ಆ್ಯಪ್ನಗರ

ಮಹಿಳಾ ಗೃಹರಕ್ಷಕಿಯಿಂದ ಬಾಡಿ ಮಸಾಜ್ ಮಾಡಿಸಿಕೊಂಡ ಎಎಸ್‌ಐ: ವೈರಲ್ ವೀಡಿಯೋ

ಲಂಗಾಣದ ಗಡ್ವಾಲ್ ಜಿಲ್ಲೆಯ ಸಹಾಯಕ ಪೊಲೀಸ್ ಸಬ್‌ ಇನ್ಸ್‌ಪೆಕ್ಟರ್‍ (ಎಎಸ್‌ಐ) ಒಬ್ಬರು ಮಹಿಳಾ ಗೃಹರಕ್ಷಕಿಯೊಬ್ಬರಿಂದ ಬಾಡಿ ಮಸಾಜ್ ಮಾಡಿಸಿಕೊಳ್ಳುತ್ತಿರುವ ವೀಡಿಯೋ ವೈರಲ್ ಆಗಿದೆ.

Mumbai Mirror 14 Nov 2017, 10:50 am
ಹೈದರಾಬಾದ್: ತೆಲಂಗಾಣದ ಗಡ್ವಾಲ್ ಜಿಲ್ಲೆಯ ಸಹಾಯಕ ಪೊಲೀಸ್ ಸಬ್‌ ಇನ್ಸ್‌ಪೆಕ್ಟರ್ (ಎಎಸ್‌ಐ) ಒಬ್ಬರು ಮಹಿಳಾ ಗೃಹರಕ್ಷಕಿಯೊಬ್ಬರಿಂದ ಬಾಡಿ ಮಸಾಜ್ ಮಾಡಿಸಿಕೊಳ್ಳುತ್ತಿರುವ ವೀಡಿಯೋ ವೈರಲ್ ಆಗಿದ್ದು, ಹಿರಿಯ ಪೊಲೀಸ್ ಅಧಿಕಾರಿಗಳು ಈ ಘಟನೆಯ ತನಿಖೆಗೆ ಆದೇಶಿಸಿದ್ದಾರೆ.
Vijaya Karnataka Web  watch telangana cop caught getting massage by women home guard
ಮಹಿಳಾ ಗೃಹರಕ್ಷಕಿಯಿಂದ ಬಾಡಿ ಮಸಾಜ್ ಮಾಡಿಸಿಕೊಂಡ ಎಎಸ್‌ಐ: ವೈರಲ್ ವೀಡಿಯೋ


ಸಶಸ್ತ್ರ ಮೀಸಲು ಪಡೆ (ಎಆರ್) ಪ್ರಧಾನ ಕಚೇರಿಯ ಎಎಸ್‌ಐ ಹಸನ್ ಎಂಬಾತ ಎಆರ್ ಆವರಣದಲ್ಲಿರುವ ಕೋಣೆಯೊಂದರಲ್ಲಿ ಮಹಿಳಾ ಗೃಹರಕ್ಷಕಿಯಿಂದ ಮಸಾಜ್ ಮಾಡಿಸಿಕೊಂಡಿದ್ದು ಚರ್ಚೆಗೆ ಗ್ರಾಸವಾಗಿದೆ.

ಈ ಆಸಾಮಿ ಕಳೆದ ಎರಡು ತಿಂಗಳಿಂದ ಮಹಿಳಾ ಸಿಬ್ಬಂದಿಯಿಂದ ಮಸಾಜ್ ಸೇವೆ ಪಡೆಯುತ್ತಿದ್ದ ಎಂದು ಹೇಳಲಾಗುತ್ತಿದ್ದು, ವಾರದ ಹಿಂದೆಯಷ್ಟೇ ಸಿಬ್ಬಂದಿಯೊಬ್ಬರು ಈ ಕೃತ್ಯವನ್ನು ಮೊಬೈಲ್‌ನಲ್ಲಿ ಸೆರೆಹಿಡಿದು, ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ.

ಘಟನೆ ಸಂಬಂಧ ರಹಸ್ಯ ತನಿಖೆ ನಡೆಸುವಂತೆ ಜಿಲ್ಲಾ ಪೊಲೀಸ್ ಅಧೀಕ್ಷಕ ಎಸ್‌.ಎಂ.ವಿಜಯ್ ಕುಮಾರ್ ಅವರು ಹೆಚ್ಚುವರಿ ಪೊಲೀಸ್ ಅಧೀಕ್ಷಕರಿಗೆ ಸೂಚಿಸಿದ್ದಾರೆ.

ವೀಡಿಯೋಗಾಗಿ ಇಲ್ಲಿ ಕ್ಲಿಕ್ ಮಾಡಿ

ಪೊಲೀಸ್ ಇಲಾಖೆಯಲ್ಲಿದ್ದ ಆರ್ಡರ್ಲೀ ಪದ್ಧತಿಯನ್ನು ನಿಷೇಧಿಸಲಾಗಿದೆ. ಆದರೆ, ತೆಲಂಗಾಣದಲ್ಲಿ ನಡೆದಿರುವ ಈ ಕೃತ್ಯ ಆರ್ಡರ್ಲೀ ಪದ್ಧತಿಗಿಂತ ಹೇಯ ಎಂದು ವರ್ಣಿಸಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ