ಆ್ಯಪ್ನಗರ

ಹಿಂದೂ ಧರ್ಮಕ್ಕೆ ಮರಳಿದ 200 ಆದಿವಾಸಿ ಕುಟುಂಬಗಳು

200 ಕುಟುಂಬಗಳ 700 ಜನರು ಕಂಠಿ ಮಾಲೆ ಧರಿಸಿ ಮಾತೃ ಧರ್ಮಕ್ಕೆ ಮರಳಿದರು ಎಂದು ಹಿಂದೂ ಧರ್ಮ ಸಮ್ಮೇಳನವನ್ನು ಆಯೋಜಿಸಿದ್ದ ಕಪಿಲ್ ಸ್ವಾಮಿ ಹೇಳಿದ್ದಾರೆ.

TIMESOFINDIA.COM 28 Dec 2018, 12:16 pm
ಸೂರತ್: ವಲ್ಸಾದ್ ಜಿಲ್ಲೆಯ ಕಪ್ರಾಡಾ ತಾಲೂಕಿನ ಬಿಲಿಯಾ-ಅಸ್ಲೋನಾ ಗ್ರಾಮದಲ್ಲಿ ಕನಿಷ್ಠ 200 ಕ್ರಿಶ್ಚಿಯನ್ ಬುಡಕಟ್ಟು ಕುಟುಂಬಗಳು ಹಿಂದೂ ಧರ್ಮಕ್ಕೆ ಮರು ಮತಾಂತರಗೊಂಡಿವೆ. ಸ್ವಾಮಿನಾರಾಯಣ ಜ್ಞಾನಪೀಠ ಆಯೋಜಿಸಿದ್ದ ಹಿಂದೂ ಧರ್ಮ ಜಾಗರಣ ಸಮ್ಮೇಳನದಲ್ಲಿ ಅವರನ್ನು ಮಾತೃಧರ್ಮಕ್ಕೆ ಮರಳಿ ಕರೆತರಲಾಯಿತು.
Vijaya Karnataka Web Hindu


ನನ್ನ ಬೆಂಬಲಿಗರ ಜತೆ ಕಪ್ರಾಡಾದ ಆದಿವಾಸಿ ಪ್ರದೇಶದಲ್ಲಿ ಹಿಂದೂ ಧರ್ಮ ರಕ್ಷಿಸುವ ಕೆಲಸ ಮಾಡುತ್ತಿದ್ದೇನೆ. ಪೂಜೆ ಆಯೋಜಿಸಿ ಘರ್ ವಾಪಸಿ ಕೈಗೊಂಡೆವು. 200 ಕುಟುಂಬಗಳ 700 ಜನರು ಕಂಠಿ ಮಾಲೆ ಧರಿಸಿ ಮಾತೃ ಧರ್ಮಕ್ಕೆ ಮರಳಿದರು ಎಂದು ಹಿಂದೂ ಧರ್ಮ ಸಮ್ಮೇಳನವನ್ನು ಆಯೋಜಿಸಿದ್ದ ಕಪಿಲ್ ಸ್ವಾಮಿ ಹೇಳಿದ್ದಾರೆ.

ನಮ್ಮ ಸಹೋದರ ಸಹೋದರಿಯರಿಗೆ ಹನುಮಾನ ಮೂರ್ತಿಯನ್ನು ನೀಡಿದ್ದೇವೆ. ಅವರು ತಮ್ಮ ತಮ್ಮ ಮನೆಗಳಲ್ಲಿ ಅದನ್ನಿಟ್ಟು ಪೂಜಿಸುತ್ತಾರೆ. ಅವರ ಗ್ರಾಮದಲ್ಲಿ ಒಂದು ದೇವಸ್ಥಾನವನ್ನು ಸಹ ಕಟ್ಟಲಿದ್ದೇವೆ. ಕಳೆದ 2 ದಶಕಗಳಲ್ಲಿ ಈ ಪ್ರದೇಶದಲ್ಲಿ ಸುಮಾರು 40,000 ಆದಿವಾಸಿಗಳು ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಂಡಿದ್ದರು. ಎಲ್ಲರನ್ನು ಮರಳಿ ಮಾತೃ ಧರ್ಮಕ್ಕೆ ಕರೆತರುವ ಕೆಲಸವನ್ನು ನಾವು ಕೈಗೆತ್ತಿಕೊಂಡಿದ್ದೇವೆ. ಅಮೆರಿಕಾದಲ್ಲಿ ನೆಲೆಸಿರುವ ಕೆಲವು ಆನಿವಾಸಿ ಭಾರತೀಯರು ಧಾರ್ಮಿಕ ಚಟುವಟಿಕೆಗಳಿಗೆ ನಮಗೆ ಸಹಾಯ ಮಾಡುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ.

ಆದಿವಾಸಿ ಸಮುದಾಯಕ್ಕೆ ಇದೊಂದು ಉತ್ತಮ ಉಪಕ್ರಮ. ಅಮೆರಿಕಾದಲ್ಲರುವ ನಮ್ಮ ಸಮುದಾಯ ಈ ಕೆಲಸಕ್ಕೆ ಬೆಂಬಲ ನೀಡುತ್ತಿದೆ ಎಂದು ಅಮೆರಿಕಾ ನಿವಾಸಿ ಅಮಿತ್ ಪಟೇಲ್ ಹೇಳುತ್ತಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ