ಆ್ಯಪ್ನಗರ

ಚಿಲ್ಲರೆ ವಲಯದಲ್ಲಿ 100% ಎಫ್‌ಡಿಐಗೆ ಅಸ್ತು

ಅಲ್ಲದೇ, ಕಲ್ಲಿದ್ದಲ ಗಣಿಗಾರಿಕೆ ಮತ್ತು ಗುತ್ತಿಗೆ ಉತ್ಪಾದನೆ ವಲಯದಲ್ಲಿ ಶೇ.100ರಷ್ಟು ಎಫ್‌ಡಿಐಗೆ ಬಾಗಿಲನ್ನು ತೆರೆಯಲಾಗಿದೆ. ಜೊತೆಗೆ ಡಿಜಿಟಲ್‌ ಮೀಡಿಯಾದಲ್ಲಿ ಶೇ.26 ವಿದೇಶಿ ನೇರ ಬಂಡವಾಳ ಹೂಡಿಕೆಗೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸಂಪುಟ ಸಮಿತಿ ಸಮ್ಮತಿಸಿದೆ.

PTI 29 Aug 2019, 5:00 am
ಹೊಸದಿಲ್ಲಿ: ಏಕ ಬ್ರ್ಯಾಂಡ್‌ನ ಚಿಲ್ಲರೆ ವಲಯ(ಸಿಂಗಲ್‌-ಬ್ರ್ಯಾಂಡ್‌ ರೀಟೆಲ್‌), ಡಿಜಿಟಲ್‌ ಮಾಧ್ಯಮ, ಗುತ್ತಿಗೆ ಆಧಾರಿತ ಉತ್ಪಾದನೆ ಸೇರಿದಂತೆ ಕೆಲವು ವಲಯಗಳಲ್ಲಿ ನೇರ ವಿದೇಶಿ ಬಂಡವಾಳ ಹೂಡಿಕೆಗೆ(ಎಫ್‌ಡಿಐ) ಸಂಬಂಧಿಸಿದ ನಿಯಮಗಳನ್ನು ಸಂಪುಟ ಸಭೆಯು ಬುಧವಾರ ಸಡಿಲಗೊಳಿಸಿದೆ.
Vijaya Karnataka Web fdi


ಅಲ್ಲದೇ, ಕಲ್ಲಿದ್ದಲ ಗಣಿಗಾರಿಕೆ ಮತ್ತು ಗುತ್ತಿಗೆ ಉತ್ಪಾದನೆ ವಲಯದಲ್ಲಿ ಶೇ.100ರಷ್ಟು ಎಫ್‌ಡಿಐಗೆ ಬಾಗಿಲನ್ನು ತೆರೆಯಲಾಗಿದೆ. ಜೊತೆಗೆ ಡಿಜಿಟಲ್‌ ಮೀಡಿಯಾದಲ್ಲಿ ಶೇ.26 ವಿದೇಶಿ ನೇರ ಬಂಡವಾಳ ಹೂಡಿಕೆಗೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸಂಪುಟ ಸಮಿತಿ ಸಮ್ಮತಿಸಿದೆ. ರಿಟೇಲ್‌ ಮಳಿಗೆ ತೆರೆದೇ ಉತ್ಪನ್ನಗಳನ್ನು ಮಾರಾಟ ಮಾಡಬೇಕು ಎನ್ನುವ ನಿಯಮವನ್ನು ಸಡಿಲಿಸಿದ್ದು, ಆನ್‌ಲೈನ್‌ ಶಾಪಿಂಗ್‌ ತಾಣಗಳ ಮೂಲಕವೇ ಉತ್ಪನ್ನಗಳನ್ನು ಮಾರಾಟ ಮಾಡಬಹುದಾಗಿದೆ. ವಿದೇಶಿ ಹೂಡಿಕೆದಾರರನ್ನು ಆಕರ್ಷಿಸುವ ನಿಟ್ಟಿನಲ್ಲಿ ಈ ಕ್ರಮಗಳು ಪರಿಣಾಮಕಾರಿಯಾಗಿವೆ.

ಸುದ್ದಿಗೋಷ್ಠಿಯಲ್ಲಿ ವಿವರಗಳನ್ನು ಪ್ರಕಟಿಸಿದ ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್‌ ಗೋಯಲ್‌, ''ದೇಶೀಯ ಉತ್ಪಾದನೆ ಹೆಚ್ಚಿಸುವ ನಿಟ್ಟಿನಲ್ಲಿ ಗುತ್ತಿಗೆ ಉತ್ಪಾದನೆ ಆಧಾರಿತ ಎಲ್ಲ ವಲಯಗಳಲ್ಲೂ ಶೇ.100ರಷ್ಟು ವಿದೇಶಿ ಬಂಡವಾಳ ಹೂಡಿಕೆಗೆ ಅವಕಾಶ ನೀಡಲಾಗಿದೆ,'' ಎಂದಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ