ಆ್ಯಪ್ನಗರ

17ನೇ ಲೋಕಸಭೆ ಸ್ಪೀಕರ್ ಹುದ್ದೆಗೆ ಕೋಟಾ ಸಂಸದ ಓಮ್ ಬಿರ್ಲಾ ಆಯ್ಕೆ

17ನೇ ಲೋಕಸಭೆಯ ಸ್ಪೀಕರ್ ಹುದ್ದೆಗೆ ಕೋಟಾ ಕ್ಷೇತ್ರದ ಸಂಸದ ಓಮ್ ಬಿರ್ಲಾ ಅವರನ್ನು ಬಿಜೆಪಿ ಆಯ್ಕೆ ಮಾಡಿದೆ. ಇತರ 10 ಪಕ್ಷಗಳು ಅವರ ಉಮೇದ್ವಾರಿಕೆಯನ್ನು ಬೆಂಬಲಿಸಿವೆ. ಹಿಂದಿನ ಲೋಕಸಭೆಗೆ ಸುಮಿತ್ರಾ ಮಹಾಜನ್ ಸ್ಪೀಕರ್ ಆಗಿದ್ದರು.

Times Now 18 Jun 2019, 3:08 pm
ಹೊಸದಿಲ್ಲಿ: ಕೋಟಾ ಕ್ಷೇತ್ರದ ಬಿಜೆಪಿ ಸಂಸದ ಓಮ್ ಬಿರ್ಲಾ 17ನೇ ಲೋಕಸಭೆಯ ಸ್ಪೀಕರ್ ಆಗಿ ಆಯ್ಕೆಯಾಗಿದ್ದಾರೆ.
Vijaya Karnataka Web OM Birla


57 ವರ್ಷದ ಓಮ್ ಬಿರ್ಲಾ ಕೋಟಾ ಲೋಕಸಾಸಭಾ ಕ್ಷೇತ್ರದಿಂದ 2ನೇ ಬಾರಿಗೆ ಚುನಾಯಿತರಾಗಿದ್ದಾರೆ. ಅದಕ್ಕೂ ಮೊದಲು ಕೋಟಾ ದಕ್ಷಿಣ ಅಸೆಂಬ್ಲಿ ಕ್ಷೇತ್ರದಿಂದ ಮೂರು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದರು. 2019ರ ಲೋಕಸಭಾ ಚುನಾವಣೆಯಲ್ಲಿ ಅವರು ಕಾಂಗ್ರೆಸ್ ಪ್ರತಿಸ್ಪರ್ಧಿಯ ಎದುರು 2.79 ಲಕ್ಷ ಮತಗಳ ಅಂತರದಿಂದ ಗೆದ್ದಿದ್ದಾರೆ.

ಲೋಕಸಭೆ ಸ್ಪೀಕರ್ ಹುದ್ದೆಗೆ ಪಿಪಿ ಚೌಧರಿ ಮತ್ತು ಎಸ್‌ಎಸ್‌ ಅಹ್ಲುವಾಲಿಯಾ ಅವರ ಹೆಸರುಗಳೂ ಕೇಳಿಬಂದಿತ್ತು. ಟಿಕಂಗಢ ಸಂಸದ ವೀರೇಂದ್ರ ಕುಮಾರ್ ಅವರನ್ನು ಹಂಗಾಮಿ ಸ್ಪೀಕರ್ ಆಗಿ ನೇಮಿಸಲಾಗಿತ್ತು.


ನ್ಯಾಷನಲ್‌ ಪೀಪಲ್ಸ್ ಪಾರ್ಟಿ, ಮಿಜೋ ನ್ಯಾಷನಲ್ ಫ್ರಂಟ್, ಲೋಕಜನಶಕ್ತಿ ಪಕ್ಷ, ವೈಎಸ್ಸಾರ್‌ಸಿಪಿ, ಜನತಾದಳ (ಯು), ಎಐಎಇಡಿಎಂಕೆ, ಅಪ್ನಾದಳ ಮತ್ತು ಬಿಜು ಜನತಾದಳ ಸೇರಿದಂತೆ 10 ಪಕ್ಷಗಳು ಓಮ್ ಬಿರ್ಲಾ ಅವರ ಉಮೇದ್ವಾರಿಕೆಗೆ ಬೆಂಬಲ ಸೂಚಿಸಿವೆ.

ಆದರೆ ಈ ವಿಷಯದ ಬಗ್ಗೆ ಸ್ವತಃ ಓಮ್ ಬಿರ್ಲಾ ಅವರನ್ನೇ ಪ್ರಶ್ನಿಸಿದಾಗ, 'ನನಗೇನೂ ಮಾಹಿತಿಯಿಲ್ಲ. ನಾನು ಬಿಜೆಪಿಯ ಒಬ್ಬ ಸಾಮಾನ್ಯ ಕಾರ್ಯಕರ್ತ' ಎಂದು ಎಎನ್‌ಐ ಸುದ್ದಿಸಂಸ್ಥೆಗೆ ಅವರು ತಿಳಿಸಿದರು.


ಆದರೆ ಅವರ ಪತ್ನಿ ಅಮಿತಾ 'ಇದು ನಮ್ಮ ಕುಟುಂಬಕ್ಕೆ ಬಹಳ ಸಂತಸ ಮತ್ತು ಹೆಮ್ಮೆಯ ವಿಷಯ. ಸಚಿವ ಸಂಪುಟ ಅವರನ್ನು ಆಯ್ಕೆ ಮಾಡಿರುವುದಕ್ಕೆ ನಾವು ಕೃತಜ್ಞರಾಗಿದ್ದೇವೆ' ಎಂದು ಪ್ರತಿಕ್ರಿಯಿಸಿದ್ದಾರೆ.

ಹಿಂದಿನ ಲೋಕಸಭೆಯಲ್ಲಿ ಬಿಜೆಪಿಯ ಹಿರಿಯ ನಾಯಕಿ ಸುಮಿತ್ರಾ ಮಹಾಜನ್ ಸ್ಪೀಕರ್ ಆಗಿದ್ದರು. ಇಂದೋರ್ ಲೋಕಸಭೆ ಕ್ಷೇತ್ರದ ಸಂಸದರಾಗಿದ್ದ ಅವರು, ಈ ಬಾರಿ ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎಂದು ಘೋಷಿಸಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ