ಆ್ಯಪ್ನಗರ

ಅಸ್ಸಾಂ ರೈಲಿನಲ್ಲಿ ಟೈಂ ಬಾಂಬ್‌: ತಪ್ಪಿದ ದುರಂತ

ಇಲ್ಲಿನ ರೈಲ್ವೇ ನಿಲ್ದಾಣದಲ್ಲಿ ಉಗ್ರರು ಗೋಣಿ ಚೀಲದಲ್ಲಿ ಅಡಗಿಸಿಟ್ಟಿದ್ದ ಸುಧಾರಿತ ಸ್ಫೋಟಕ ಸಾಧನಗಳನ್ನು ಪೊಲೀಸರು ವಶಪಡಿಸಿಕೊಳ್ಳುವ ಮೂಲಕ ಮಹಾ ದುರಂತವನ್ನು ತಡೆಗಟ್ಟಲಾಗಿದೆ.

ಟೈಮ್ಸ್ ಆಫ್ ಇಂಡಿಯಾ 18 Aug 2017, 4:33 pm
ಗುವಾಹಟಿ: ಇಲ್ಲಿನ ರೈಲ್ವೇ ನಿಲ್ದಾಣದಲ್ಲಿ ಉಗ್ರರು ಗೋಣಿ ಚೀಲದಲ್ಲಿ ಅಡಗಿಸಿಟ್ಟಿದ್ದ ಸುಧಾರಿತ ಸ್ಫೋಟಕ ಸಾಧನಗಳನ್ನು ಪೊಲೀಸರು ವಶಪಡಿಸಿಕೊಳ್ಳುವ ಮೂಲಕ ಮಹಾ ದುರಂತವನ್ನು ತಡೆಗಟ್ಟಲಾಗಿದೆ.
Vijaya Karnataka Web 10kg ied found at guwahati railway station major tragedy averted
ಅಸ್ಸಾಂ ರೈಲಿನಲ್ಲಿ ಟೈಂ ಬಾಂಬ್‌: ತಪ್ಪಿದ ದುರಂತ


ಗೋಣಿ ಚೀಲದಲ್ಲಿ ಈ ಸ್ಪೋಟಕಗಳನ್ನು ಕಟ್ಟಿ ರೈಲ್ವೇ ಮೇಲ್ ಸೇವೆ ಮೂಲಕ ಅಸ್ಸಾಂನ ಸಿಲ್ಚಾನ್‌ಗೆ ರವಾನಿಸಲು ಗುವಾಹಟಿಯ ಅಂಚೆ ಇಲಾಖೆಯಲ್ಲಿ ಇಡಲಾಗಿತ್ತು. ಅಂಚೆ ಇಲಾಖೆ ಸಿಬ್ಬಂದಿಗಳು ಈ ಚೀಲವನ್ನು ರೈಲು ನಿಲ್ದಾಣದಲ್ಲಿ ಇರಿಸಿ ಹೋಗಿದ್ದಾರೆ. ಉಗ್ರರು ಈ ಸ್ಪೋಟಕಕ್ಕೆ ಟೈಮರ್‌ನ್ನು ಅಳವಡಿಸಿದ್ದರು.

ರೈಲ್ವೇ ಸಿಬ್ಬಂದಿ ಈ ಚೀಲವನ್ನು ರೈಲಿಗಿಳಿಸಿದ ವೇಳೆ ಟೈಮರ್ ಸದ್ದು ಮಾಡುತ್ತಿತ್ತು, ಕೂಡಲೇ ಅನುಮಾನಗೊಂಡ ರೈಲ್ವೇ ಅಧಿಕಾರಿಗಳು ಅಸ್ಸಾಂನ ವಿಶೇಷ ಬಾಂಬ್‌ ನಿಷ್ಕ್ರಿಯ ತಜ್ಞರಿಗೆ ಮಾಹಿತಿ ರವಾನಿಸಿದ್ದಾರೆ. ಸ್ಥಳಕ್ಕಾಗಮಿಸಿದ ತಂಡ ಸ್ಪೋಟಕವನ್ನು ನಗರದಿಂದ ಹೊರವಲಯದಲ್ಲಿರುವ ಸುರಕ್ಷಿತ ಸ್ಥಳ 'ರಾಣಿ'ಗೆ ಒಯ್ದಿದ್ದು, ನಿಷ್ಕ್ರಿಯಗೊಳಿಸಲು ಪ್ರಯತ್ನ ಪಡುತ್ತಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಘಟನೆಯಿಂದ ಎಚ್ಚೆತ್ತ ರೈಲ್ವೇ ಪೊಲೀಸರು ಕೂಡಲೇ ರೈಲ್ವೇ ನಿಲ್ದಾಣದ ಸುತ್ತಮುತ್ತ ಪೊಲೀಸ್‌ ಶ್ವಾನಗಳನ್ನು ಕರೆತರಿಸಿ ಬೇರೆ ಎಲ್ಲಾದರೂ ಬಾಂಬ್‌ ಇರಿಸಲಾಗಿದೆಯೇ? ಎಂದು ತನಿಖೆ ನಡೆಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ