ಆ್ಯಪ್ನಗರ

ಕೇಂದ್ರದ ಸಚಿವಾಲಯಗಳಿಗೆ 169 ಯುವ ಐಎಎಸ್‌ ಅಧಿಕಾರಿಗಳ ನಿಯೋಜನೆ

ನಿಯಮಗಳ ಅನುಸಾರ ಐಎಎಸ್‌ ಅಧಿಕಾರಿಗಳು ತಮ್ಮ ಕೇಡರ್‌ನ ರಾಜ್ಯಗಳಲ್ಲಿ 9 ವರ್ಷಗಳ ಕಾಲ ಸೇವಾ ಅವಧಿ ಪೂರ್ಣಗೊಳಿಸಿದ ಬಳಿಕವೇ ಕೇಂದ್ರಕ್ಕೆ ನಿಯೋಜನೆಗೊಳ್ಳುವ ಅರ್ಹತೆ ಪಡೆಯುವರು.

PTI 21 Jun 2019, 5:00 am
ಹೊಸದಿಲ್ಲಿ: ಆಡಳಿತದಲ್ಲಿ ಸುಧಾರಣಾ ಕ್ರಮಗಳನ್ನು ಮುಂದುವರಿಸಿರುವ ಪ್ರಧಾನಿ ಮೋದಿ ಸರಕಾರ, ಆಡಳಿತಾತ್ಮಕ ಸೇವೆಗಳಲ್ಲಿ ಚುರುಕುತನ ತರುವ ಉದ್ದೇಶದಿಂದ ಹೊಸದಾಗಿ ನೇಮಕಗೊಂಡಿರುವ 169 ಐಎಎಸ್‌ ಅಧಿಕಾರಿಗಳನ್ನು ಕೇಂದ್ರದ ವಿವಿಧ ಸಚಿವಾಲಯಗಳಿಗೆ ಮೂರು ತಿಂಗಳ ಅವಧಿಗೆ ನಿಯೋಜಿಸಿದೆ. ಕೇಂದ್ರದ ಈ ನಡೆ ಯುವ ಅಧಿಕಾರಿಗಳಲ್ಲಿ ಉತ್ಸಾಹ ತುಂಬಿದೆ.
Vijaya Karnataka Web ias


ನಿಯಮಗಳ ಅನುಸಾರ ಐಎಎಸ್‌ ಅಧಿಕಾರಿಗಳು ತಮ್ಮ ಕೇಡರ್‌ನ ರಾಜ್ಯಗಳಲ್ಲಿ 9 ವರ್ಷಗಳ ಕಾಲ ಸೇವಾ ಅವಧಿ ಪೂರ್ಣಗೊಳಿಸಿದ ಬಳಿಕವೇ ಕೇಂದ್ರಕ್ಕೆ ನಿಯೋಜನೆಗೊಳ್ಳುವ ಅರ್ಹತೆ ಪಡೆಯುವರು. ಆದರೆ ಕೇಂದ್ರ ಸರಕಾರವು ರಾಜ್ಯ ಕೇಡರ್‌ಗೆ ತೆರಳುವ ಮುನ್ನವೇ ಕೇಂದ್ರ ಸರಕಾರದ ವಿವಿಧ ಇಲಾಖೆಗಳಲ್ಲಿ ಸಹಾಯಕ ಕಾರ್ಯದರ್ಶಿಗಳಾಗಿ ಕಾರ್ಯನಿರ್ವಹಿಸುವ ಅವಕಾಶ ಕಲ್ಪಿಸಿದೆ. ಯುವ ಅಧಿಕಾರಿಗಳ ಉತ್ಸಾಹವನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳುವ ಹಾಗೂ ಅವರಿಗೆ ಕೇಂದ್ರದಲ್ಲಿನ ಆಡಳಿತ ವೈಖರಿಯನ್ನು ಪರಿಚಯಿಸುವುದು ಇದರ ಉದ್ದೇಶ ಎನ್ನಲಾಗಿದೆ.

3 ತಿಂಗಳು:
2017ನೇ ಬ್ಯಾಚ್‌ನ 169 ಐಎಎಸ್‌ ಅಧಿಕಾರಿಗಳನ್ನು ಮೂರು ತಿಂಗಳ ಅವಧಿಗೆ ಕೇಂದ್ರ ಸೇವೆಗಳಿಗೆ ನಿಯೋಜಿಸಲಾಗಿದೆ. ಜುಲೈ 1ರಿಂದ ಸೆಪ್ಟೆಂಬರ್‌ 27ರವರೆಗೆ ಸೂಚಿತ ಸಚಿವಾಲಯಗಳಲ್ಲಿ ಸಹಾಯಕ ಕಾರ‍್ಯದರ್ಶಿಗಳಾಗಿ ಸೇವೆ ಸಲ್ಲಿಸುವಂತೆ ಸಿಬ್ಬಂದಿ ಸಚಿವಾಲಯ ಹೊರಡಿಸಿದ ಆದೇಶ ಹೊರಡಿಸಿದೆ.
ಈ ಅಧಿಕಾರಿಗಳು ಈಗಾಗಲೇ ಮಸ್ಸೂರಿಯಲ್ಲಿನ 'ಲಾಲ್‌ ಬಹಾದ್ದೂರ್‌ ಶಾಸ್ತ್ರಿ ನ್ಯಾಷನಲ್‌ ಅಕಾಡೆಮಿ ಆಫ್‌ ಅಡ್ಮಿನಿಸ್ಪ್ರೇಷನ್‌' ಸಂಸ್ಥೆಯಲ್ಲಿ ಎರಡನೇ ಹಂತದ ತರಬೇತಿ ಮುಗಿಸಿದ್ದಾರೆ. ಮೂರು ತಿಂಗಳ ಕೇಂದ್ರ ಸೇವೆ ಸೇರಿದಂತೆ ಪೂರ್ಣಾವಧಿ ತರಬೇತಿ ಬಳಿಕ ಸಂಬಂಧಿತ ರಾಜ್ಯ ಕೇಡರ್‌ಗಳಿಗೆ ಹೋಗಿ ಸೇವೆ ಸಲ್ಲಿಸಲಿದ್ದಾರೆ ಎಂದು ಮೂಲಗಳು ಹೇಳಿವೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ