ಆ್ಯಪ್ನಗರ

ಕೊರೊನಾ ಸಂಕಷ್ಟ: ಒಂದು ತಿಂಗಳ ಮಗುವನ್ನು ಕೈಯಲ್ಲಿ ಹಿಡಿದು, ಮುನಿಸಿಪಲ್ ಕಮಿಷನರ್ ಕರ್ತವ್ಯಕ್ಕೆ ಹಾಜರ್!

ಕೊರೊನಾ ಸಂಕಷ್ಟದಿಂದ ಗ್ರೇಟರ್ ವಿಶಾಖಪಟ್ಟಣದ ಐಎಎಸ್ ಆಫೀಸರ್ ಒಬ್ಬರು, ಒಂದು ತಿಂಗಳ ಮಗುವನ್ನು ಕೈಯಲ್ಲಿ ಹಿಡಿದು ಕೆಲಸಕ್ಕೆ ಹಾಜರಾಗಿದ್ದಾರೆ. ಪುಟ್ಟ ಕಂದಮ್ಮನೊಂದಿಗೆ ಮಾತೃತ್ವ ರಜೆಯನ್ನು ನಿರಾಕರಿಸಿ, ಕರ್ತವ್ಯದ ಹೊಣೆಯನ್ನು ಮೆರೆಯುತ್ತಿದ್ದಾರೆ.

Vijaya Karnataka Web 12 Apr 2020, 2:31 pm
ವಿಶಾಖಪಟ್ಟಣ: ಕೊರೊನಾ ಮಹಾಮಾರಿಯಿಂದ ಜನರನ್ನು ರಕ್ಷಿಸಲು ವೈದ್ಯರು, ನರ್ಸ್ ಗಳು, ಪೊಲೀಸರ್ ಟೊಂಕಕಟ್ಟಿ ನಿಂತು, ತಮ್ಮ ಮನೆಯವರಿಂದಲೂ ದೂರವಾಗಿದ್ದುಕೊಂಡು ಜನರ ರಕ್ಷಣೆಗೆ ನಿಂತಿದ್ದಾರೆ. ಇದೀಗ ಗ್ರೇಟರ್ ವಿಶಾಖಪಟ್ಟಣಂ ನ ಮುನಿಸಿಪಲ್ ಕಮಿಷನರ್ ಒಂದು ತಿಂಗಳ ಮಗುವನ್ನು ಕೈಯಲ್ಲಿ ಹಿಡಿದು ಕೆಲಸಕ್ಕೆ ಹಾಜರಾಗಿದ್ದಾರೆ.
Vijaya Karnataka Web municipal  commissioner rejoins office within 22 days after delivering baby


ಐಎಎಸ್ ಆಫೀಸರ್ ಶ್ರೀಮತಿ ಸೃಜನಾ ಗುಮ್ಮಲ್ಲರವರು ತಮ್ಮ ಪುಟ್ಟ ಕಂದಮ್ಮನೊಂದಿಗೆ ಮಾತೃತ್ವ ರಜೆಯನ್ನು ನಿರಾಕರಿಸಿ, ಕರ್ತವ್ಯದ ಹೊಣೆಯನ್ನು ಮೆರೆಯುತ್ತಿದ್ದಾರೆ.

ಮಾತೃತ್ವ ರಜೆಯನ್ನು ಪಡೆಯಲು ಅವರಿಗೆ ಅವಕಾಶವಿದ್ದರೂ ಸಹ, ಈ ಕೊರೊನಾ ಮಹಾಮಾರಿಯ ಸಂಕಷ್ಟದಿಂದ ಅವರು ತಮ್ಮ ವೃತ್ತಿ ಮೇಲಿನ ಶ್ರದ್ದೆಯೊಂದಿಗೆ ಲಾಕ್ ಡೌನ್ ನಿಂದ ಉಂಟಾಗಿರುವ ಪರಿಸ್ಥಿತಿಯನ್ನು ನಿಭಾಯಿಸಲು, ಪುಟ್ಟ ಕಂದಮ್ಮನನ್ನು ಮಡಿಲಲ್ಲಿಟ್ಟುಕೊಂಡೇ ಕೆಲಸ ಮಾಡುತ್ತಿದ್ದಾರೆ.

"ನಾನೊಬ್ಬ ಜವಾಬ್ದಾರಿಯುತ ಅಧಿಕಾರಿಯಾಗಿ ಇಂತಹ ಲಾಕ್‍ಡೌನ್ ಪರಿಸ್ಥಿತಿಯಲ್ಲಿ ಕೆಲಸ ಮಾಡುವುದು ಅಗತ್ಯವಾಗಿದೆ. ಕ್ಷೇತ್ರದಲ್ಲಿ ಸ್ವಚ್ಛತೆಯ ಕಾರ್ಯಗಳನ್ನು ಮಾಡುವುದು, ಬಡವರಿಗೆ ಅಗತ್ಯಗಳನ್ನು ಒದಗಿಸುವುದು ಮತ್ತು ವೈರಸ್ ಇರುವುದನ್ನು ಖಚಿತಪಡಿಸಿಕೊಳ್ಳಲು ಜಿಲ್ಲಾಧಿಕಾರಿಗಳೊಂದಿಗೆ ಚರ್ಚಿಸುವುದು ನನ್ನ ಕೆಲಸವಾಗಿದೆ. ಬದ್ಧತೆಯೊಂದಿಗೆ ಕೆಲಸ ಮಾಡಲು ನನ್ನ ಇಡೀ ಕುಟುಂಬವು ನನಗೆ ಪ್ರೇರಣೆಯಾಗಿದೆ ಎಂದಿದ್ದಾರೆ.

'ವಿಶಾಖಪಟ್ಟಣಂನಲ್ಲಿನ ಪ್ರಸ್ತುತ ಪರಿಸ್ಥಿತಿ ಮತ್ತು ರಾಜ್ಯದಲ್ಲಿ ಕೊರೊನಾ ಮಾರಿಯನ್ನು ತಡೆಗಟ್ಟಲು ಆಂಧ್ರಪ್ರದೇಶದ ಮುಖ್ಯಮಂತ್ರಿ ವೈ.ಎಸ್.ಜಗನ್ ಮೋಹನ್ ರೆಡ್ಡಿ ಅವರು ನೀಡಿದ ಕರೆಗೆ, ಕೊರೊನಾ ವೈರಸ್ ಅನ್ನು ತಡೆಗಟ್ಟಲು ಜಿಲ್ಲಾಡಳಿತವು ಒಟ್ಟಾಗಿ ಪ್ರಯತ್ನಿಸುತ್ತಿದೆ' ಎಂದು ಹೇಳಿದ್ದಾರೆ.

'ನನ್ನ ಈ ಕರ್ತವ್ಯ ಮತ್ತು ಹೊಣೆಗಾರಿಕೆಗೆ ವಕೀಲರಾದ ನನ್ನ ಪತಿ ಮತ್ತು ತಾಯಿ ಸಾಕಷ್ಟು ಬೆಂಬಲವನ್ನು ನೀಡುತ್ತಿದ್ದಾರೆ. ಕರ್ತವ್ಯಕ್ಕೆ ಹಾಜರಾದಾಗ ಅವರಿಬ್ಬರೂ ಮಗುವನ್ನು ನೋಡಿಕೊಳ್ಳುತ್ತಾರೆ. ಮಾತೃತ್ವ ಮತ್ತು ಅಧಿಕೃತ ಕರ್ತವ್ಯಗಳೆರಡನ್ನೂ ಸಮತೋಲನಗೊಳಿಸುವುದು ಅತ್ಯಂತ ಮುಖ್ಯವಾಗಿದೆ ಮತ್ತು ನಾನು ಅವುಗಳೆರಡನ್ನು ಚೆನ್ನಾಗಿಯೇ ನಿಭಾಯಿಸುತ್ತಿದ್ದೇನೆ. ನಾನು 4 ಗಂಟೆಗಳಿಗೊಮ್ಮೆ ಮನೆಗೆ ಹೋಗಿ ಮಗುವಿಗೆ ಹಾಲುಣಿಸಿ ಮತ್ತೆ ಕೆಲಸಕ್ಕೆ ಹಾಜರಾಗುತ್ತಿದ್ದೇನೆ ಎನ್ನುತ್ತಾರೆ. ಸಾರ್ವಜನಿಕರ ಹಿತಕ್ಕಾಗಿ ಮಾತೃತ್ವ ರಜೆಯನ್ನೂ ಲೆಕ್ಕಿಸದೇ ಕರ್ತವ್ಯಕ್ಕೆ ಹಾಜರಾಗಿರುವ ಐಎಎಸ್ ಅಧಿಕಾರಿಗೆ ಅನೇಕರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ