Please enable javascript.ವದಂತಿಗೆ ಹೆದರಿ ತವರಿಗೆ ಮರಳಿದೆವು : ಗುಳೆ ಹೊರಟವರ ಹೇಳಿಕೆ - ವದಂತಿಗೆ ಹೆದರಿ ತವರಿಗೆ ಮರಳಿದೆವು : ಗುಳೆ ಹೊರಟವರ ಹೇಳಿಕೆ - Vijay Karnataka

ವದಂತಿಗೆ ಹೆದರಿ ತವರಿಗೆ ಮರಳಿದೆವು : ಗುಳೆ ಹೊರಟವರ ಹೇಳಿಕೆ

ಏಜೆನ್ಸೀಸ್ 18 Aug 2012, 10:37 pm
Subscribe

ತಮಗೆ ಯಾವುದೇ ನೇರವಾದ ದೈಹಿಕ ಬೆದರಿಕೆಗಳಿರಲಿಲ್ಲವಾದರೂ ವದಂತಿಗಳಿಗೆ ಹೆದರಿ ಅಸ್ಸಾಂಗೆ ಮರಳಿದ್ದಾಗಿ ಬೆಂಗಳೂರಿನಿಂದ 2 ವಿಶೇಷ ರೈಲುಗಳಲ್ಲಿ ಗುವಾಹಟಿ ತಲುಪಿದ ಈಶಾನ್ಯ ಭಾಗದ ಜನರು ಹೇಳಿದ್ದಾರೆ.

ವದಂತಿಗೆ ಹೆದರಿ ತವರಿಗೆ ಮರಳಿದೆವು : ಗುಳೆ ಹೊರಟವರ ಹೇಳಿಕೆ
ಗುವಾಹಟಿ/ರಂಗಿಯಾ: ತಮಗೆ ಯಾವುದೇ ನೇರವಾದ ದೈಹಿಕ ಬೆದರಿಕೆಗಳಿರಲಿಲ್ಲವಾದರೂ ವದಂತಿಗಳಿಗೆ ಹೆದರಿ ಅಸ್ಸಾಂಗೆ ಮರಳಿದ್ದಾಗಿ ಬೆಂಗಳೂರಿನಿಂದ 2 ವಿಶೇಷ ರೈಲುಗಳಲ್ಲಿ ಗುವಾಹಟಿ ತಲುಪಿದ ಈಶಾನ್ಯ ಭಾಗದ ಜನರು ಹೇಳಿದ್ದಾರೆ.

ಈ ರೈಲುಗಳಲ್ಲಿ ಅಸ್ಸಾಂ ತಲುಪಿರುವ 1,700 ನಾಗರಿಕರು ದೇಶದ ದಕ್ಷಿಣ ಮತ್ತು ಪಶ್ಚಿಮ ಪ್ರದೇಶಗಳು ಸಹಜ ಸ್ಥಿತಿಗೆ ಮರಳಿದ ಕೂಡಲೇ ಹಿಂದಿರುಗಿ ತಮ್ಮ ಶಿಕ್ಷಣ ಮತ್ತು ವೃತ್ತಿ ಮುಂದುವರಿಸುವುದಾಗಿ ಹೇಳಿದ್ದಾರೆ.

‘ನನಗೆ ಯಾರೊಬ್ಬರೂ ಬೆದರಿಕೆಯೊಡ್ಡಲಿಲ್ಲ. ನನ್ನ ಸಹಚರರಿಗೂ ಯಾವುದೇ ಬೆದರಿಕೆ ಇರಲಿಲ್ಲ. ಆದರೆ ನಾನಾ ವದಂತಿಗಳಿಂದ ಬೆದರಿ ಅಸ್ಸಾಂಗೆ ಮರಳಿದ್ದೇನೆ’ ಎಂದು ರಂಗಿಯಾ ನಿಲ್ದಾಣ ತಲುಪಿದ ನಿರಂಜನ್ ಮುಶಾಹರಿ ಎಂಬುವರು ಪ್ರತಿಕ್ರಿಯಿಸಿದ್ದಾರೆ. ಉಡಲ್ಗುರಿ ಜಿಲ್ಲೆಯ ಖೋಯಿರಾಬಾರಿಯ ನಿವಾಸಿಯಾಗಿರುವ ಅವರು ಕಳೆದ ಕೆಲವು ವರ್ಷಗಳಿಂದ ಬೆಂಗಳೂರಿನ ಖಾಸಗಿ ಸಂಸ್ಥೆಯೊಂದರಲ್ಲಿ ಉದ್ಯೋಗಿಯಾಗಿದ್ದರು.

ರಂಜಾನ್ ಹಬ್ಬದ ನಂತರ ತಮ್ಮ ಮೇಲೆ ಹಲ್ಲೆ ನಡೆಯಲಿದೆ ಎಂಬ ವದಂತಿಯಿಂದ ಅಸ್ಸಾಂ ಮತ್ತು ಈಶಾನ್ಯ ರಾಜ್ಯಗಳ ನಾಗರಿಕರು ತೀವ್ರ ಆತಂಕಕ್ಕೆ ಒಳಗಾದರು ಎಂದು ಬೆಂಗಳೂರಿನಲ್ಲಿ ಭದ್ರತಾ ಸಿಬ್ಬಂದಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಗೋರೇಶ್ವರದ ನಿವಾಸಿ ರಾಮೆನ್ ನಾರ್ಜರಿ ಹೇಳಿದರು. ಸ್ವಲ್ಪ ಸಮಯದವರೆಗಾದರೂ ಊರಿಗೆ ಮರಳುವಂತೆ ಕುಟುಂಬದ ಸದಸ್ಯರು ಒತ್ತಾಯಿಸಿದ್ದರಿಂದ ತಾವು ಅಸ್ಸಾಂಗೆ ಮರಳಿದ್ದಾಗಿ ಅವರು ತಿಳಿಸಿದರು.

ಸುಮಾರು 600 ಪ್ರಯಾಣಿಕರು ರಂಗಿಯಾ ನಿಲ್ದಾಣದಲ್ಲಿ ಇಳಿದರೆ ಉಳಿದವರು ಗುವಾಹಟಿಗೆ ಪ್ರಯಾಣಿಸಿದರು. ಕಾಮರೂಪ್ ಗ್ರಾಮೀಣ ಜಿಲ್ಲಾಡಳಿತ ಅಸ್ಸಾಂಗೆ ಮರಳಿದ ನಾಗರಿಕರಿಗೆ ರಕ್ಷಣೆ ಮತ್ತು ಸಾರಿಗೆ ವ್ಯವಸ್ಥೆಯನ್ನು ರಂಗಿಯಾ ರೈಲು ನಿಲ್ದಾಣದಲ್ಲಿ ಕಲ್ಪಿಸಿತ್ತು. ಅಖಿಲ ಬೋಡೊ ವಿದ್ಯಾರ್ಥಿ ಸಂಘದ ಜಿಲ್ಲಾಧ್ಯಕ್ಷ ಪರೇಶ್ ಚಂದ್ರ ಬೋಡೊ ಅಸ್ಸಾಂಗೆ ಮರಳಿದ ನಾಗರಿಕರನ್ನು ಸ್ವಾಗತಿಸಿದರು.
ಕಾಮೆಂಟ್‌ ಮಾಡಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ