ಆ್ಯಪ್ನಗರ

ಪುಲ್ವಾಮಾ ದಾಳಿ ಬಳಿಕ 6 ಜೆಷೆ ಉಗ್ರರು ಸೇರಿದಂತೆ 18 ಭಯೋತ್ಪಾದಕರು ಮಟಾಶ್: ಸೇನೆ

ಮುದಾಸಿರ್‌ ಅಹ್ಮದ್‌ ಖಾನ್‌ ಹತ್ಯೆಯಿಂದ ಜೆಷೆ ಮೊಹಮ್ಮದ್ ಉಗ್ರ ಸಂಘಟನೆಗೆ ಭಾರಿ ಹೊಡೆತ ಬಿದ್ದಿದ್ದೆ ಎಂದು ಕಾಶ್ಮೀರದ ಐಜಿ ಎಸ್.ಪಿ.ಪಾಣಿ ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

TIMESOFINDIA.COM 11 Mar 2019, 5:44 pm
ಹೊಸದಿಲ್ಲಿ: ಪುಲ್ವಾಮಾ ಉಗ್ರ ದಾಳಿ ಬಳಿಕ ನಡೆದ ಸೇನಾ ಕಾರ್ಯಾಚರಣೆಯಲ್ಲಿ ಜೆಷೆ ಮೊಹಮ್ಮದ್ ಸಂಘಟನೆಗೆ ಸೇರಿದ 6 ಉಗ್ರರು ಸೇರಿದಂತೆ ಒಟ್ಟು 18 ಭಯೋತ್ಪಾದಕರನ್ನು ಮಟಾಶ್ ಮಾಡಿದ್ದೇವೆ ಎಂದು ಸೋಮವಾರ ಸೇನೆ ಸ್ಪಷ್ಟಪಡಿಸಿದೆ.
Vijaya Karnataka Web indian army


ಫೆಬ್ರವರಿ 14ರಂದು ನಡೆದ ಪುಲ್ವಾಮಾ ಉಗ್ರ ದಾಳಿಯ ಮಾಸ್ಟರ್ ಮೈಂಡ್ ಮುದಾಸಿರ್‌ ಅಹ್ಮದ್‌ ಖಾನ್‌ ಅಲಿಯಾಸ್‌ ಮೊಹಮ್ಮದ್‌ ಭಾಯ್‌ ಎಂಬ ಉಗ್ರನನ್ನು ಥ್ರಾಲ್ ಎನ್‌ಕೌಂಟರ್‌ನಲ್ಲಿ ಹತ್ಯೆ ಮಾಡಿರುವುದಾಗಿಯೂ ಸೇನೆ ತಿಳಿಸಿದೆ.

ಮುದಾಸಿರ್‌ ಅಹ್ಮದ್‌ ಖಾನ್‌ ಹತ್ಯೆಯಿಂದ ಜೆಷೆ ಮೊಹಮ್ಮದ್ ಉಗ್ರ ಸಂಘಟನೆಗೆ ಭಾರಿ ಹೊಡೆತ ಬಿದ್ದಿದ್ದೆ ಎಂದು ಕಾಶ್ಮೀರದ ಐಜಿ ಎಸ್.ಪಿ.ಪಾಣಿ ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.


ದಕ್ಷಿಣ ಕಾಶ್ಮೀರದ ಪುಲ್ವಾಮಾ ಜಿಲ್ಲೆಯ ಥ್ರಾಲ್ ಪ್ರದೇಶದ ಪಿಂಗ್ಲಿಷ್ ಪ್ರದೇಶದಲ್ಲಿ ಭಾನುವಾರ ಮಧ್ಯರಾತ್ರಿ ನಡೆದ ಎನ್‌ಕೌಂಟರ್‌ನಲ್ಲಿ ಹತ್ಯೆಯಾದ ಮೂವರು ಉಗ್ರರಲ್ಲಿ ಮೊಹಮ್ಮದ್ ಭಾಯ್ (23) ಕೂಡ ಸೇರಿದ್ದಾನೆ ಎಂದು ಪಾಣಿ ತಿಳಿಸಿದ್ದಾರೆ.

ಪ್ರದೇಶದಲ್ಲಿ ಉಗ್ರಗಾಮಿಗಳ ಉಪಸ್ಥಿತಿಯ ಬಗ್ಗೆ ಗುಪ್ತಚರರಿಂಗ ಮಾಹಿತಿ ಪಡೆದ ಭದ್ರತಾ ಪಡೆಗಳು ಶೋಧ ಕಾರ್ಯಾಚರಣೆಯನ್ನು ಆರಂಭಿಸಿದ್ದರು. ಇದರ ಸುಳಿವು ಪಡೆದ ಉಗ್ರರು ಗುಂಡಿನ ದಾಳಿ ನಡೆಸಿದಾಗ ಯೋಧರು ಎನ್‌ಕೌಂಟರ್‌ಗೆ ಕೈ ಹಾಕಿದರು.

ಮೊಹಮ್ಮದ್‌ ಭಾಯ್‌ ಎಂದು ಪುಲ್ವಾಮಾ ಜಿಲ್ಲೆಯ ಪದವೀಧರನಾಗಿದ್ದು ಎಲೆಕ್ಟ್ರಿಷಿಯನ್‌ ಕೆಲಸ ಮಾಡಿಕೊಂಡಿದ್ದ ಈ ಪಾತಕಿಯೇ ದಾಳಿಗೆ ಬಳಸಲಾದ ಮಾರುತಿ ಇಕೋ ಕಾರು ಹಾಗೂ ಭಾರಿ ಪ್ರಮಾಣದ ಆರ್‌ ಡಿಎಕ್ಸ್‌ ಪೂರೈಕೆ ಮಾಡಿದ್ದ ಎಂಬುದನ್ನು ಭದ್ರತಾ ಅಧಿಕಾರಿಗಳ ತಂಡ ಪತ್ತೆ ಮಾಡಿದೆ. 2017ರಲ್ಲಿ ಜೈಷೆ ಉಗ್ರ ಸಂಘಟನೆ ಸೇರಿದ ಅಹ್ಮದ್‌ ಖಾನ್‌ ಕಮಾಂಡರ್‌ ನೂರ್‌ ಮೊಹಮ್ಮದ್‌ ತಂತ್ರೆ ಅಲಿಯಾಸ್‌ ‘ನೂರ್‌ ತ್ರಾಲಿ’ ಜತೆ ಸೇರಿಕೊಂಡು ಹಲವು ಉಗ್ರ ಕೃತ್ಯಗಳನ್ನು ನಡೆಸಿದ್ದ.

ಕಾಶ್ಮೀರ ಕಣಿವೆಯಲ್ಲಿ ಭಯೋತ್ಪಾದಕರ ಪುನರುಜ್ಜೀವನಕ್ಕೆ ನೆರವಾಗಿದ್ದವನೇ ‘ನೂರ್‌ ತ್ರಾಲಿ’ ಎಂದು ನಂಬಲಾಗಿದೆ. ಈತ ಡಿಸೆಂಬರ್ 2017ರಲ್ಲಿ ಹತ್ಯೆಯಾದಾಗ ಈತ ಮನೆಯಿಂದ ನಾಪತ್ತೆಯಾಗಿದ್ದ (ಜನವರಿ 14, 2018).

2018ರಲ್ಲಿ ಲೆಥಪೋರಾದ ಸಿಆರ್‌ಪಿಎಫ್‌ ಶಿಬಿರದ ಮೇಲೆ ನಡೆದ ಉಗ್ರ ದಾಳಿಯಲ್ಲೂ ಈತನ ಕೈವಾಡವಿದೆ ಎಂದು ಅಧಿಕಾರಿಗಳ ತಂಡ ಹೇಳಿದೆ.

ಆತ್ಮಹತ್ಯಾ ಬಾಂಬ್ ದಾಳಿಕೋರ ಆದಿಲ್ ಮತ್ತು ಮೊಹಮ್ಮದ್‌ ಭಾಯ್‌ ಜತೆಗೆ ನಿರಂತರ ಸಂಪರ್ಕದಲ್ಲಿದ್ದ ಎಂದು ತಿಳಿದುಬಂದಿದೆ.

ಫೆ.14ರಂದು ಕಾಶ್ಮೀರದ ಪುಲ್ವಾಮಾದಲ್ಲಿ ಪಾಕ್ ಮೂಲದ ಜೆಷೆ ಮೊಹಮ್ಮದ್ ಭಯೋತ್ಪಾದಕರು ನಡೆಸಿದ್ದ ಆತ್ಮಾಹುತಿ ದಾಳಿಯಲ್ಲಿ 40ಕ್ಕೂ ಅಧಿಕ ಸಿಆರ್‌ಪಿಎಫ್ ಯೋಧರು ಹುತಾತ್ಮರಾಗಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ