ಆ್ಯಪ್ನಗರ

ಜಾಧವ್ ಪತ್ನಿ, ತಾಯಿಯನ್ನು ವಿಧವೆ ಮಾಡಿದ ಪಾಕ್: ಸುಷ್ಮಾ ಕಿಡಿ

ಕುಲಭೂಷಣ್ ಜಾಧವ್ ಅವರ ತಾಯಿ ಹಾಗೂ ಪತ್ನಿಯನ್ನು ವಿಧವೆಯರಂತೆ ನಡೆಸಿಕೊಳ್ಳುವ ಮೂಲಕ ಪಾಕಿಸ್ತಾನ ಸರಕಾರ ಅಮಾನವೀಯತೆ ಮೆರೆದಿದೆ ಎಂದು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಆರೋಪಿಸಿದರು.

Vijaya Karnataka Web 28 Dec 2017, 12:37 pm
ಹೊಸದಿಲ್ಲಿ: ಕುಲಭೂಷಣ್ ಜಾಧವ್ ಅವರ ತಾಯಿ ಹಾಗೂ ಪತ್ನಿಯನ್ನು ವಿಧವೆಯರಂತೆ ನಡೆಸಿಕೊಳ್ಳುವ ಮೂಲಕ ಪಾಕಿಸ್ತಾನ ಸರಕಾರ ಅಮಾನವೀಯತೆ ಮೆರೆದಿದೆ ಎಂದು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಆರೋಪಿಸಿದರು.
Vijaya Karnataka Web  pakistan made jadhavs wife mother appear as widows to him says sushma swaraj in rajya sabha
ಜಾಧವ್ ಪತ್ನಿ, ತಾಯಿಯನ್ನು ವಿಧವೆ ಮಾಡಿದ ಪಾಕ್: ಸುಷ್ಮಾ ಕಿಡಿ


ಭಾರತದ ನೌಕಾಪಡೆಯ ಮಾಜಿ ಅಧಿಕಾರಿ ಯಾಗಿರುವ ಜಾಧವ್‌ಗೆ ಪಾಕಿಸ್ತಾನದ ಸೇನಾ ನ್ಯಾಯಾಲಯ ಗಲ್ಲು ಶಿಕ್ಷೆ ಪ್ರಕಟಿಸಿದ್ದು, ಜೈಲಿನಲ್ಲಿರುವ ಅವರನ್ನು ತಾಯಿ ಅವಂತಿ ಮತ್ತು ಪತ್ನಿ ಚೇತನಾ ಅವರು ಸೋಮವಾರ ಭೇಟಿಯಾಗಿದ್ದರು. ಪಾಕ್‌ ಅಧಿಕಾರಿಗಳು ಜಾಧವ್ ಅವರ ತಾಯಿ ಮತ್ತು ಪತ್ನಿಯ ಮಾಂಗಲ್ಯ, ಬಿಂದಿ ತೆಗೆಯಿಸಿ ವಿಧವೆಯರಂತೆ ಭೇಟಿಗೆ ಅವಕಾಶ ನೀಡಿದ್ದಾರೆ. ಅವರಿಬ್ಬರೂ ಭೇಟಿಯಾದಾಗ ಜಾಧವ್‌ ಅವರು ಒಮ್ಮೆ ಶಾಕ್‌ ಆಗಿದ್ದಾರೆ. ಇದನ್ನು ಪಾಕ್ ಸರಕಾರ ಉದ್ದೇಶಪೂರ್ವಕವಾಗಿಯೇ ಮಾಡಿದೆ ಎಂದು ಪಾಕ್ ವಿರುದ್ಧ ಸುಷ್ಮಾ ಕಿಡಿಕಾರಿದರು.

ಜಾಧವ್ ಪತ್ನಿ ಹಾಗೂ ತಾಯಿ ಪಾಕಿಸ್ತಾನದ ನಡವಳಿಕೆಯನ್ನು ಖಂಡಿಸುವ ಭಾಗವಾಗಿದ್ದರು. ಅದಕ್ಕಾಗಿಯೇ ಜಾದವ್ ಪತ್ನಿಯ ಷೂನಲ್ಲಿ ಕ್ಯಾಮೆರಾ ಇದೆ ಎಂದು ಪಾಕಿಸ್ತಾನ ಆರೋಪಿಸಿದೆ. ನಾವು ಯಾವುದೇ ಕಾರಣಕ್ಕೂ ಮಾಂಗಲ್ಯ ತೆಗೆಯುವುದಿಲ್ಲ ಎಂದು ಪಾಕ್ ಅಧಿಕಾರಿಗಳ ಬಳಿ ಅಂಗಲಾಚಿ ಬೇಡಿಕೊಂಡೆ. ಆದರೆ, ಮಾಂಗಲ್ಯ ತೆಗೆಯಲೇ ಬೇಕು ಎಂದು ಅವರು ಪಟ್ಟು ಹಿಡಿದರು' ಎಂದು ಜಾಧವ್ ತಾಯಿ ಅವಂತಿ ಅವರು ಸಚಿವೆ ಸ್ವರಾಜ್ ಬಳಿ ಅಳಲು ತೋಡಿಕೊಂಡಿದ್ದರು.

'ನಾನು ಮಾಗಲ್ಯ, ಬಿಂದಿ ಹಾಗೂ ಬಳೆಗಳನ್ನು ತೆಗೆದೇ ಪುತ್ರನನ್ನು ಭೇಟಿಯಾಗಬೇಕಾದ ಸ್ಥಿತಿ ಎದುರಾಯಿತು. ನನ್ನನ್ನು ವಿಧವೆಯಂತೆ ಕಂಡ ಕುಲಭೂಷನ್ ಗಾಬರಿಯಿಂದಲೇ ಬಾಬಾ (ಅಪ್ಪ) ಹೇಗಿದ್ದಾರೆ ಎಂದು ಪ್ರಶ್ನಿಸಿದ' ಎಂದು ಅವಂತಿ ವಿವರಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ