ಆ್ಯಪ್ನಗರ

ನಾಳೆಯಿಂದ 2 ದಿನ ಏಷ್ಯಾ ಮಾಧ್ಯಮ ಶೃಂಗಸಭೆ

ಮಾಧ್ಯಮ ಕ್ಷೇತ್ರದ ಅವಲೋಕನ ನಡೆಸುವ ನಿಟ್ಟಿನಲ್ಲಿ ಮೇ 10ರಿಂದ ಎರಡು ದಿನಗಳ ಕಾಲ 15ನೇ ಏಷ್ಯಾ ಮಾಧ್ಯಮ ಶೃಂಗಸಭೆ ಹೊಸದಿಲ್ಲಿಯಲ್ಲಿ ನಡೆಯಲಿದೆ.

Vijaya Karnataka 9 May 2018, 7:49 am
ಹೊಸದಿಲ್ಲಿ: ಮಾಧ್ಯಮ ಕ್ಷೇತ್ರದ ಅವಲೋಕನ ನಡೆಸುವ ನಿಟ್ಟಿನಲ್ಲಿ ಮೇ 10ರಿಂದ ಎರಡು ದಿನಗಳ ಕಾಲ 15ನೇ ಏಷ್ಯಾ ಮಾಧ್ಯಮ ಶೃಂಗಸಭೆ ಹೊಸದಿಲ್ಲಿಯಲ್ಲಿ ನಡೆಯಲಿದೆ.
Vijaya Karnataka Web 15th Asia media summit


'ಟೆಲ್ಲಿಂಗ್‌ ಅವರ್‌ ಸ್ಟೋರಿಸ್‌ -ಏಷ್ಯಾ ಅಂಡ್‌ ಮೋರ್‌' ಧ್ಯೇಯ ವಾಕ್ಯದಡಿ ನಡೆಯಲಿರುವ ಈ ಶೃಂಗದಲ್ಲಿ 40 ದೇಶಗಳಿಂದ 200ಕ್ಕೂ ಹೆಚ್ಚು ವಿದೇಶಿ ಗಣ್ಯರು ಹಾಗೂ 100 ಭಾರತೀಯ ಗಣ್ಯರು ಭಾಗವಹಿಸುವ ಸಾಧ್ಯತೆ ಇದೆ. ಇಂಡಿಯನ್‌ ಇನ್ಸಿಟ್ಯೂಟ್‌ ಆಫ್‌ ಮಾಸ್‌ ಕಮ್ಯೂನಿಕೇಷನ್‌ (ಐಐಎಂಸಿ), ಬ್ರಾಡ್‌ಕಾಸ್ಟ್‌ ಎಂಜಿನಿಯರಿಂಗ್‌ ಕನ್ಸಲ್ಟೆಂಟ್ಸ್‌ ಇಂಡಿಯಾ ಲಿಮಿಟೆಡ್‌ (ಬಿಇಸಿಐಎಲ್‌) ಜಂಟಿ ಸಹಭಾಗಿತ್ವದಲ್ಲಿ ಪ್ರಸಾರ ಮತ್ತು ಮಾಹಿತಿ ಸಚಿವಾಲಯ ಶೃಂಗವನ್ನು ಆಯೋಜಿಸಿದೆ.

ಮೇ 10ರಂದು ಉದ್ಘಾಟನಾ ಕಾರ‍್ಯಕ್ರಮದಲ್ಲಿ ವಾರ್ತಾ ಮತ್ತು ಪ್ರಸಾರ ಖಾತೆ ಸಚಿವೆ ಸ್ಮೃತಿ ಇರಾನಿ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ ಎಂದು ಮೂಲಗಳು ಹೇಳಿವೆ. ಮಾಧ್ಯಮ ವಲಯದಲ್ಲಿರುವ ಅವಕಾಶ, ಪರಸ್ಪರ ಸಹಕಾರ ಮತ್ತು ಸವಾಲುಗಳ ಕುರಿತು ವಿವಿಧ ಗೋಷ್ಠಿಗಳು ನಡೆಯಲಿವೆ. ಸಮಾರೋಪ ಕಾರ‍್ಯಕ್ರಮದಲ್ಲಿ ವಿಶ್ವ ಟೆಲಿವಿಷನ್‌ ಪ್ರಶಸ್ತಿಗಳ -2018 ಪ್ರದಾನ ನಡೆಯಲಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ