ಆ್ಯಪ್ನಗರ

ಯಮುನಾ ನದಿಯಲ್ಲಿ ದೋಣಿ ದುರಂತ: 19 ಸಾವು

ಏಜೆನ್ಸೀಸ್‌ ಬಾಗ್‌ಪತ್‌ ಉತ್ತರ ಪ್ರದೇಶದ ಬಾಗ್‌ಪತ್‌ ಜಿಲ್ಲೆಯಲ್ಲಿ ಉಕ್ಕಿ ಹರಿಯುತ್ತಿರುವ ಯಮುನಾ ನದಿಯಲ್ಲಿ ಪ್ರಯಾಣಿರಿಂದ ತುಂಬಿ ತುಳುಕುತ್ತಿದ್ದ ದೋಣಿ ಮುಗುಚಿ 19 ಜನ ...

Agencies 15 Sep 2017, 8:00 am

ಬಾಗ್‌ಪತ್‌: ಉತ್ತರ ಪ್ರದೇಶದ ಬಾಗ್‌ಪತ್‌ ಜಿಲ್ಲೆಯಲ್ಲಿ ಉಕ್ಕಿ ಹರಿಯುತ್ತಿರುವ ಯಮುನಾ ನದಿಯಲ್ಲಿ ಪ್ರಯಾಣಿರಿಂದ ತುಂಬಿ ತುಳುಕುತ್ತಿದ್ದ ದೋಣಿ ಮುಗುಚಿ 19 ಜನ ಮೃತಪಟಿದ್ದು ಹಲವರು ಕಾಣೆಯಾಗಿದ್ದಾರೆ.

ದೋಣಿಯಲ್ಲಿ 60 ಜನರು ಪ್ರಯಾಣಿಸುತ್ತಿದ್ದು, 19 ಜನ ಮೃತಪಟ್ಟಿದ್ದಾರೆ. 15 ಜನರನ್ನು ರಕ್ಷಿಸಲಾಗಿದ್ದು, 20 ಮಂದಿ ಈಜಿ ದಡ ಸೇರಿದ್ದಾರೆ ಎಂದು ಜಿಲ್ಲಾಧಿಕಾರಿ ಭವಾನಿ ಸಿಂಗ್‌ ಹೇಳಿದ್ದಾರೆ.

ಪ್ರತ್ಯಕ್ಷದರ್ಶಿಗಳ ಪ್ರಕಾರ 22 ಜನ ಮೃತಪಟ್ಟಿದ್ದಾರೆ ಎಂದು ಅಂದಾಜಿಸಲಾಗಿತ್ತು. ಬಳಿಕ ಸತ್ತವರು 19 ಎಂಬುದು ಖಚಿತವಾಗಿದೆ. ಕಾಣೆಯಾದವರಿಗಾಗಿ ತೀವ್ರ ಹುಡುಕಾಟ ನಡೆಯುತ್ತಿದೆ. ''ದೋಣಿಯಲ್ಲಿ ಅದರ ಸಾಮರ್ಥ್ಯ‌ಕ್ಕಿಂತ ಹೆಚ್ಚು ಜನ ಪ್ರಯಾಣಿಸುತ್ತಿದ್ದರು. ಬಹುತೇಕ ಮಹಿಳೆಯರೇ ಇದ್ದ ದೋಣಿ ನದಿಯ ಮಧ್ಯಭಾಗಕ್ಕೆ ಬರುತ್ತಿದ್ದಂತೆ ಮುಳುಗಿತು,'' ಎಂದು ಸಿಂಗ್‌ ವಿವರಿಸಿದ್ದಾರೆ. ಘಟನೆಯಿಂದ ಆಕ್ರೋಶಗೊಂಡ ಸ್ಥಳೀಯರು 2 ವಾಹನಗಳನ್ನು ಸುಟ್ಟಿದ್ದು, ಸದ್ಯ ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದಿದ್ದಾರೆ.

ದುರಂತಕ್ಕೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಸಂತಾಪ ಸೂಚಿಸಿದ್ದು, ಮೃತರಿಗೆ 2 ಲಕ್ಷ ಪರಿಹಾರ ಘೋಷಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ