ಆ್ಯಪ್ನಗರ

ಉಚಿತ ವಿದ್ಯುತ್‌, ನೀರು, ಮಹಿಳೆಯರಿಗೆ ಫ್ರೀ ಪ್ರಯಾಣ - ಹೈದರಾಬಾದ್‌ ಬಿಜೆಪಿ ಪ್ರಣಾಳಿಕೆಯಲ್ಲಿ ಕೊಡುಗೆಗಳ ಮಹಾಪೂರ

100 ಯೂನಿಟ್‌ ತನಕ ವಿದ್ಯುತ್‌ ಬಳಸುವವರಿಗೆ ಉಚಿತ ವಿದ್ಯುತ್‌, ಉಚಿತ ನೀರು, ನಗರ ಸಾರಿಗೆ ಮತ್ತು ಮೆಟ್ರೋದಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ, ನೆರೆಯಿಂದ ತೊಂದರೆಗೊಳಗಾದವರಿಗೆ 25,000 ರೂಪಾಯಿ ಪರಿಹಾರ ನೀಡುವುದಾಗಿ ಬಿಜೆಪಿ ಭರವಸೆ ನೀಡಿದೆ.

Agencies 26 Nov 2020, 5:58 pm
ಹೈದರಾಬಾದ್‌: ಟಿಆರ್‌ಎಸ್‌ ಮತ್ತು ಕಾಂಗ್ರೆಸ್‌ ಉಚಿತ ನೀರಿನ ಭರವಸೆ ನೀಡಿದರೆ, ಬಿಜೆಪಿ ಈಗ ಎಲ್ಲರಿಗಿಂತ ಮುಂದೆ ಹೋಗಿ ಫ್ರೀ ಕೊಡುಗೆಗಳ ಮಹಾಪೂರವನ್ನೇ ಹೈದರಾಬಾದ್‌ ಜನತೆಯ ಮುಂದಿಟ್ಟಿದೆ.
Vijaya Karnataka Web Devendra Fadnavis


ಗ್ರೇಟರ್‌ ಹೈದರಾಬಾದ್‌ ಮಹಾನಗರ ಪಾಲಿಕೆ ಚುನಾವಣೆಗೆ ಗುರುವಾರ ಪ್ರಣಾಳಿಕೆ ಬಿಡುಗಡೆ ಮಾಡಿರುವ ಬಿಜೆಪಿ, 100 ಯೂನಿಟ್‌ ತನಕ ವಿದ್ಯುತ್‌ ಬಳಸುವವರಿಗೆ ಉಚಿತ ವಿದ್ಯುತ್‌, ನಗರ ಸಾರಿಗೆ ಮತ್ತು ಮೆಟ್ರೋದಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ, ನೆರೆಯಿಂದ ತೊಂದರೆಗೊಳಗಾದವರಿಗೆ 25,000 ರೂಪಾಯಿ ಪರಿಹಾರ ನೀಡುವುದಾಗಿ ಭರವಸೆ ನೀಡಿದೆ.

ಬಿಜೆಪಿ ಪ್ರಣಾಳಿಕೆ ಬಿಡುಗಡೆ ಮಾಡಿದ ಮಹಾರಾಷ್ಟ್ರ ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್‌, ಕೇಂದ್ರದ ಸಲಹೆಯಂತೆ ಎಲ್ಲರಿಗೂ ಕೊರೊನಾ ಲಸಿಕೆ ನೀಡುವುದಾಗಿಯೂ ತಿಳಿಸಿದ್ದಾರೆ.

ಇದರ ಜೊತೆಗೆ ಉಚಿತ ನೀರು, ಪ್ರತಿ ವರ್ಷ ಮೂರು ಹೊಸ ಮಹಿಳಾ ಠಾಣೆ ನಿರ್ಮಾಣ, ಪ್ರತಿ ಕಿಲೋಮೀಟರ್‌ಗೆ ಒಂದರಂತೆ ಮಹಿಳೆಯರಿಗೆ ಶೌಚಾಲಯ, ಆನ್‌ಲೈನ್‌ ಶಿಕ್ಷಣಕ್ಕೆ ಸರಕಾರಿ ಶಾಲೆ ಮಕ್ಕಳಿಗೆ ಉಚಿತ ಟ್ಯಾಬ್ಲೆಟ್‌ ನೀಡುವುದಾಗಿಯೂ ಬಿಜೆಪಿ ಹೇಳಿದೆ.

ಪ್ರಣಾಳಿಕೆ ಬಿಡುಗಡೆ ಕಾರ್ಯಕ್ರಮದಲ್ಲಿ ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಜಿ ಕಿಶನ್‌ ರೆಡ್ಡಿ, ರಾಜ್ಯ ಬಿಜೆಪಿ ಅಧ್ಯಕ್ಷ ಬಂಡಿ ಸಂಜಯ್‌ ಕುಮಾರ್‌ ಮತ್ತು ಇತರ ನಾಯಕರು ಉಪಸ್ಥಿತರಿದ್ದರು.

ಹೈದರಾಬಾದ್‌ ಮಹಾನಗರ ಪಾಲಿಕೆಗೆ ಡಿಸೆಂಬರ್‌ 1 ರಂದು ಚುನಾವಣೆ ನಡೆಯಲಿದೆ. ಹೈದರಾಬಾದ್‌ ಚುನಾವಣೆಯನ್ನು ಗಂಭೀರವಾಗಿ ಪರಿಗಣಿಸಿರುವ ಬಿಜೆಪಿ, ಇಲ್ಲಿ ಅಧಿಕಾರ ಹಿಡಿದು ಮುಂದೆ ರಾಜ್ಯದಲ್ಲೂ ಕಮಲ ಬಾವುಟ ಹಾರಿಸಬಹುದು ಎಂಬ ಯೋಜನೆ ಹಾಕಿಕೊಂಡಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ