ಆ್ಯಪ್ನಗರ

ತಂದೆಯ ಉದ್ಯೋಗ ಮರಳಿ ಕೊಡುವಂತೆ ಪಿಎಂ ಮೋದಿಗೆ 37 ಪತ್ರ ಬರೆದ 13 ವರ್ಷದ ಬಾಲಕ

ಕಳೆದ 2016 ರಿಂದ ನಿರಂತರವಾಗಿ ಪ್ರಧಾನಿ ಮೋದಿಗೆ ಪತ್ರ ಕಳುಹಿಸುತ್ತಿರುವ 8ನೇ ತರಗತಿ ಬಾಲಕ, ತಂದೆಯ ಉದ್ಯೋಗ ನಷ್ಟದಿಂದ ಕುಟುಂಬ ನಿರ್ವಹಣೆ ಕಷ್ಟವಾಗುತ್ತಿರುವ ಬಗ್ಗೆ ವಿವರಣೆ ನೀಡಿದ್ದಾನೆ.

Indiatimes 9 Jun 2019, 11:49 am
ಹೊಸದಿಲ್ಲಿ: ತಂದೆಯ ಉದ್ಯೋಗವನ್ನು ಮರಳಿ ಒದಗಿಸಿಕೊಡುವಂತೆ ಕೋರಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ 37 ಪತ್ರಗಳನ್ನು 13 ವರ್ಷದ ಬಾಲಕ ಬರೆದಿದ್ದಾನೆ.
Vijaya Karnataka Web Sarthak Tripathi


ಕಳೆದ 2016 ರಿಂದ ನಿರಂತರವಾಗಿ ಪ್ರಧಾನಿ ಮೋದಿಗೆ ಪತ್ರ ಕಳುಹಿಸುತ್ತಿರುವ 8ನೇ ತರಗತಿ ಬಾಲಕ, ತಂದೆಯ ಉದ್ಯೋಗ ನಷ್ಟದಿಂದ ಕುಟುಂಬ ನಿರ್ವಹಣೆ ಕಷ್ಟವಾಗುತ್ತಿರುವ ಬಗ್ಗೆ ವಿವರಣೆ ನೀಡಿದ್ದಾನೆ.

ಉತ್ತರ ಪ್ರದೇಶದ ಸಾರ್ಥಕ್‌ ತ್ರಿಪಾಠಿ ಜೂನ್‌ 7 ರಂದು 37ನೇ ಪತ್ರವನ್ನು ಪ್ರಧಾನಿ ಮೋದಿಗೆ ಕಳುಹಿಸಿದ್ದಾನೆ. ಸಾರ್ಥಕ್‌ ತಂದೆ ಸತ್ಯಜಿತ್‌ ವಿಜಯ್‌ ತ್ರಿಪಾಠಿ ಉತ್ತರ ಪ್ರದೇಶ ಸ್ಟಾಕ್‌ ಎಕ್ಸ್‌ಚೇಂಜ್‌ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದರು. ಆದರೆ ಕೆಲವು ವರ್ಷಗಳ ಹಿಂದೆ ತ್ರಿಪಾಠಿ ಅವರನ್ನು ಒತ್ತಾಯಪೂರ್ವಕವಾಗಿ ಕೆಲಸ ಬಿಡುವಂತೆ ಮಾಡಿದ್ದರು ಎನ್ನಲಾಗಿದೆ.

ನನ್ನ ತಂದೆಗೆ ಸಹಾಯ ಮಾಡುವಂತೆ ಮೋದಿ ಬಾಬಾಜೀ ಅವರಿಗೆ ಕೋರಿದ್ದೇನೆ. ನನ್ನ ತಂದೆಗೆ ಕೆಲಸ ಬಿಡುವಂತೆ ಅಂದು ಕೆಲವರು ಒತ್ತಡ ಹೇರಿದ್ದರು ಎಂದು ಸಾರ್ಥಕ್‌ ಎಎನ್‌ಐಗೆ ಪತ್ರದ ಬಗ್ಗೆ ವಿವರಿಸಿದ್ದಾನೆ. ಬಾಲಕನ 36 ಪತ್ರಗಳಿಂದ ಯಾವುದೇ ಉಪಯೋಗವಾಗುತ್ತದೆ ಎಂಬ ನಿರೀಕ್ಷೆಗಳು ಇದ್ದಂತಿಲ್ಲ. ಆತನ ಕುಟುಂಬಕ್ಕೆ ಬೆದರಿಕೆ ಕರೆಗಳು ಬರುತ್ತಿವೆ ಎಂದು ಎಎನ್‌ಐ ತಿಳಿಸಿದೆ.

ನನ್ನ ಪತ್ರದಿಂದ ತಂದೆಗೆ ಮತ್ತು ಕುಟುಂಬ ಸದಸ್ಯರಿಗೆ ಇರುವ ಕೊಲೆ ಬೆದರಿಕೆ ಇರುವ ವಿಚಾರ ಹೊರ ಜಗತ್ತಿಗೆ ಗೊತ್ತಾಗಲಿದೆ ಎಂದು ನಂಬಿದ್ದೇನೆ ಎಂದು ಸಾರ್ಥಕ್‌ ತಿಳಿಸಿದ್ದಾನೆ.

ಪ್ರಧಾನಿ ನರೇಂದ್ರ ಮೋದಿ ಅವರ ವಿಜಯಕ್ಕೆ ಅಭಿನಂದನೆ ಸಲ್ಲಿಸಿರುವ ಸಾರ್ಥಕ್‌, ಮೋದಿ ಹೇ ತೋ ಮುಮ್ಕಿನ್‌ ಹೇ ಎಂಬ ಘೋಷವಾಕ್ಯವನ್ನು ಕೇಳಿದ್ದೇನೆ. ಹಾಗಾಗಿ ಪಿಎಂ ಮೋದಿ ಅವರಿಗೆ ಬೇಡಿಕೆ ಈಡೇರಿಸುವಂತೆ ಕೋರಿದ್ದೇನೆ ಎಂದು ಸಾರ್ಥಕ್‌ ಪತ್ರದ ಬಗ್ಗೆ ತಿಳಿಸಿದ್ದಾನೆ.

ತಂದೆಗೆ ಆಗಿರುವ ಅನ್ಯಾಯವನ್ನು ಸರಿಪಡಿಸಿ, ಮರಳಿ ಉದ್ಯೋಗ ಸಿಗುವಂತೆ ಆಗಬೇಕು ಎಂಬ ಉದ್ದೇಶದಿಂದ ನಿರಂತರವಾಗಿ ಸಾರ್ಥಕ್‌ ಪತ್ರ ಬರೆಯುತ್ತಿದ್ದಾನೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ