ಸೂರ್ಯ!

ಹೈದರಾಬಾದ್ ಮಹಾನಗರ ಪಾಲಿಕೆ ಚುನಾವಣೆಯನ್ನು ಹೈದರಾಬಾದ್ VS ಭಾಗ್ಯನಗರ ನಡುವಿನ ಕದನ ಎಂದು ಬಣ್ಣಿಸಿರುವ ಒವೈಸಿ, ಗೆಲುವು ಯಾರದ್ದಾಗಲಿದೆ ಎಂಬುದನ್ನು ಕಾದು ನೋಡೋಣ ಎಂದು ಸವಾಲು ಹಾಕಿದರು.


ಬಿಜೆಪಿ ಹೈದರಾಬಾದಾದ್ ನಗರದ ಜನತೆಯಲ್ಲಿ ಒಡಕು ಸೃಷ್ಟಿಸಲು ಪ್ರಯತ್ನಿಸುತ್ತಿದ್ದು, ಅವರ ನಾಯಕರ ಹೇಳಿಕೆಗಳಿಂದಲೇ ಇದು ಸ್ಪಷ್ಟವಾಗುತ್ತದೆ ಎಂದು ಒವೈಸಿ ಹರಿಹಾಯ್ದರು.

ಮತ್ತೊಬ್ಬ ಜಿನ್ನಾ ಆಗುತ್ತಿದ್ದಾರಾ ಓವೈಸಿ..? ಉರ್ದು ಕವಿ ಮುನ್ನಾವರ್‌ ಹೇಳಿದ್ದೇನು..?

ಹೈದರಾಬಾದ್ ಮಹಾನಗರ ಪಾಲಿಕೆ(GHMC) ಚುನಾವಣೆ ಹಿನ್ನೆಲೆಯಲ್ಲಿ, ಎಐಎಂಐಎಂ ಹಾಗೂ ಬಿಜೆಪಿ ನಾಯಕರ ನಡುವೆ ತೀವ್ರ ವಾಕ್ಸಮರ ನಡೆಯುತ್ತಿರುವುದನ್ನು ಇಲ್ಲಿ ಗಮನಿಸಬಹುದು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ