ಆ್ಯಪ್ನಗರ

303 ಬಿಜೆಪಿ ಸಂಸದರಲ್ಲಿ 131 ಹೊಸಬರು

ಬಿಜೆಪಿ ಅಧ್ಯಕ್ಷ ಅಮಿತ್‌ ಶಾ, ರವಿಶಂಕರ್‌ ಪ್ರಸಾದ್‌ ಸೇರಿದಂತೆ ಇಬ್ಬರು ಮಾಜಿ ಕೇಂದ್ರ ಸಚಿವರು; ಸನ್ನಿ ಡಿಯೋಲ್‌, ರವಿ ಕಿಶಾನ್‌, ಗೌತಮ್‌ ಗಂಭೀರ್‌, ಹನ್ಸ್‌ ರಾಜ್‌ ಸೇರಿದಂತೆ ನಟರು, ಕ್ರಿಕೆಟಿಗರು, ಗಾಯಕರೂ ಸಹ ಈ ಪಟ್ಟಿಯಲ್ಲಿದ್ದಾರೆ.

87654322 29 May 2019, 9:30 am
ಹೊಸದಿಲ್ಲಿ: 2019ರ ಸಾರ್ವತ್ರಿಕ ಚುನಾವಣೆ ಮೂಲಕ 17ನೇ ಲೋಕಸಭೆಗೆ ಆಯ್ಕೆಯಾದ 303 ಬಿಜೆಪಿ ಸಂಸದರಲ್ಲಿ ಸುಮಾರು ಅರ್ಧದಷ್ಟು (131) ಇದೇ ಮೊದಲ ಬಾರಿಗೆ ಸಂಸದರಾಗಿ ಆಯ್ಕೆಯಾದವರು!
Vijaya Karnataka Web BJP- Flag


ಬಿಜೆಪಿ ಅಧ್ಯಕ್ಷ ಅಮಿತ್‌ ಶಾ, ರವಿಶಂಕರ್‌ ಪ್ರಸಾದ್‌ ಸೇರಿದಂತೆ ಇಬ್ಬರು ಮಾಜಿ ಕೇಂದ್ರ ಸಚಿವರು; ಸನ್ನಿ ಡಿಯೋಲ್‌, ರವಿ ಕಿಶಾನ್‌, ಗೌತಮ್‌ ಗಂಭೀರ್‌, ಹನ್ಸ್‌ ರಾಜ್‌ ಸೇರಿದಂತೆ ನಟರು, ಕ್ರಿಕೆಟಿಗರು, ಗಾಯಕರೂ ಸಹ ಈ ಪಟ್ಟಿಯಲ್ಲಿದ್ದಾರೆ.

ಮೊದಲ ಬಾರಿಗೆ ಸಂಸತ್‌ ಪ್ರವೇಶಿಸುತ್ತಿರುವ ನಾಯಕರಲ್ಲಿ ಉತ್ತರ ಪ್ರದೇಶದವರು ಗರಿಷ್ಠ ಸಂಖ್ಯೆಯಲ್ಲಿದ್ದಾರೆ. ಒಟ್ಟು 80 ಸ್ಥಾನಗಳ ಪೈಕಿ ಬಿಜೆಪಿ 62 ಸ್ಥಾನಗಳಲ್ಲಿ ಗೆದ್ದಿದ್ದು, ಇವರಲ್ಲಿ 20 ಮಂದಿ ಹೊಸಬರು.

ಉತ್ತರ ಪ್ರದೇಶದ ಬಳಿಕ ಗರಿಷ್ಠ ಸಂಖ್ಯೆಯ ಮೊದಲ ಬಾರಿಯ ಸಂಸದರನ್ನು ಆರಿಸಿದ ರಾಜ್ಯಗಳಲ್ಲಿ ಪಶ್ಚಿಮ ಬಂಗಾಳ ಸ್ಥಾನ ಪಡೆದಿದೆ. ರಾಜ್ಯದ ಒಟ್ಟು 42 ಸ್ಥಾನಗಳ ಪೈಕಿ ಬಿಜೆಪಿ 18 ಸ್ಥಾನಗಳನ್ನು ಗೆದ್ದಿದ್ದು, ಇದರಲ್ಲಿ ಬರೋಬ್ಬರಿ 15 ಮಂದಿ ಮೊದಲ ಬಾರಿ ಸಂಸದರಾಗಿ ಆಯ್ಕೆಯಾದವರು.

ಛತ್ತೀಸ್‌ಗಢದಲ್ಲಿರುವ ಎಲ್ಲಾ 11 ಸ್ಥಾನಗಳಲ್ಲೂ ಹಾಲಿ ಸಂಸದರಿಗೆ ಬಿಜೆಪಿ ಟಿಕೆಟ್‌ ನಿರಾಕರಿಸಿ, ಹೊಸಬರಿಗೆ ಮಣೆ ಹಾಕಿತ್ತು. ಈ ಪೈಕಿ 9 ಕ್ಷೇತ್ರಗಳಲ್ಲಿ ಹೊಸಬರನ್ನು ಗೆಲ್ಲಿಸಿಕೊಳ್ಳುವಲ್ಲಿ ಬಿಜೆಪಿ ಯಶಸ್ವಿಯಾಗಿದೆ.

ಮಧ್ಯಪ್ರದೇಶದ ಭೋಪಾಲ್‌ನಲ್ಲಿ ಕಾಂಗ್ರೆಸ್‌ ಹಿರಿಯ ಮುಖಂಡ ದಿಗ್ವಿಜಯ್‌ ಸಿಂಗ್‌ ಅವರನ್ನು ಮಣಿಸಿದ ಹಿಂದೂ ಫೈರ್‌ಬ್ರಾಂಡ್‌ ನಾಯಕಿ ಪ್ರಜ್ಞಾ ಸಿಂಗ್‌ ಠಾಕೂರ್‌ ಅವರಿಗೂ ಸಂಸತ್‌ ಸದಸ್ಯತ್ವ ಹೊಸದು.

ಕರ್ನಾಟಕದಲ್ಲಿ 8 ಹೊಸಬರು


ಬೆಂಗಳೂರು ದಕ್ಷಿಣ ಕ್ಷೇತ್ರದಿಂದ ಗೆದ್ದ ಬಿಜೆಪಿಯ ಅತಿ ಕಿರಿಯ ಸಂಸದ ತೇಜಸ್ವಿ ಸೂರ್ಯ, ವೈ.ದೇವೇಂದ್ರಪ್ಪ, ಬಿ.ಎನ್‌. ಬಚ್ಚೇಗೌಡ, ಅಣ್ಣಾ ಸಾಹೇಬ್‌ ಜೊಲ್ಲೆ, ಎ. ನಾರಾಯಣಸ್ವಾಮಿ, ಎಸ್‌. ಮುನಿಸ್ವಾಮಿ ಮತ್ತು ರಾಜಾ ಅಮರೇಶ್‌ ನಾಯಕ್‌ ಸೇರಿದಂತೆ ಕರ್ನಾಟಕದ 8 ಮಂದಿ ಇದೇ ಮೊದಲ ಬಾರಿಗೆ ಲೋಕಸಭೆಗೆ ಎಂಟ್ರಿಯಾಗಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ