ಆ್ಯಪ್ನಗರ

ಉ.ಪ್ರ. ಪ್ರವಾಸಿ ಕೈಪಿಡಿಯಿಂದ ತಾಜ್‌ಮಹಲ್‌ ಔಟ್‌

ವಿಶ್ವದ ಏಳು ಅದ್ಭುತಗಳಲ್ಲಿ ಒಂದೆನಿಸಿದ ತಾಜ್‌ ಮಹಲ್‌ ಉತ್ತರ ಪ್ರದೇಶ ಸರಕಾರದ ಅಧಿಕೃತ ಪ್ರವಾಸಿ ಕೈಪಿಡಿಯಿಂದ ಹೊರಬಿದ್ದಿದೆ!

Vijaya Karnataka Web 3 Oct 2017, 5:00 am

ಲಖನೌ: ದೇಶ-ವಿದೇಶದಿಂದ ಲಕ್ಷಾಂತರ ಪ್ರವಾಸಿಗರನ್ನು ಆಕರ್ಷಿಸುತ್ತಿರುವ ವಿಶ್ವದ ಏಳು ಅದ್ಭುತಗಳಲ್ಲಿ ಒಂದೆನಿಸಿಕೊಂಡಿರುವ ತಾಜ್‌ ಮಹಲ್‌ಅನ್ನು ಉತ್ತರ ಪ್ರದೇಶ ಸರಕಾರದ ಅಧಿಕೃತ ಪ್ರವಾಸಿ ಕೈಪಿಡಿಯಿಂದ ಕೈಬಿಡಲಾಗಿದೆ.

Vijaya Karnataka Web
ಉ.ಪ್ರ. ಪ್ರವಾಸಿ ಕೈಪಿಡಿಯಿಂದ ತಾಜ್‌ಮಹಲ್‌ ಔಟ್‌

ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಸರಕಾರ ಬಿಡುಗಡೆ ಮಾಡಿರುವ ಹೊಸ ಕೈಪಿಡಿಯಲ್ಲಿ ಮಥುರಾ, ಅಯೋಧ್ಯೆ, ಗೋರಖ್‌ಪುರ ಸ್ಥಾನ ಪಡೆದಿವೆ. ಆದರೆ ವಿಶ್ವವಿಖ್ಯಾತ ತಾಜ್‌ಮಹಲ್‌ಅನ್ನು ತೆಗೆದುಹಾಕಲಾಗಿದೆ. ಸರಕಾರದ ಈ ಕ್ರಮಕ್ಕೆ ಇತಿಹಾಸಕಾರರು, ಶಿಕ್ಷಣ ತಜ್ಞರಿಂದ ತೀವ್ರ ವಿರೋಧ ವ್ಯಕ್ತವಾಗಿದೆ. ಈ ಮಧ್ಯೆ ರಾಜ್ಯ ಪ್ರವಾಸೋದ್ಯಮ ಸಚಿವಾಲಯ, ತಾಜ್‌ಮಹಲ್‌ ನಮ್ಮ ಆದ್ಯತಾ ಪಟ್ಟಿಯಲ್ಲಿದ್ದು, ಎಲ್ಲೋ ಎಡವಟ್ಟಾಗಿದೆ ಎಂದು ಹೇಳಿಕೆ ನೀಡಿದೆ.
ಇತ್ತೀಚೆಗಷ್ಟೇ ಯೋಗಿ ಆದಿತ್ಯನಾಥ್‌ ಅವರು ವಿದೇಶಿ ಪ್ರವಾಸಿಗರಿಗೆ ತಾಜ್‌ ಮಹಲ್‌ ಪ್ರತಿಕೃತಿಯನ್ನು ಕಾಣಿಕೆಯಾಗಿ ನೀಡುವುದಕ್ಕೆ ಆಕ್ಷೇಪಿಸಿ, ಇದು ಭಾರತದ ಸಂಸ್ಕೃತಿಯನ್ನು ಪ್ರತಿನಿಧಿಸುವುದಿಲ್ಲ ಎಂದಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ