ಆ್ಯಪ್ನಗರ

ತೆಲಂಗಾಣ ಎನ್‌ಕೌಂಟರ್‌ ಪ್ರಕರಣ: ಪೊಲೀಸರ ವಿರುದ್ಧ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ

ಅತ್ಯಾಚಾರ - ಕೊಲೆ ಪ್ರಕರಣದ ಆರೋಪಿಗಳನ್ನು ಎನ್‌ಕೌಂಟರ್‌ ಮಾಡಿದ ತೆಲಂಗಾಣ ಪೊಲೀಸರ ವಿರುದ್ಧ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ದಾಖಲಾಗಿದೆ. ಪೊಲೀಸರ ವಿರುದ್ಧ ಎಫ್‌ಐಆರ್‌ ದಾಖಲಾಗಬೇಕು, ಪ್ರಕರಣವನ್ನು ಸುಪ್ರೀಂ ಕೋರ್ಟ್‌ ಸುಪರ್ದಿಯಲ್ಲಿ ವಿಶೇಷ ತನಿಖಾ ದಳ ತನಿಖೆ ನಡೆಸಬೇಕೆಂದು ಅರ್ಜಿ ಸಲ್ಲಿಸಲಾಗಿದೆ.

Times Now 7 Dec 2019, 1:07 pm
ಹೊಸದಿಲ್ಲಿ: ಒಂದೆಡೆ ದೇಶಾದ್ಯಂತ ತೆಲಂಗಾಣ ಪೋಲಿಸರನ್ನು ಕೊಂಡಾಡುತ್ತಿದ್ದರೆ, ಅವರ ವಿರುದ್ಧ ಎಫ್‌ಐಆರ್‌ ದಾಖಲಿಸಿ ತನಿಖೆ ನಡೆಸುವಂತೆ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ದಾಖಲಾಗಿದೆ.
Vijaya Karnataka Web telangana


ದಿಶಾ ಅತ್ಯಾಚಾರ ಆರೋಪಿಗಳ ಎನ್‌ಕೌಂಟರ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ತೆಲಂಗಾಣ ಪೊಲೀಸರ ವಿರುದ್ಧ ಎಫ್‌ಐಆರ್‌ ದಾಖಲಿಸುವಂತೆ ಕೋರಿ ವಕೀಲರಾದ ಜಿಎಸ್‌ ಮಣಿ ಹಾಗೂ ಪ್ರದೀಪ್‌ ಕುಮಾರ್‌ ಯಾದವ್‌ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.
ಶುಕ್ರವಾರ ಮುಂಜಾನೆ ಸಾಮೂಹಿಕ ಅತ್ಯಾಚಾರ ಪ್ರಕರಣದ ಸ್ಥಳ ಮಹಜರುಪಡಿಸುವ ವೇಳೆ ಆರೋಪಿಗಳ ಜತೆ ನಡೆದ ಗುಂಡಿನ ಚಕಮಕಿಯಲ್ಲಿ ನಾಲ್ವರು ಆರೋಪಿಗಳು ಹತರಾಗಿದ್ದರು.

2014ರಲ್ಲಿ ನಡೆದ ಪೊಲೀಸ್‌ ಎನ್‌ಕೌಂಟರ್‌ ಬಳಿಕ ಸುಪ್ರೀಂ ಕೋರ್ಟ್‌ ಎನ್‌ಕೌಂಟರ್‌ನಂತಹ ಪ್ರಕರಣಗಳಲ್ಲಿ ಸನ್ನಿವೇಶ 16 ಅಂಶಗಳನ್ನು ಒಳಗೊಂಡಿರುವುದು ಕಡ್ಡಾಯವಾಗಿರುತ್ತದೆ. ಇಂತಹ ಪ್ರಕರಣದಲ್ಲಿ ಪೊಲೀಸರ ಕಾರ್ಯವನ್ನು ಸಮರ್ಥಿಸಲು ಈ ಅಂಶಗಳೇ ಪ್ರಮುಖವಾಗಿರುತ್ತದೆ. ಈ ಅಂಶಗಳ ಆಧಾರದಲ್ಲಿ ತೆಲಂಗಾಣ ಪೊಲೀಸರ ವಿರುದ್ಧ ಎಫ್‌ಐಆರ್‌ ದಾಖಲಿಸುವಂತೆ ಅರ್ಜಿ ಹಾಕಲಾಗಿದೆ. ಅಧಿಕಾರಿಗಳ ವಿರುದ್ಧ ಸುಪ್ರೀಂ ಕೋರ್ಟ್‌ ಸುಪರ್ದಿಯಲ್ಲಿ ಎಸ್‌ಐಟಿ ರಚಿಸಿ, ತನಿಖೆ ನಡೆಸುವಂತೆ ಕೋರಿ ವಕೀಲ ಎಂ ಎಲ್‌ ಶರ್ಮಾ ಅರ್ಜಿ ಸಲ್ಲಿಸಿದ್ದಾರೆ. ಕಾನೂನಿನ ಹೆಸರಿನಲ್ಲಿ ಎನ್‌ಕೌಂಟರ್‌ ನಡೆಸುವುದನ್ನು ಬೆಂಬಲಿಸಿ ದಿಲ್ಲಿ ಮಹಿಳಾ ಆಯೋಗದ ಮುಖ್ಯಸ್ಥೆ ಮಲಿವಾಲ್‌ ಹಾಗೂ ರಾಜ್ಯಸಭಾ ಸದಸ್ಯೆ ಜಯಾ ಭಚ್ಚನ್‌ ಅವರ ಹೇಳಿಕೆ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.

ಡಿ.9ರವರೆಗೆ ಶವಗಳನ್ನು ಸಂರಕ್ಷಿಸಿ: ತೆಲಂಗಾಣ ಹೈಕೋರ್ಟ್‌

ಮಾನವ ಹಕ್ಕುಗಳ ಆಯೋಗ ಆಸ್ಪತ್ರೆಗೆ ಭೇಟಿ
ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ಸದಸ್ಯರು ಶನಿವಾರ ಬೆಳಗ್ಗೆ ಆರೋಪಿಗಳ ಮೃತ ದೇಹ ಇರುವ ಹೈದರಾಬಾದ್‌ ಆಸ್ಪತ್ರೆಗೆ ತಲುಪಿದ್ದಾರೆ. ಆರೋಪಿಗಳ ದೇಹದ ಮರಣೋತ್ತರ ಪರೀಕ್ಷೆಯನ್ನು ತೆಲಂಗಾಣ, ಆಂಧ್ರ ಪ್ರದೇಶದಲ್ಲಿ ನಡೆಸಬಾರದು. ಇದರಿಂದ ಸತ್ಯ ಮರೆಯಾಗುತ್ತದೆ ಎಂದು ಸಮಾಜಿಕ ಕಾರ್ಯಕರ್ತರು ಹೈಕೋರ್ಟ್‌ಗೆ ಮನವಿ ಮಾಡಿದ್ದರು. ಶುಕ್ರವಾರ ಮೃತದೇಹವನ್ನು ಡಿ.9ರ ವರೆಗೆ ಸಂರಕ್ಷಿಸಲು ಸೂಚನೆ ನೀಡಿತ್ತು.

ದುಷ್ಕರ್ಮಿಗಳನ್ನು ಬಿಡಬೇಡಿ, ಗಲ್ಲಿಗೇರಿಸಿ: ಉನ್ನಾವ್‌ ರೇಪ್‌ ಸಂತ್ರಸ್ತೆ ಕೊನೆಯಾಸೆ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ