ಆ್ಯಪ್ನಗರ

ಮಾಧ್ಯಮದವರನ್ನು ಲಡಾಖ್‌‌ಗೆ ಕರೆದೊಯ್ದು ವಸ್ತುಸ್ಥಿತಿ ತೋರಿಸಿ: ಮೋದಿ ಸರ್ಕಾರಕ್ಕೆ ಒವೈಸಿ ಸವಾಲು!

ಲಡಾಖ್ ಗಡಿಯ ವಸ್ತುಸ್ಥಿತಿ ಬಗ್ಗೆ ದೇಶಕ್ಕೆ ಅರಿವಾಗಬೇಕಿದ್ದು, ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಮಾಧ್ಯಮಗಳಿಗೆ ಲಡಾಖ್ ವಸ್ತುಸ್ಥಿತಿ ಕುರಿತು ವರದಿ ಮಾಡಲು ಅವಕಾಶ ಮಾಡಿಕೊಡಬೇಕು ಎಂದು ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಒವೈಸಿ ಆಗ್ರಹಿಸಿದ್ದಾರೆ.

Vijaya Karnataka Web 30 Dec 2020, 3:33 pm
ಹೈದರಾಬಾದ್: ಲಡಾಖ್ ಗಡಿಯ ವಸ್ತುಸ್ಥಿತಿ ಬಗ್ಗೆ ದೇಶಕ್ಕೆ ಅರಿವಾಗಬೇಕಿದ್ದು, ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಮಾಧ್ಯಮಗಳಿಗೆ ಲಡಾಖ್ ವಸ್ತುಸ್ಥಿತಿ ಕುರಿತು ವರದಿ ಮಾಡಲು ಅವಕಾಶ ಮಾಡಿಕೊಡಬೇಕು ಎಂದು ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಒವೈಸಿ ಆಗ್ರಹಿಸಿದ್ದಾರೆ.
Vijaya Karnataka Web Asaduddin Owaisi
ಸಂಗ್ರಹ ಚಿತ್ರ


ಲಡಾಖ್ ಗಡಿಯಲ್ಲಿ ಚೀನಾದೊಂದಿಗೆ ನಾವು ಬಹಳ ಸುದೀರ್ಘ ಸಂಘರ್ಷದಲ್ಲಿ ನಿರತರಾಗಿದ್ದೇವೆ. ಲಡಾಖ್ ಗಡಿ ವಸ್ತುಸ್ಥಿತಿ ತಿಳಿಯುವುದು ಸಮಸ್ತ ಭಾರತೀಯರ ಹಕ್ಕಾಗಿದ್ದು, ಮಾಧ್ಯಮಗಳ ಮೂಲಕ ಲಡಾಖ್ ವಸ್ತುಸ್ಥಿತಿಯನ್ನು ದೇಶದ ಮುಂದಿಡಬೇಕು ಎಂದು ಒವೈಸಿ ಅಭಿಪ್ರಾಯಪಟ್ಟಿದ್ದಾರೆ.

ಕಾರ್ಗಿಲ್ ಯುದ್ಧದ ಸಮಯದಲ್ಲಿ ಈ ದೇಶದ ಕೆಲವು ಹಿರಿಯ ಮಾಧ್ಯಮ ವರದಿಗಾರರಿಗೆ ಯುದ್ಧದ ನೈಜ ಸನ್ನಿವೇಶಗಳನ್ನು ಬಿತ್ತರಿಸಲು ಹಾಗೂ ವರದಿ ಮಾಡಲು ಅವಕಾಶ ನೀಡಲಾಗಿತ್ತು. ಅದೇ ರೀತಿ ಲಡಾಖ್ ಸನ್ನಿವೇಶದ ಕುರಿತೂ ಮಾಧ್ಯಮಗಳು ವಸ್ತುಸ್ಥಿತಿ ಬಿತ್ತರಿಸಲು ಹಾಗೂ ವರದಿ ಮಾಡಲು ಕೇಂದ್ರ ಅನುವು ಮಾಡಿಕೊಡಬೇಕು ಎಂದು ಒವೈಸಿ ಒತ್ತಾಯಿಸಿದ್ದಾರೆ.

ಸಂವಿಧಾನದಲ್ಲಿ ಲವ್ ಜಿಹಾದ್ ಬಗ್ಗೆ ವ್ಯಾಖ್ಯಾನವೇ ಇಲ್ಲ: 'ಬಿಜೆಪಿ ಕಾನೂನು' ಬೇಕಿಲ್ಲ ಎಂದ ಒವೈಸಿ!

ಚೀನಾ ಲಡಾಖ್‌ನ ಭೂಪ್ರದೇಶವನ್ನು ಆಕ್ರಮಿಸಿಕೊಂಡಿದೆ ಎಂಬ ಆರೋಪಗಳೂ ಕೆಳಿ ಬರುತ್ತಿವೆ. ಅಲ್ಲದೇ ಗಡಿ ಕಾಯುತ್ತಿರುವ ನಮ್ಮ ಯೋಧರ ಸ್ಥಿತಿಗತಿ ಕುರಿತು ದೇಶ ತಿಳಿದುಕೊಳ್ಳಬಯಸುತ್ತದೆ. ಈ ಕಾರಣಕ್ಕೆ ಮಾಧ್ಯಮಗಳಿಗೆ ಲಡಾಖ್ ವರದಿ ಮಾಡಲು ಅವಕಾಶ ಕಲ್ಪಿಸಬೇಕು ಎಂದು ಒವೈಸಿ ಕೇಂದ್ರ ಸರ್ಕಾರವನ್ನು ಆಗ್ರಹಿಸಿದ್ದಾರೆ.


ಲಡಾಖ್‌ನಿಂದ ದೆಪ್ಸಂಗ್ ವ್ಯಾಲಿವರೆಗಿನ ಗಡಿ ಪ್ರದೇಶಗಳ ನೂಜ ಸ್ಥಿತಿಯನ್ನು ತಿಳಿಸಲು, ಮಾಧ್ಯಮಗಳನ್ನು ಅಲ್ಲಿಗೆ ಕರೆದುಕೊಂಡು ಹೋಗಿ ವರದಿ ಮಾಡಿಸಬೇಕು ಎಂದು ಒವೈಸಿ ಆಗ್ರಹಿಸಿರುವುದು ಕುತೂಹಲ ಕೆರಳಿಸಿದೆ.

ನಮ್ಮ ರಕ್ಷಣಾ ಪಡೆಗಳ ಬಗ್ಗೆ ಭವಿಷ್ಯದ ಪೀಳಿಗೆ ಹೆಮ್ಮೆಪಡಲಿದೆ: 'ಲಡಾಖ್ ವಿಜಯ' ಬಣ್ಣಿಸಿದ ರಾಜನಾಥ್!
ಲಡಾಖ್ ಗಡಿ ಘರ್ಷಣೆ ಸುದೀರ್ಘವಾಗಿದ್ದು, ನಮ್ಮ ಗಡಿಗಳ ಸುರಕ್ಷತೆ ಹಾಗೂ ಸೈನಿಕರ ಸ್ಥಿತಿಗತಿ ಕುರಿತು ಅರಿಯುವುದು ಭಾರತೀಯರ ಹಕ್ಕು. ಮಾಧ್ಯಮಗಳ ಮೂಲಕ ಜನರ ಈ ಬೇಡಿಕೆಯನ್ನು ಮೋದಿ ಸರ್ಕಾ ಈಡೇರಿಸಬೇಕು ಎಂದು ಒವೈಸಿ ಒತ್ತಾಯಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ