ಆ್ಯಪ್ನಗರ

ಸಿಎಎ ವಿರೋಧಿ ನಿರ್ಣಯ ಅಂಗೀಕರಿಸಿದ ತೆಲಂಗಾಣ ಸರ್ಕಾರ!

ಸಿಎಎ ಹಾಗೂ ಎನ್‌ಪಿಆರ್ ಜಾರಿ ವಿರೋಧಿ ನಿರ್ಣಯ ಕೈಗೊಂಡ ರಾಜ್ಯ ಸರ್ಕಾರಗಳ ಪಟ್ಟಿಗೆ ಇದೀಗ ತೆಲಂಗಾಣ ಸೇರ್ಪಡೆಗೊಂಡಿದೆ. ರಾಜ್ಯದಲ್ಲಿ ಬಹುತೇಕ ಜನರ ಬಳಿ ಪೌರತ್ವ ದಾಖಲೆ ಇಲ್ಲ ಎಂಬ ಕಾರಣಕ್ಕೆ ತೆಲಂಗಾಣ ವಿಧಾನಸಭೆ ಸಿಎಎ ವಿರೋಧಿ ನಿರ್ಣಯವನ್ನು ಅಂಗೀಕರಿಸಿದೆ.

Vijaya Karnataka Web 16 Mar 2020, 5:12 pm
ಹೈದರಾಬಾದ್: ಮಹತ್ವದ ಬೆಳವಣಿಗೆಯೊಂದರಲ್ಲಿ ತೆಲಂಗಾಣ ವಿಧಾನಸಭೆ ಸಿಎಎ ವಿರೋಧಿ ನಿರ್ಣಯವನ್ನು ಅಂಗೀಕರಿಸಿದ್ದು, ರಾಜ್ಯದಲ್ಲಿ ಸಿಎಎ ಹಾಗೂ ಎನ್‌ಪಿಆರ್ ಜಾರಿಗೆ ವಿರೋಧ ಇರುವುದಾಗಿ ಸ್ಪಷ್ಟಪಡಿಸಿದೆ.
Vijaya Karnataka Web KCR
ತೆಲಂಗಣ ವಿಧಾನಸಭೆ ಸಿಎಎ ಹಾಗೂ ಎನ್‌ಪಿಆರ್ ವಿರೋಧಿ ನಿರ್ಣಯ ಕೈಗೊಂಡಿದೆ.


ಸಿಎಎ ವಿರೋಧಿ ನಿರ್ಣಯವನ್ನು ಅಂಗೀಕರಿಸುವ ಮೂಲಕ ದೇಶದಲ್ಲಿ ಸಿಎಎ ವಿರೋಧಿ ನಿರ್ಣಯ ಅಂಗೀಕರಿಸಿದ ರಾಜ್ಯಗಳ ಪಟ್ಟಿಗೆ ಇದೀಗ ತೆಲಂಗಾಣ ಸೇರಿಕೊಂಡಿದೆ.

ಸಿಎಎ ಹಾಗೂ ಎನ್‌ಪಿಆರ್ ಕಾಯ್ದೆಯಲ್ಲಿ ತಿದ್ದುಪಡಿ ತರುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಿರುವ ತೆಲಂಗಾಣ ವಿಧಾನಸಭೆ, ಪ್ರಸ್ತುತ ಕಾಯ್ದೆಯನ್ನು ಅದೇ ಮಾದರಿಯಲ್ಲಿ ರಾಜ್ಯದಲ್ಲಿ ಜಾರಿಗೊಳಿಸಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದೆ.

ರಾಜ್ಯದಲ್ಲಿ ಎನ್‌ಪಿಆರ್‌ ಜಾರಿ ಬೇಡ, ಸಿಎಲ್‌ಪಿ ಸಭೆಯಲ್ಲಿ ನಿರ್ಣಯ

ಈ ಕುರಿತ ಚರ್ಚೆಯಲ್ಲಿ ಭಾಗವಹಿಸಿ ಮಾತನಾಡಿದ ತೆಲಂಗಾಣ ಸಿಎಂ ಕೆ ಚಂದ್ರಶೇಖರ್ ರಾವ್, ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿರುವ ಸಿಎಎ ಹಾಗೂ ಎನ್‌ಪಿಆರ್ ಜಾರಿಗೆ ತಮ್ಮ ವಿರೋಧವಿದೆ ಎಂದು ತಿಳಿಸಿದರು.


ರಾಜ್ಯದಲ್ಲಿ ಬಹುತೇಕ ಜನರ ಬಳಿ ನಿರ್ದಿಷ್ಟ ಪೌರತ್ವ ದಾಖಲೆಗಳಿಲ್ಲ. ಒಂದು ವೇಳೆ ಸಿಎಎ ಹಾಗೂ ಎನ್‌ಪಿಆರ್‌ನ್ನು ರಾಜ್ಯದಲ್ಲಿ ಜಾರಿಗೊಳಿಸಿದರೆ ಭಾರೀ ಗೊಂದಲ ಸೃಷ್ಟಿಯಾಗಲಿದೆ ಎಂದು ಕೆಸಿಆರ್ ಸ್ಪಷ್ಟಪಡಿಸಿದರು.

ಸಮಾಜವನ್ನು ಒಡೆದು ಆಳುವ ಇಂತಹ ಕಾನೂನಿನ ಜಾರಿಯ ಅವಶ್ಯಕತೆ ಇದೆಯೆ ಎಂದು ಪ್ರಶ್ನಿಸಿದ ಕೆಸಿಆರ್, ಸಮಾಜದ ಅಶಾಂತಿಗೆ ಕಾರಣವಾಗಿರುವ ಈ ಕಾನೂನನ್ನು ರಾಜ್ಯದಲ್ಲಿ ಜಾರಿ ಮಾಡಲು ತಾವು ತಯಾರಿಲ್ಲ ಎಂದು ಹೇಳಿದರು.

ರಾಜ್ಯದಲ್ಲಿ ಎನ್‌ಪಿಆರ್‌ ಜಾರಿ ಬೇಡ, ಸಿಎಲ್‌ಪಿ ಸಭೆಯಲ್ಲಿ ನಿರ್ಣಯ

ಒಟ್ಟಿನಲ್ಲಿ ಸಿಎಎ ಹಾಗೂ ಎನ್‌ಪಿಆರ್ ವಿರುದ್ಧ ನಿರ್ಣಯ ಕೈಗೊಂಡ ರಾಜ್ಯಗಳ ಪಟ್ಟಿಗೆ ತೆಲಂಗಾಣ ಸೇರಿಕೊಂಡಿದ್ದು, ದೇಶಾದ್ಯಂತ ಸಿಎಎ ಹಾಗೂ ಎನ್‌ಪಿಆರ್ ಜಾರಿಗೊಳಿಸಿಯೇ ಸಿದ್ಧ ಎಂಬ ಕೇಂದ್ರ ಸರ್ಕಾರದ ಹಠಕ್ಕೆ ಇದುವರೆಗೂ ಒಟ್ಟು ಆರು ರಾಜ್ಯಗಳು ಸಡ್ಡು ಹೊಡೆದಂತಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ