Please enable javascript.ಸಿಜೆಐಆಗಿ ಅಲ್ತಮಸ್ ಕಬೀರ್ ಪ್ರಮಾಣವಚನ - ಸಿಜೆಐಆಗಿ ಅಲ್ತಮಸ್ ಕಬೀರ್ ಪ್ರಮಾಣವಚನ - Vijay Karnataka

ಸಿಜೆಐಆಗಿ ಅಲ್ತಮಸ್ ಕಬೀರ್ ಪ್ರಮಾಣವಚನ

ಏಜೆನ್ಸೀಸ್ 29 Sep 2012, 11:57 pm
Subscribe

ದೇಶದ 39ನೇ ಮುಖ್ಯ ನ್ಯಾಯಮೂರ್ತಿ(ಸಿಜೆಐ)ಯಾಗಿ ಅಲ್ತಮಸ್ ಕಬೀರ್ ಶನಿವಾರ ಪ್ರಮಾಣ ವಚನ ಸ್ವೀಕರಿಸಿದರು.

ಸಿಜೆಐಆಗಿ ಅಲ್ತಮಸ್ ಕಬೀರ್ ಪ್ರಮಾಣವಚನ
ಹೊಸದಿಲ್ಲಿ : ದೇಶದ 39ನೇ ಮುಖ್ಯ ನ್ಯಾಯಮೂರ್ತಿ(ಸಿಜೆಐ)ಯಾಗಿ ಅಲ್ತಮಸ್ ಕಬೀರ್ ಶನಿವಾರ ಪ್ರಮಾಣ ವಚನ ಸ್ವೀಕರಿಸಿದರು.

ರಾಷ್ಟ್ರಪತಿ ಪ್ರಣಬ್ ಮುಖರ್ಜಿ, ನ್ಯಾಯಮೂರ್ತಿ ಅಲ್ತಮಸ್ ಕಬೀರ್ ಅವರಿಗೆ ಪ್ರತಿಜ್ಞಾ ವಿಧಿ ಬೋಧಿಸಿದರು. ರಾಷ್ಟ್ರಪತಿ ಭವನದ ಅಶೋಕ ಸಭಾಂಗಣದಲ್ಲಿ ನಡೆದ ಸರಳ ಸಮಾರಂಭದಲ್ಲಿ ನ್ಯಾಯಮೂರ್ತಿ ಕಬೀರ್ ದೇವರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದರು.

ಸುಮಾರು ಎರಡೂವರೆ ವರ್ಷಗಳ ಕಾಲ ಮುಖ್ಯ ನ್ಯಾಯಮೂರ್ತಿಯಾಗಿ ಸೇವೆ ಸಲ್ಲಿಸಿರುವ ಸರೋಶ್ ಹೋಮಿ ಕಪಾಡಿಯಾ ನೂತನ ನ್ಯಾಯಮೂರ್ತಿ ಅಲ್ತಮಸ್ ಕಬೀರ್ ಅವರಿಗೆ ಅಧಿಕಾರ ಹಸ್ತಾಂತರಿಸಿದರು.

2005, ಸೆಪ್ಟೆಂಬರ್ 9ರಂದು ನ್ಯಾಯಮೂರ್ತಿ ಕಬೀರ್, ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಯಾಗಿ ನೇಮಕಗೊಂಡರು. ಮಾನವ ಹಕ್ಕುಗಳು ಹಾಗೂ ಚುನಾವಣಾ ಕಾನೂನಿಗೆ ಸಂಬಂಧಿಸಿದಂತೆ ಕೆಲ ಐತಿಹಾಸಿಕ ತೀರ್ಪನ್ನು ನೀಡಿರುವ ನ್ಯಾಯಮೂರ್ತಿ ಕಬೀರ್ ಅವರ ಅಧಿಕಾರವಧಿ 2013 ಜುಲೈ 18ಕ್ಕೆ ಪೂರ್ಣಗೊಳ್ಳಲಿದೆ.

ಪ್ರಧಾನಿ ಮನಮೋಹನ್ ಸಿಂಗ್, ಉಪರಾಷ್ಟ್ರಪತಿ ಹಮೀದ್ ಅನ್ಸಾರಿ ಮತ್ತು ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ಕೇಂದ್ರ ಸರಕಾರದ ಹಲವು ಸಚಿವರು, ಬಿಜೆಪಿ ನಾಯಕರಾದ ಎಲ್.ಕೆ.ಆಡ್ವಾಣಿ, ಅರುಣ್ ಜೇಟ್ಲಿ, ಎಸ್ಪಿ ವರಿಷ್ಠ ಮುಲಾಯಂ ಸಿಂಗ್ ಯಾದವ್ ಹಾಗೂ ಆರ್‌ಜೆಡಿ ನಾಯಕ ಲಾಲು ಪ್ರಸಾದ್ ಯಾದವ್ ಸಮಾರಂಭದಲ್ಲಿ ಉಪಸ್ಥಿತರಿದ್ದರು.

* ಜನನ : 1948 ಜುಲೈ 19
* ಜನ್ಮಸ್ಥಳ: ಕೋಲ್ಕೊತಾ
* ಶಿಕ್ಷಣ : ಕಲ್ಕತ್ತಾ ವಿಶ್ವವಿದ್ಯಾಲಯದಲ್ಲಿ ಎಲ್‌ಎಲ್‌ಬಿ ಮತ್ತು ಎಂಎ ಪದವಿ.
* ವೃತ್ತಿ ಬದುಕು : 19990 ಆಗಸ್ಟ್ 6, ಕಲ್ಕತ್ತಾ ಹೈಕೋರ್ಟ್ ಕಾಯಂ ನ್ಯಾಯಮೂರ್ತಿಯಾಗಿ ನೇಮಕ.
ಕಾಮೆಂಟ್‌ ಮಾಡಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ