ಆ್ಯಪ್ನಗರ

ಏಳು ರೋಹಿಂಗ್ಯಾ ಮುಸ್ಲಿಮರ ಗಡಿಪಾರು

ಅಸ್ಸಾಂನಲ್ಲಿ ಅಕ್ರಮವಾಗಿ ನೆಲೆಸಿದ್ದ ಏಳು ರೋಹಿಂಗ್ಯಾಗಳನ್ನು ಕೇಂದ್ರ ಸರಕಾರ ಇಂದು ಗಡಿಪಾರು ಮಾಡಲಿದೆ. ರೋಹಿಂಗ್ಯಾ ವಲಸಿಗರನ್ನು ಅವರ ತವರು ದೇಶ ಮ್ಯಾನ್ಮಾರ್‌ಗೆ ಕಳುಹಿಸುತ್ತಿರುವುದು ಇದೇ ಮೊದಲು.

Vijaya Karnataka 4 Oct 2018, 10:35 am
ಹೊಸದಿಲ್ಲಿ: ರೋಹಿಂಗ್ಯಾ ಮುಸ್ಲಿಮರ ಅಕ್ರಮ ವಲಸೆ ವಿಚಾರ ರಾಜಕೀಯ ಗುದ್ದಾಟಕ್ಕೆ ಕಾರಣವಾಗಿರುವ ಹೊತ್ತಿನಲ್ಲಿ ಕೇಂದ್ರ ಸರಕಾರ ಅಸ್ಸಾಂನಲ್ಲಿ ಅಕ್ರಮವಾಗಿ ನೆಲೆಸಿರುವ ಏಳು ರೋಹಿಂಗ್ಯಾಗಳನ್ನು ಇಂದು ಗಡಿಪಾರು ಮಾಡಲಿದೆ. ರೋಹಿಂಗ್ಯಾ ವಲಸಿಗರನ್ನು ಅವರ ತವರು ದೇಶ ಮ್ಯಾನ್ಮಾರ್‌ಗೆ ಕಳುಹಿಸುತ್ತಿರುವುದು ಇದೇ ಮೊದಲು.
Vijaya Karnataka Web rohingya


ಅಸ್ಸಾಂನಲ್ಲಿ ಅಕ್ರಮವಾಗಿ ನೆಲೆಸಿದ್ದ ಏಳು ರೋಹಿಂಗ್ಯಾಗಳನ್ನು ಸ್ಥಳೀಯ ಪೊಲೀಸರು 2012ರಲ್ಲಿ ಬಂಧಿಸಿದ್ದರು. ಅಂದಿನಿಂದ ಸಿಲ್ಚಾರ್‌ ಜಿಲ್ಲೆಯ ಕೇಂದ್ರ ಕಾರಾಗೃಹದಲ್ಲಿರುವ ಈ ಏಳೂ ಜನರನ್ನು ಮಣಿಪುರದ ಗಡಿ ಠಾಣೆಯಲ್ಲಿ ಗುರುವಾರ ಮ್ಯಾನ್ಮಾರ್‌ ಅಧಿಕಾರಿಗಳಿಗೆ ಹಸ್ತಾಂತರಿಸಲಾಗುತ್ತದೆ. ವಲಸಿಗರನ್ನು ಗುರುತಿಸಲು ಮ್ಯಾನ್ಮಾರ್‌ ರಾಯಭಾರ ಕಚೇರಿ ಅಧಿಕಾರಿಗಳಿಗೆ ಅವಕಾಶ ನೀಡಲಾಗಿದೆ ಎಂದು ಕೇಂದ್ರ ಗೃಹ ಸಚಿವಾಲಯ ಹೇಳಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ