ಆ್ಯಪ್ನಗರ

ಮ್ಯಾನ್ಮಾರ್‌ನಲ್ಲಿ 10 ಕೋಟಿ ವರ್ಷ ಹಳೆಯ ಜಲಚರ ಪ್ರಾಣಿಯ ವೀರ್ಯ ಪತ್ತೆ!

ಸಿಗಡಿ ಜಾತಿಯ ಪ್ರಾಣಿಯೊಂದರ 10 ಕೋಟಿ ವರ್ಷ ಹಳೆಯ ವೀರ್ಯವನ್ನು ಸಂಶೋಧಕರ ತಂಡವೊಂದು ಪತ್ತೆಹಚ್ಚಿದ್ದು, ಇದುವರೆಗಿನ ಅತ್ಯಂತ ಪುರಾತನ ವೀರ್ಯ ಎಂದು ವಿಜ್ಞಾನಿಗಳು ಅಭಿಪ್ರಾಯಪಟ್ಟಿದ್ದಾರೆ.

Agencies 17 Sep 2020, 11:08 pm
ಹೊಸದಿಲ್ಲಿ: ಸಿಗಡಿ ಜಾತಿಯ ಪ್ರಾಣಿಯೊಂದರ 10 ಕೋಟಿ ವರ್ಷ ಹಳೆಯ ವೀರ್ಯವನ್ನು ಸಂಶೋಧಕರ ತಂಡವೊಂದು ಪತ್ತೆಹಚ್ಚಿದ್ದು, ಇದುವರೆಗಿನ ಅತ್ಯಂತ ಪುರಾತನ ವೀರ್ಯ ಎಂದು ವಿಜ್ಞಾನಿಗಳು ಅಭಿಪ್ರಾಯಪಟ್ಟಿದ್ದಾರೆ.
Vijaya Karnataka Web crustacean


ಚೈನೀಸ್‌ ಅಕಾಡೆಮಿ ಆಫ್‌ ಸೈನ್ಸಸ್‌ನ ವಿಜ್ಞಾನಿಗಳು, ಮ್ಯಾನ್ಮಾರ್‌ನಲ್ಲಿ ಸಿಗಡಿ ಜಾತಿಯ ಹೆಣ್ಣು ಜಲಚರವೊಂದರಲ್ಲಿ ವೀರ್ಯ ಪತ್ತೆ ಹಚ್ಚಿದ್ದಾರೆ. ಈ ಜಲಚರದ ಕಳೇಬರವು ಮರದ ಅಂಟೊಂದರಲ್ಲಿ ಸಿಲುಕಿತ್ತು. ವಿಜ್ಞಾನಿಗಳು ಅದರ ಪರಿಶೀಲನೆ ನಡೆಸಿದಾಗ ವೀರ್ಯ ಪತ್ತೆಯಾಗಿದೆ ಎಂದು ಜರ್ನಲ್‌ ರಾಯಲ್‌ ಸೊಸೈಟಿ ಪ್ರೊಸೀಡಿಂಗ್ಸ್‌ನಲ್ಲಿ ಲೇಖನ ಪ್ರಕಟಿಸಲಾಗಿದೆ.

ಸುಮಾರು 1.7 ಕೋಟಿ ವರ್ಷ ಹಳೆಯ ವೀರ್ಯವನ್ನು ಪಳೆಯುಳಿಕೆ ಶಾಸ್ತ್ರಜ್ಞರು ಪತ್ತೆಹಚ್ಚಿರುವುದು ಇದುವರೆಗಿನ ದಾಖಲೆಯಾಗಿತ್ತು. ಸಂಶೋಧಕರ ಪ್ರಕಾರ ಸಿಗಡಿ ಜಾತಿಯ ಜಲಚರಗಳು ಸುಮಾರು 50 ಕೋಟಿ ವರ್ಷಗಳಿಗಿಂತ ಹಿಂದಿನಿಂದಲೂ ಇವೆ.

ಮಾನವ ಬಂಡವಾಳ ಸೂಚ್ಯಂಕ 2020: ಭಾರತಕ್ಕೆ 116ನೇ ಸ್ಥಾನ!

ಮ್ಯಾನ್ಮಾರ್‌ನಲ್ಲಿ ಪತ್ತೆಯಾಗಿರುವ ಜಲಚರವು ಮಿಲಿನ ಕ್ರಿಯೆಯಲ್ಲಿ ಭಾಗಿಯಾದ ಸ್ವಲ್ಪ ಹೊತ್ತಿನಲ್ಲೇ ಮರದ ಅಂಟಿನಲ್ಲಿಸಿಲುಕಿ ಮೃತಪಟ್ಟಿತ್ತು. ಪ್ರಸ್ತುತ ಸಿಕ್ಕಿರುವ ಪ್ರಾಣಿಯ ಗಾತ್ರ ಚಿಕ್ಕದಾಗಿದ್ದರೂ, ದೈತ್ಯ ಪ್ರಾಣಿಯ ಗುಂಪಿಗೆ ಸೇರಿಸಬಹುದು ಎಂದು ಸಂಶೋಧಕರು ಅಂದಾಜಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ