ಆ್ಯಪ್ನಗರ

ಸುಕ್ಮಾ ದಾಳಿ: 11 ನಕ್ಸಲರ ಬಂಧನ

ಕೆಲ ದಿನಗಳ ಹಿಂದೆಯಷ್ಟೇ 25 ಯೋಧರನ್ನು ಕೊಂದು ಅಟ್ಟಹಾಸ ಮೆರೆದಿದ್ದ ನಕ್ಸಲರ ವಿರುದ್ಧ ಸೇನೆ ತಿರುಗಿ ಬಿದ್ದಿದ್ದು, ಸುಕ್ಮಾ ಜಿಲ್ಲೆಯಲ್ಲಿ ಅಡಗಿ ಕುಳಿತಿದ್ದ 11 ನಕ್ಸಲರನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸಿದ್ದಾರೆ.

ಟೈಮ್ಸ್ ಆಫ್ ಇಂಡಿಯಾ 21 May 2017, 12:32 pm
ರಾಯ್‌ಪುರ: ಕೆಲ ದಿನಗಳ ಹಿಂದೆಯಷ್ಟೇ 25 ಯೋಧರನ್ನು ಕೊಂದು ಅಟ್ಟಹಾಸ ಮೆರೆದಿದ್ದ ನಕ್ಸಲರ ವಿರುದ್ಧ ಕಾರ್ಯಾಚರಣೆಗೆ ಇಳಿದಿರುವ ಸೇನೆ, ಸುಕ್ಮಾ ಜಿಲ್ಲೆಯಲ್ಲಿ ಅಡಗಿ ಕುಳಿತಿದ್ದ 11 ನಕ್ಸಲರನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸಿದ್ದಾರೆ.
Vijaya Karnataka Web 18 naxalites arrested in connection with sukma ambush
ಸುಕ್ಮಾ ದಾಳಿ: 11 ನಕ್ಸಲರ ಬಂಧನ


ಕೇಂದ್ರ ಮೀಸಲು ಪಡೆ ಮತ್ತು ಜಿಲ್ಲಾ ಮೀಸಲು ಪಡೆ ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ ಕರಿಗುಂಡಂ ಜಿಲ್ಲೆಯಲ್ಲಿ ಅವಿತಿದ್ದ 18 ಶಂಕಿತ ನಕ್ಸಲರನ್ನು ಬಂಧಿಸಿ ವಿಚಾರಣೆ ನಡೆಸಿರುವುದಾಗಿ ಪೊಲೀಸ್‌ ಅಧಿಕಾರಿ ತಿಳಿಸಿದ್ದಾರೆ.

ಮಾಹಿತಿಗಳ ಪ್ರಕಾರ ಬಂಧಿತರಲ್ಲಿ ಹಲವರ ವಿರುದ್ಧ ಸಾಕಷ್ಟು ಪ್ರಕರಣಗಳಿದ್ದು, ಕೆಲವರ ತಲೆಗೆ ಬಹುಮಾನ ಕೂಡಾ ಘೋಷಿಸಲಾಗಿದೆ. ಘಟನೆ ಕುರಿತು ಹಲವರನ್ನು ವಿಚಾರಣೆ ನಡೆಸಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.

ಎಪ್ರಿಲ್‌ 24ರಂದು ಬುರ್ಕಾಪಾಲ್‌ ಗ್ರಾಮದಲ್ಲಿ ಗಸ್ತಿನಲ್ಲಿದ್ದ ಸಿಪಿಆರ್‌ಎಫ್‌ ಯೋಧರ ಮೇಲೆ ನಕ್ಸಲ್‌ ದಾಳಿ ನಡೆದಿತ್ತು. ಈ ಘಟನೆಯಲ್ಲಿ 25 ಮಂದಿ ಮೃತಪಟ್ಟಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ