ಆ್ಯಪ್ನಗರ

1984 ಸಿಖ್‌ ವಿರೋಧಿ ದಂಗೆ: ಇಂದು ದಿಲ್ಲಿ ಹೈಕೋರ್ಟ್‌ ತೀರ್ಪು ಸಾಧ್ಯತೆ

ಸಿಖ್‌ ವಿರೋಧಿ ದಂಗೆ ಸಂತ್ರಸ್ತರು, ಅಪರಾಧಿಗಳು ಹಾಗೂ ಸಿಬಿಐ ವತಿಯಿಂದ ನ್ಯಾಯಾಲಯಕ್ಕೆ ಪ್ರತ್ಯೇಕವಾಗಿ ಸಲ್ಲಿಕೆಯಾಗಿದ್ದ ಅರ್ಜಿಗಳ ವಿಚಾರಣೆಯನ್ನು ಕಳೆದ ಅ.29 ರಂದು ಪೂರ್ಣಗೊಳಿಸಿದ ನ್ಯಾಯಮೂರ್ತಿಗಳಾದ ಎಸ್‌. ಮುರಳೀಧರ್‌ ಹಾಗೂ ವಿನೋದ್‌ ಗೋಯಲ್‌ ಅವರನ್ನೊಳಗೊಂಡ ಪೀಠ ತೀರ್ಪನ್ನು ಡಿ.17ಕ್ಕೆ ಕಾಯ್ದಿರಿಸಿತ್ತು.

Vijaya Karnataka 17 Dec 2018, 5:00 am
ಹೊಸದಿಲ್ಲಿ: 1984ರಲ್ಲಿ ನಡೆದಿದ್ದ ಸಿಖ್‌ ವಿರೋಧಿ ದಂಗೆಯ ಆರೋಪಿ, ಕಾಂಗ್ರೆಸ್‌ ನಾಯಕ ಸಜ್ಜನ್‌ ಕುಮಾರ್‌ ಅವರನ್ನು ಖುಲಾಸೆಗೊಳಿಸಿದ ಅಧೀನ ನ್ಯಾಯಾಲಯದ ತೀರ್ಪು ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿ ವಿಚಾರಣೆ ತೀರ್ಪನ್ನು ದಿಲ್ಲಿ ಹೈಕೋರ್ಟ್‌ ಸೋಮವಾರ ಪ್ರಕಟಿಸುವ ಸಾಧ್ಯತೆ ಇದೆ.
Vijaya Karnataka Web sajjankumar

ಸಿಖ್‌ ವಿರೋಧಿ ದಂಗೆ ಸಂತ್ರಸ್ತರು, ಅಪರಾಧಿಗಳು ಹಾಗೂ ಸಿಬಿಐ ವತಿಯಿಂದ ನ್ಯಾಯಾಲಯಕ್ಕೆ ಪ್ರತ್ಯೇಕವಾಗಿ ಸಲ್ಲಿಕೆಯಾಗಿದ್ದ ಅರ್ಜಿಗಳ ವಿಚಾರಣೆಯನ್ನು ಕಳೆದ ಅ.29 ರಂದು ಪೂರ್ಣಗೊಳಿಸಿದ ನ್ಯಾಯಮೂರ್ತಿಗಳಾದ ಎಸ್‌. ಮುರಳೀಧರ್‌ ಹಾಗೂ ವಿನೋದ್‌ ಗೋಯಲ್‌ ಅವರನ್ನೊಳಗೊಂಡ ಪೀಠ ತೀರ್ಪನ್ನು ಡಿ.17ಕ್ಕೆ ಕಾಯ್ದಿರಿಸಿತ್ತು.

ಇಂದಿರಾಗಾಂಧಿ ಹತ್ಯೆ ನಂತರ 1984 ನ.1ರಂದು ದಿಲ್ಲಿಯ ಕಂಟೋನ್ಮೆಂಟ್‌ ಬಳಿಕ ರಾಜ್‌ ನಗರದಲ್ಲಿ ಒಂದೇ ಕುಟುಂಬದ ಐವರ ಹತ್ಯೆಗೆ ಸಂಬಂಧಿಸಿದ ಪ್ರಕರಣದಲ್ಲಿ ಸಜ್ಜನ್‌ ಕುಮಾರ್‌ ಅವರನ್ನು ವಿಚಾರಣಾ ನ್ಯಾಯಾಲಯ ಖುಲಾಸೆಗೊಳಿಸಿತ್ತು. ಮಾಜಿ ಕಾಂಗ್ರೆಸ್‌ ಕೌನ್ಸಿಲರ್‌ ಬಲ್ವನ್‌ ಖೊಕಾರ್‌, ನಿವೃತ್ತ ನೌಕದಳ ಸಿಬ್ಬಂದಿ ಭಾಗ್ಮಲ್‌, ಗಿರ್‌ಧಾಇರಿ ಲಾಲ್‌ ಹಾಗೂ ಮತ್ತಿಬ್ಬರನ್ನು ದೋಷಿಗಳೆಂದು ವಿಚಾರಣಾ ನ್ಯಾಯಾಲಯ ತೀರ್ಪು ನೀಡಿತ್ತು. ಖೊಕಾರ್‌, ಭಾಗ್ಮಲ್‌ ಮತ್ತು ಲಾಲ್‌ಗೆ ಜೀವಾವಧಿ ಶಿಕ್ಷೆ ವಿಧಿಸಿದರೆ, ಮಾಜಿ ಶಾಸಕ ಮಹೇಂದ್ರ ಯಾದವ್‌ ಮತ್ತು ಕಿಶನ್‌ ಕೊಕಾರ್‌ ಅವರಿಗೆ ಮೂರು ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿತ್ತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ